ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Gen ರುದ ಕವಿ - - - - ಮುಗಿಸಿರುವನು. ನಾರಾಯಣಶಾಹವಿನ ಪೂರ್ವಜರು ಕೊಂಕಣಕ್ಕೂ ಗುಜ ರಾತಿಗೂ ಮಧ್ಯದಲ್ಲಿದ್ದ ಬಾಗುಲಾಸ್ ಎಂಬ ದೇಶದಿಂದ ಬಂದವರಾದುದರಿಂದ ಈ ರಾಜರಿಗೆ ಮಯೂರಗಿರಿಯ ಬಾಗುಲರೆಂದೂ, ಇವರ ಚರಿತೆಗೆ ಬಾಗುಲಚರಿತ ಎಂದೂ ಹೇಳಿದೆ. ಇದರ ೧೪-೧೬ ಸರ್ಗಗಳು ಋತುವರ್ಣನೆ, ಜಲಕ್ರಿಡಾ, ಮಧ್ಯಾಹ್ನ, ಸಂಧ್ಯಾ? ಸುರತಾದಿವರ್ಣನೆಗಳಿಂದ ಕೂಡಿವೆ. ಯಜ್ಞವರ್ಣನಾವಸರದ ಅಧ್ಯಾಯವು ಪೂರ್ವಮೀಮಾಂಸಾಬದ್ಧವಾಗಿದೆ. ವರ್ಣನೆಗಳು ನೈಜವಾದವುಗಳಾಗಿ ಶೈಲಿಯು ಮೃದುವಾಗಿ ವಿಷಯವು ಸೊಗಸಾಗಿ ಸಾಧಿಸಲ್ಪಟ್ಟಿದೆ. ಚಾರಿತ್ರಕದೃಷ್ಟಿಯಿಂದ ಪ್ರಮಾಣಗ್ರಂಥವೆನ್ನಬಹುದು. ಜಹಾಂಗೀರಶಹಚರಿತ ಗ್ರಂಥವ ಉಪಲಬ್ದವಿಲ್ಲ. ಇದರ ಕೆಲವು ಶ್ಲೋಕಗಳು ರಾಘವಂಶಮಹಾಕಾವ್ಯದಲ್ಲಿ ಕಂಡುಬರುವುದೆಂದೂ ಗ್ರಂಥಪರಿಶಿಲನದಿಂದ ನಾರಾಯಣಶಾಹಪಿನ ಮಗ ಪ್ರತಾಪಶಾಹನೂ ಮತ್ತು ಜಹಾಂಘಿ'ರನೂ ಪರಸ್ಪರಗೆಳೆಯರಾಗಿದ್ದು ರಾಜ್ಯಭಾರ ಮಾಡಿದುದಾಗಿ ಹೇಳಿದೆ.* ರಾಷ್ಢವಂಶಮಹಾಕಾವ್ಯದ ಕೆಲವು ಶ್ಲೋಕಗಳು;- ಧರ್ಮಾಂಭ ನಕುಲಸ್ಯ ಲೇಢಿ ರಸನಾಪ್ರಾ೦ತೇನ ಚಕ್ಷುಃ ಶ್ರವಾ! ಸೃರಂ ಕೇಸರಿಹೋsಪಿ ಬಲಹರಿಣಃ ಶಾಸಾಸಿಲಂ ಚಿಘ್ರತಿ ಕಿಂ ಬ್ಯೂಮೊಂಬರಮಧ್ಯ ಚುಂಬತಿ (ಬಿಸಿ) ಪರಂ ಭುನ್ ತೃಷಾತಾಕಿಮು ಬ್ಯಾಯಾಸ್ಯ ಸದಾಲವಾಲಸಲಿಲೇ ವಲಿಃ ತರೋರ್ಲೀಯತೇ || ೧೬-೨೨ ಬಿಸಿಲಿನಲ್ಲಿ ದಾರಿ ನಡೆಯುವರ ವಿಚಾರವಾಗಿ:- ಮಧ್ಯ ಹೇ ಜಲಶಾಲವೃಂತಮನಿಲಃ ಸರ್ವಾತ್ಮನಾ ಸವತೇ ಎ೦ ದನಿಷೇಣ ಶೀತಲವಧೂವಕ್ಕಜಮಾಲಂಬ ನಿ: ನೇತ್ರ ಮುಪ್ಪತಿಪಕ್ಷಪಟಲಚ್ಯಾ ದಾಯಾದೇವ ಕಿಂ ಪಾಂಥಾ ನಾಮಪಿ ಪಾದಯೋರ್ನಿ ಪತತಿ ಛಾಯಾಪಿಮಾಯಾತಿ|| L M ವಾಯುವ್ರ (ಗಾಳಿಯು) ಮಧ್ಯಾಹ್ನದ ಬಿಸಿಲಿನಲ್ಲಿ ಮಾರ್ಗ ನಡೆಯುವ ರನ್ನು ಜಲಯುಕ್ತವಾದ ಬೀಸಣಿಗೆಗಳ ನೆಪದಿಂದ ಸೇವಿಸುತ್ತಾನೆ. ನೀರು ಬೆವರಿನ ನೆಪದಿಂದ ವಧುವಿನ ಶೀತಲವ ಕೈಜದಂತೆ ಕೃತ್ಯವನ್ನುಂಟುಮಾಡುತ್ತದೆ. ರಪ್ಪ ಗಳ ಛಾಯಾನೆಪದಿಂದ ನಿದ್ರೆಯು ಕಣ್ಣನ್ನು ಆಶ್ರಯಿಸುತ್ತದೆ. ನೆರಳಾದರೋ ಬಿಸಲಿನಲ್ಲಿ ವಾಂಥರು ಮುಂದಕ್ಕೆ ಅಡಿಯಿಡಕೂಡದೆಂದು (ಹೇಳುವಂತೆ) ನೆರಳ ನುಂಟುಮಾಡುತ್ತಿದೆ.

  • ಅಷ್ಢ

ಕಾವ್ಯದ ಮುನ್ನುಡಿ.