ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾರಯಣಭಟ್ಟ, ೩೬ ಡ ನಿ ವನಿತ್ತನು. ಇವನು ಕೇಳಿಕೊಂಡಂತೆ (ಪ್ರಕ್ರಿಯಾಸರ್ವಸ್ವ' ಎಂಬ ಮಹತ್ತರ ವ್ಯಾಕರಣಗ್ರಂಥವನ್ನು ಬರೆದುದಾಗಿ ಹೇಳಿದೆ. ಅಲ್ಲದೆ ಭಟ್ಕಜೀದೀಕ್ಷಿತನು ಇದನ್ನು ಕೊಂಡಾಡಿರುವುದಾಗಿಯೂ ಹೇಳಿದೆ | ಕಾಲ:-ದೇವನಾರಾಯಣನು ಕ್ರಿ. ಶ. ೧೬ನೆಯ ಶತಮಾನದವನು. 'ನಾರಾಯಣೀಯಂ' ಎ೦೭ ಗ್ರಂಥವನ್ನು ಬರೆದು ಮುಗಿಸಿದುದು ಕ್ರಿ. ಶ. ೧೫೯೦ ರಲ್ಲಿ, ಇದರಿಂದ ಇವನು ಕ್ರಿ. ಶ ೧೬ನೆಯ ಶತಮಾನದ ಉತ್ತರಾರ್ಧದವನೆಂಬುದು ಸ್ಪಷ್ಟವಾಗುತ್ತದೆ. ಗ್ರಂಥಗಳು:- ೧. ನಾರಾಯಣೀಯಂ ೨. ಮಾನಮೇಯೋದಯಃ ೩. ಪ್ರಕ್ರಿಯಾಸರ್ವಸ್ವಂ ೪, ಧಾತುಕಾವ್ಯಂ ೫, ಅಷ್ಟಮಾಚಂಪೂಕಾವ್ಯಂ ೬, ಕೈಲಾಸಶೈಲವರ್ಣನಾ ೭. ಅಹಲ್ಯಾಶಾಪಮೋಕ್ಷಃ ೮. ಪುಷ್ಪಟ್ಟೇದ, ಇತ್ಯಮರುಕ ಶ್ಲೋಕವಾಖ್ಯಾನಂ ೯. ಕೌಂತೆ'ಯಾಷ್ಟಕಂ ೧೦. ಶೂರ್ಪಣಖಾಪ್ರಲಾಪಃ C೧ ರಾಮಕಥಾ ೧೨, ದೂತವಾಕ್ಯ ಪ್ರಬಂಧಃ ೧೩. ನಾಳಾಯನೀಚರಿತಂ ೧೪. ನೃಗವೆ ಕಪಬಂಧಃ ೧೫, ರಾಜಸೂಯಪ್ರಬಂಧಃ ೧೬, ಸುಭದ್ರಾಹರಣ ಪ್ರಬಂಧಃ ೧೭, ಸ್ವಾಹಾಸುಧಾಕರಂ ೧೮. ಕೋಟಯವಿರಹಃ ಸಂಗೀತಕೇತುಶೃಂಗಾರಲೀಲಾಚರಿತಂ. ನಾರಾಯಣೀಯಂ;-ಇದು ಸ್ತುತಿಪರ ಗ್ರಂಥವೆನ್ನುವುದಾದರೂ ಕಾವ್ಯ ದೃಷ್ಟಿಯಿಂದ ಮಹಾಕಾವ್ಯವೆನ್ನ ಬೇಕಾಗುತ್ತದೆ. ಮಹಾಕಾವ್ಯಲಕ್ಷಣಗಳೆಲ್ಲವೂ ಇದರಲ್ಲಿ ಸಮಾವೇಶಗೊಂಡಿವೆ. ಶ್ರೀಮದ್ಭಾಗವತ ಕಥೆಯನ್ನು ಸಂಕ್ಷೇಪಿಸಿ ಪ್ರತಿ ಹತ್ತು ಶ್ಲೋಕಗಳಿಗೆ ಒಂದು ದಶಕವೆಂದು ಹೇಳಿ ಅಂತಹ ನೂರು ದಶಕಗಳನ್ನು