ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ || ಕಪಿಕರ್ಣಪೂತ ೩೭ ತೆಂದೂ ಕೊಂಡಾಡಿರುವರು * ವಿಜಯಗುಪ್ತನು ಈ ಊರನ್ನು 'ಪಂಡಿತನಗರ ಎಂದು ಕೆವಲ ಅಭಿಮಾನಿಸಿ ಕರೆದಿರುವನು, ಇಂತಹ ಊರಿನ ವಿಚಾರವಾಗಿ ಕೊಂಚಹೇಳುವುದು ಯುಕ್ತವೆಂದು ತೋರುವುದರಿಂದ ವಿಷಯವು ಅಪ್ರಸಕ್ತ ವಾಗದು. ಶಕ, ೧೪೦೬ ರಲ್ಲಿ ಹುರ್ಸೇಷಹಾನ ಗೌಡದೇಶದ ಸಾರ್ವಭೌಮನಾ ಗಿದ್ದನು. ಅರ್ಜುನರಾಜನು ಫತೆ' ಬಾ… ಎಂಬದನ್ನು ಆಳುತ್ತಿದ್ದನು. ಇದು ಬಂ°ರಾವರೆಗೆ ವಿಸ್ತರಿಸಿದ್ದಿತು. ಪಶ್ಚಿಮಕ್ಕೆ ಘಾಗರಾನದಿ ಪೂರ್ವಕ್ಕೆ 'ಘಂಟೀ ಶ್ವರ'ಎಂಬನದಿ. ಈ ಮಧ್ಯೆ ಪಂಡಿತನಗರ ಅಥವಾ ಫುಲ್ಲಶ್ರಿ ಎಂಬ ಊರಿದ್ದಿತು. ಇದು ಚತುರ್ವೇದ ಸಕಲಶಾಸ್ತ್ರ ಪಾರಂಗತರಿಂದಲೂ, ಚತುರರಾದ ವೈದ್ಯರಿಂದಲೂ ಲೇಖನ ವಿದ್ಯಾಕುಶಲರಾದ ಕಾಯಸ್ಥರಿಂದಲೂ ಪೂರ್ಣವಾಗಿದ್ದಿತು. ಈ ಊರಿ ನಲ್ಲಿ ಜನ್ನಿಸುವುದಾದರೆ ಅಥವಾ ವಾಸಿಸುವದಾದರೆ ಯಾವುದಾದರೊಂದು ಸುನಿ ಚಾರದಲ್ಲಿ ಕಿರಿಯನ್ನು ಗಳಿಸುವುದಾಗಿ ನಂಬುಗೆ, ಈಗ ಘಂಟೇಶ್ವರನದಿಯಾಗಲಿ ಘಾಗ್ರಾನದಿಯಾಗಲಿ ಇರುವುದಿಲ್ಲ. ಎರಡು ನದಿಗಳೂ ಮರಳಿನಿಂದ ಮುಚ್ಚಿ ಹೋಗಿವೆ. ಪುಲ್ಲಿಎಂಬ ಊರುನಾಮಾವಶೇಷವಾಗಿ ಹೋಗಿ ಕಾಲಕ್ರಮದಲ್ಲಿ ಅದರ ಒಂದು ಭಾಗವು ಗೋಲಾ ಎಂಬ ಹೆಸರಿನಿಂದ ಈಗ ಕರೆಯಲ್ಪಡುತ್ತಿದೆ. $ ಕಾಲ: – ಕ್ರಿಸ್ತಾಬ್ದ ೧೫೨೪ ರಲ್ಲಿ ಕವಿಯು ಜನ್ನಿಸಿದುದಾಗಿ ಹೇಳಿದೆ. ಆದುದರಿಂದ ಇವನು ಕ್ರಿ. ಶ. ೧೬ನೆಯ ಶತಮಾನದವನು ಗ್ರಂಥಗಳು:- ೧, ಆರ್ಯಾಶತಕಂ ೨. ಚೈತನ್ಯಚರಿತಾಮೃತಂ ೩, ಆನಂದವೃಂದಾವನಚ೦ಪೂತಿ ೪. ಚಮತ್ಕಾರಚಂದ್ರಿಕಾ ೫, ಅಲಂಕಾರಕೌಸ್ತುಭಃ ೬. ಕೃಷ್ಣಲೀಲೊದ್ದೇಶದೀಪಿಕು ೬. ಗೌರವಣೋದ್ದೇಶದೀಪಿಕಾ ೮. ವರ್ಣಪ್ರಕಾಶಃ ಕೊಶಃ ೯, ಚೈತನ್ಯ ಚಂದ್ರೋದಯನಾಟಕ

  • Bengali Language and Literature P. 279.

3 ಈಗಣ ಫರಿದಪುರ ಮತ್ತು ಬಾಕರಗಂಜಿನ ಒಂದುಭಾಗ, ಈ ಪ್ರಾಂತ್ಯಕ್ಕೆ ಫತೇಬಾದ್ ಎಂಬ ಹೆಸರಿದಿತು. $ ವಂಗಭಾಷಾ ಸಾಹಿತ್ಯ, ಪುಟ 5