ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೮ ಸಂಸ್ಕೃತಕವಿಚರಿತೆ ಬರೆದಿರುವನು. ಒಟ್ಟು ೧೦೩೬ ಶ್ಲೋಕಗಳಿರುವುವು. ಇವನಿಗೆ ವಾತರೋಗ ಉಂಟಾಗಲು ಕಡುನೊಂದು ತನ್ನ ಕುಲದೇವನಾದ ನಾರಾಯಣನನ್ನು ಪ್ರಾರ್ಥಿಸಿ ಅದರಂತೆ ಗುಣವಾದನೆಂದೂ ಅದೇ ನೂರು ದಶಕಗಳನುಸ್ರನಾರಾಯಣೀಯ ಗ್ರಂಥವೆಂದೂ ಕಥೆಯು ಇದೆ. ಈ ಕಡೆ ಭಾಗವತವು ಹೇಗೆ ಸರ್ವಾದರಣೀಯವೋ ಹಾಗೆ, ಈ ನಾರಾಯಣೀಯ ಗ್ರಂಥವು ಕೆರಳಿಯರಿಂದ ಮಾನ್ಯವಾಗಿದೆ. ಇದಕ್ಕೆ ದೇಶಮಂಗಲವಾರ್ಯ ಕೃತ ಭಕ್ತಿಪ್ರಿಯಾ' ಎಂಬ ವ್ಯಾಖಾನವು ಇರುವುದು. ಕಾರುಣ್ಯಾತ್ ಕಾಮಮನಂ ದದತಿ ಖಲು ಪರೆ ಸ್ನಾತ್ಮದ ವಿಶೇಷಾ ವೈಶ್ಚರ್ಯಾದೀಶಳೇ ನೈ ಜಗತಿ ಪರಜ ನೇ ಸ್ನಾತ್ಮ ನೋsಪೀಶ್ವರಂ ಆಯುಚ್ಛರಾರಮಂತಿ ಪ್ರತಿಪದವುಧುರೇ ಚೇತನಾಃ ಸೀತಭಾಗ ಸ೦ ಚಾತ್ಮಾರಾಮ ಏವೇತ್ಯ ತುಲಗುಣಸುಗುಣಾಧಾರ ! 'ರೇ ! ನವಸ್ತ|| ದಶಕ ೧೬-೧೯. ಎಲೈ ! ಕೃಷ್ಣ ಪರಮಾತ್ಮನೆ ! ಬ್ರಹ್ಮಾದಿ ದೇವತೆಗು ಮೋಕ್ಷವನ್ನು ಬಿಟ್ಟು ಬೇರೆ ಯಾವ ವರಗಳನ್ನಾದರೂ ಕೊಡಬಲ್ಲರು. ನಿ?ನು ಮೋಕ್ಷವನ್ನೂ ಕೊಡುವವ ನಾಗಿರು, ಬ್ರಹ್ಮಾದಿಗಳು ಚರಾಚರವಸ್ತುಗಳಲ್ಲಿ ಮಾತ್ರ ನಿಗ್ರಹಾನುಗ್ರಹ ಶಕ್ತಿ ಯುಳ್ಳವರಾಗಿರುವರು. ನಿ?ನಾದರೋ ಅಂತಹ ಬ್ರಹ್ಮನಿಗೂ ಈಶ್ವರನಾಗಿರುತ್ತಿ ಎಂದರೆ ನಿನ್ನನ್ನು ಜಿ?ವರೂಪದಿಂದ ಸಂಸಾರಾರ್ಣವದಲ್ಲಿಟ್ಟು ನಿಗ್ರಹಿಸುವುದಕ್ಕೂ ತತ್ಸಮಕಾಲದಲ್ಲಿಯೇ ಸ್ವಾನಂದಾನುಭವದಲ್ಲಿಟ್ಟು ಅನುಗ್ರಹಿಸುವುದಕ್ಕೂ ಸಮರ್ಥ ನಾಗಿರುತ್ತಿ, ಜನ್ಮಜನ್ಮಾಂತರಗಳಲ್ಲಿ ಸಂಪಾದಿಸಲ್ಪಟ್ಟ ಭಕ್ತಿ ಮತ್ತು ಜ್ಞಾನಮಾರ್ಗ ವುಳ್ಳ ದೇವರುಗಳು ಕರ್ಮಪರಿಪಾಕದಿಂದ ಕಂಡು ನಿನ್ನನ್ನು ಸಂತೋಷಿಸುತ್ತಾರೆ. ನೀನಾದರೋ ಆತ್ಮಾರಾಮನಾಗಿದ್ದು ಕೊಂಡು ನಿನ್ನಲ್ಲಿಯೇ ಆನಂದಗೊಳ್ಳುತ್ತಿ ಎಂದರೆ ನಿನಗೂ ಮತ್ತು ಇತರರಿಗೂ ನೀನೇ ಅನಂದದಾಯಕನಾಗಿರು, ಆದುದರಿಂದ ಲೋಕೋತ್ತರ ಗುಣಾಕರನಾಗಿರುವ ಎಲೆ ! ಕೃಷ್ಣ! ನಿನಿಗೆ ನಮಸ್ಕಾರಗಳು. ದೈತ್ಯ ದಿಕ್ಷು ವಿಸೃಷ್ಟಚಕ್ಷುಷಿ ಮಹಾಸಂರಂಭಿಣೀ ಸ್ವಂಭತಃ ಸಂಭೂತಂ ನ ಮೃಗಾತ್ಮಕಂ ನ ಮನುಜಾಕಾರಂ ವಪುಸ್ತವಿಭೋ ! ಕಿಂ ಕಿಂ ಭೀಷಣಮೇತದದ್ಭುತಮತಿವ್ಯದ್ಯಾಂತ ಚಿತ್ತೇsಸುರೇ ವಿಸ್ತೂರ್ಜಿದ್ದ ವಲೋಗ್ರ:ಮವಿಕಸದರ್ಸ್ಮಾ ಸಮಾಜೃಂಭಧಾಃ || ೨೫-೨, ದನುಜವೀರನಾದ ಹಿರಣ್ಯಕಶಿಪು ಬಹಳ ಸಂಭದದಿಂದ ಕೂಡಿದವನಾಗಿ ಎಲ್ಲಾ ಕಡೆಯಲ್ಲಿಯೂ ದೃಷ್ಟಿಯನ್ನು ಪಸರಿಸುತ್ತ (ಬಾಲಕನಾದ ಪ್ರಹ್ಲಾದನನ್ನು ಭಯಪಡಿಸುತ್ತ ನಿನ್ನ ಹರಿಯು ಎಲ್ಲಿ ? ಎಂದು ಗರ್ಜಿಸಿದಾಗ) ರುಂಡವು ಮೃಗಾ ತಕವೂ ಮುಂಡವು ಮನುಷ್ಯಾತ್ಮಕವಾಗಿ ಕಂಬದೊಳೆಮೂಡಿದ ಎಲೈ ! ಪರಮಾ ತನೆ! ನಿನ್ನನ್ನು ನೋಡಿ ಇದೆಂತಹ ಅದ್ಭುತ ಇದೆಂತಹ ಭಯಂಕರವೆಂದು ಭ್ರಾಂತ