ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿಕರ್ಣಪೂರ ಚೈತನ್ಯ ಚಂದ್ರೋದಯದ ಕೆಲವು ಶ್ಲೋಕಗಳು:- ಉರುಗ್ರೆಕ್ತಪೋಭಿಃ ಶಮದಮನಿಯ ಮೈರ್ಧಾರಣಾಧಾನಯೋಗ ರ್ಯುಕ್ತಾಶಾ ಪಾರಮೇಷ್ಟ್ರಂiತ್ರಿಭುವನವಿಭವೇಛರ್ದಿತಾನ್ಮಾವಬೋಧಾಃ| ಕಂದರ್ಪಾ ದೀನಮಿತ್ರಾನಪಿ ಸಹಜತಯಾ ದುರ್ಜಯಾನೇನ ಜಿಪ್ಪಾ ಯೇನ ಸೃಷ್ಣಾ ನಿಪೇತುಃ ಕಥಯ ಕಥಮಸ್ ಕೇನ ಕೋಪೋ ವಿಜೇಯಃ || ೧-44 ಅಧರ್ಮನು ಕಲಿಯನ್ನು ಕುರಿತು ಹೇಳುವಿಕೆ:-ಎಲೈ ! ಮಿತ್ರನೆ ! ಕೊಪವನ್ನು ಜಯಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹೇಗೆಂದರೆ ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯಲು ಅತ್ಯುಗ್ರ ತಪಸ್ಸುಗಳಿಂದಲೂ, ಶಮದಮಾದಿ ಗಳಿ೦ದಲೂ, ಧಾರಣ ಧ್ಯಾನ ಯೋಗಾದ್ಯಷ್ಟಾಂಗಗಳಿಂದಲೂ ಕೂಡಿ ಸಕಲೈಶ್ವರ್ಯ ಭೋಗಗಳನ್ನೂ ಆಹಾರಾದಿಗಳೆಲ್ಲವನ್ನೂ ತ್ಯಜಿಸಿ ಜಯಿಸಲಸಾಧ್ಯರಾದ ಕಾಮಾದಿ ಗಳನ್ನು ಗೆದ್ದರಾದರೂ ಯಾವುದರಿಂದ ಅಧಃಪತನವನ್ನು ಹೊಂದುವರೋ ಅಂತಹ ಕೋಪವನ್ನು ಜಯಿಸಲು ಯಾರಿಂದತಾನೇ ಸಾಧ್ಯವಾದೀತು, ಎಂದರೆ ಯಾರಿಂದಲೂ ಸಾಧ್ಯವಿಲ್ಲವೆಂದು ಭಾವವು. ಪಷ್ಟ ಕರ್ಮಣಿ ಕೇವಲಂ ಕೃತಧಿಯಃ ಸೂತ್ರೆಕಚಿಹ್ವಾ ದ್ವಿಜಾ: ಸಂಜ್ಞಾ ಮಾತ್ರ ವಿಶೇಷಿತಾ ಭುಜಭುವೋ ವೈಶ್ಯಾಸ್ತು ಬೌದ್ಯಾ ಇವ || ಶೂದ್ರಾ: ಪಂಡಿತಮಾನಿನೋ ಗುರುತಯಾ ಧರ್ಮೋಪದೇಶೋತ್ಸುಕಾಃ ವರ್ಣನಾಂ ಗತಿ೦ದೃಗೇವ ಕಲಿನಾ ಹಾ! ಹಂತ! ಸಂಪಾದಿತಾ|| ೨-೨ ಬ್ರಾಹ್ಮಣರಿಗೆ ಶಾಸ್ರೋಕ್ತವಾದ ಯಜನ, ಯಾಜನ, ಅಧ್ಯಯನ, ಅಧಾ, ಹನ ದಾನ, ಪ್ರತಿಗ್ರಹವೆಂಬ ಆರು ಕರ್ಮಗಳಲ್ಲಿ ಕೊನೆಯದಾದ ಪ್ರತಿಗ್ರಹ ಕರ್ಮ ದಲ್ಲಿ ಮಾತ್ರ ಬ್ರಾಹ್ಮಣರು ಆಸಕ್ತರಾಗಿ ಯಜ್ಞಪವೀತ ಚಿಹ್ನೆಯಿಂದ ಮಾತ್ರ ಕೂಡಿದವರಾಗಿರುತ್ತಾರೆ. ರಾಜರು ಕೇವಲ ಸಂಜ್ಞಾ ಮಾತ್ರ, ವೈಶ್ಯರೋ ಕೇವಲ ಬೌದಾ ಚರಣೆಯುಳ್ಳವರು, ಶೂದ್ರರಾದರೊ ಪಂಡಿತಮಾನನೀಯರಾಗಿ ಗುರುಗ ಇಂದು ಧರ್ಮೋಪದೇಶೋತ್ತು ಕರ:ಗಿರುತ್ತಾರೆ. ಈರೀತಿಯಾಗಿ ವರ್ಣವಿಭಾಗವು ಕಲಿಪುರುಷನಿಂದ ಸಂಪಾದಿಸಲ್ಪಟ್ಟುವುಗಳಾಗಿರುವುವು. ಅಯ್ಯೋ ! ಬಿಣ ಲಲಾಟಚಂದ್ರ ಜಸುಧಾ೦ದಾಧರೋಧೇ ಮಹ ದ್ರಾಕ್ಷಂ ವ್ಯಂಜಯತೇ ನಿಮಿಾಲ್ಯ ನಯನೇ ಬದ್ರಾಸನಂ ಧ್ಯಾಯತಃ | ಅಸ್ಕೋಪಾತ್ರ ನದೀ ತಟಸ್ಯ ಕಿಮಯಂ ಭಂಗಃ ಸಮಾಧೇರಭೂತ ಪಾನೀಯಾಹರಣ ಪ್ರವೃತ್ತರುಣೀ ಶಂಖಸ್ಸನಾಳರ್ಣಃ | ೨-L, ಅಹಹ ! ಇದೇನು ! (48)