ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

426 ಸಂಸ್ಕೃತಕವಿಚರಿತೆ -- - - - ಯೆಂದೂ ಗೊತ್ತಾಗುತ್ತದೆ. ಈತನ ಜನ್ಮಭೂಮಿಯು ಯಾವುದೆಂಬದು ತಿಳಿಯದು. ಗ್ರಂಥ ಪ್ರಶಸ್ತಿಯಿಂದ ಇವನು ಶ್ವೇತಾಂಬರ ಜೈನಪಂಗಡದವನೆಂದು ಹೇಳಲಾಗು ತದೆ. ಕಾಲ:-(ಗ್ರ೦ಥನಿರ್ಮಾಣ ಸಮಯಸ್ಸು ವರ್ಣನೀಯಸ್ಕ ಒರವಿಜಯ ಗಣೇರ್ಮರಣಸ್ಯ ೧೬೨೨ ವಿಕ್ರಮಸಂವತ್ಸರೆ' (೧೫೯೨. ಕ್ರಿ. ಶ.) ಭಾದ್ರಪದ್ಯ ಶುಕ್ಕಾದಶ್ಯಾಂ” ಎಂದು ಹೇಳಿರುವುದರಿಂದ ಇವನು ಕ್ರಿ. ಶ. ೧೬ನೆಯ ಶತ ಮಾನದವನೆಂಬುದು ಸ್ವಷ್ಟವಾಗಿದೆ. ಗ್ರಂಥ:-ಈತನು 'ಹಿರಸೌಭಾಗ್ಯಂ' ಎಂಬ ೧೭ಸರ್ಗಗಳುಳ್ಳ ಮಹಾ ಕಾವ್ಯ ವನ್ನು ಬರೆದಿರುವನು. ಇದಕ್ಕೆ ' ಸ್ಕೋಪಜ್ಞ' ಎಂಬ ವ್ಯಾಖ್ಯಾನವಿರುವುದು. ಹೀರಕುಮಾರನು ಶೈಶವಾವಸ್ಥೆಯನ್ನು ಕಳೆದು ಗುರುಗಳಿಂದ ಸದುಪದೇಶಿತ ನಾಗಿ, ಪ್ರಪಂಚದ ಅಸ್ಥಿರತೆಯನ್ನು ತಿಳಿದು ಆಚಾರನಲ್ಲಿ ದೀಕ್ಷೆಯನ್ನು ಹೊಂದಿ ವೈರಾಗ್ಯಚಕ್ರವರ್ತಿಯಾಗಿ, ಜನಧರ್ಮಗಳನ್ನು ಪದೆಶಿಸಿ ಮುಕ್ತನಾದನೆಂಬುದೇ ಕಥಾವಸ್ತು. ಈ ಕಾವ್ಯದಲ್ಲಿ ಕವಿಯು ಅನೇಕವಿಧಗಳಾದ ನಗರಸಾಗರೊದ್ಯಾನ ಕೈಂತಜಾಕ ತಿರ್ಥಕ್ಷೇತ್ರ ಧರ್ಮ ಮೊದಲಾದ ವಿಷಯಗಳನ್ನು ಮನಮುಟ್ಟುವಂತೆ ಬಹು ದಕ್ಷತೆಯಿಂದಲೂ ಚತುರತೆಯಿಂದ ವರ್ಣಿಸಿರುವನು. ಇದನ್ನು ಜೈನ ಧರ್ಮಗ್ರಂಥವೆಂದರೂ ಸಲ್ಲುವುದು, 'ಸಮಸ್ತ' ಎಂದು ಹೇಳದೆ ಇರುವುದರಿಂದ ಗ್ರಂಥವು ಅಪೂರ್ಣವೆಂದು ತೋರುತ್ತದೆ. ಇದರ ಕೆಲವು ಶ್ಲೋಕಗಳು:- ಕಾರ್ಬುಕಾಲ ಇತರೋsಪಿ ನರೇಗುದಿಯತೆ ತದನು ಮುಚ್ಯತ ಏವ ವಿಭ್ರಮಾಯ ವಿಧ ಹೃದಿ ಹಾರೋ ಹಿತೇ ರಹಸಿ ಸೋಮಮುಖಿ ಭಿಃ || ೫-೬ ಪ್ರಪಂಚದಲ್ಲಿ ಜನರು ತಮಗಾವುದಾದರೂ ಕೆಲಸವಾಗಬೇಕಾಗಿದ್ದರೆ ಆ ಸಮಯದಲ್ಲಿ ಇತರರನ್ನು ಆಶ್ರಯಿಸಿ ತಮ್ಮ ತಮ್ಮ ಕೆಲಸವಾದನಂತರ ಅವ ರನ್ನು ಬಿಟ್ಟು ಬೇರೆಯಾಗುವಂತೆ ಸ್ತ್ರೀಯರು ತಮಗೆ ಬೇಕಾದಾಗ ವಿಲಾಸಕ್ಕಾ ಗಿಯೋ ಅಥವಾ ಅಲಂಕಾರಕ್ಕಾಗಿ ಮುಕ್ತಾಹಾರಾದಿಗಳನ್ನು ಕಂಠದಲ್ಲಿ ಧರಿ ಸುತ್ತಾರೆ. ಆದರೆ ಕ್ರಿಡಾವಿಶೇಷಸಮಯಗಳಲ್ಲಿ ಅವುಗಳನ್ನು ವಕ್ಷಸ್ಥಲದಿಂದ ಬೇರ್ಪಡಿಸುತ್ತಾರೆ. ಎಂದರೆ ಲೋಕಕ್ಕೆ ಸ್ವಾರ್ಥದಲ್ಲಿರುವಷ್ಟು ಅಭಿಲಾಷೆಯು ಹರಾರ್ಥದಲ್ಲಿಲ್ಲವೆಂದು ಭಾವವು. ಸೈರರವಶಂಕಯಾ ಕುವಲಯ ನತ್ರಂಸಯತ್ಯಂಗನಾ ಭಂಗಾನ್ಮಾಲಿಕ ಬಾಲಿಕಾಃ ಸಮಧಿಯಾ ಗೃತಿ ಕೇವನೆ ಮುಕ್ತಾಭಾ೦ತಿಭತಃ ಕಿರುತವನಿತಾನ್ನತಿ ಗುಂಜವ್ರಜಾಂ ಕಂಚಚ್ಚಂದ್ರಮಸೋವ್ರಮಂ ವಿತನುತೇ ನೋ ಕಸ್ಯ ಚಂದ್ರೋದಯಃ ||೭-೯೧