ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಕ)

ಕೃಷ್ಣ ಕವಿ, ರೂಪಗೊಪಸ್ವಾಮಿ

೩೮ ತಚ್ಚಿಂತಯಾಮಿ ಚಿ ಬುಕಾಕಲಿತಾಂಗುಲಿಭೂ ಭಂಗಾಭಿರಾಮದರವತವಕ್ರಮಕ್ಕಾ! ಸಂಭಾವ್ಯ ಮಾಂ ಮನನಿ ಪೂರ್ಣ ಮನೋರಥಾ ಸಾ ಚಿತ್ರಾರ್ಪಿ ತೇವ ಯದಭಾಷ್ಪುಲಕಾಚಶಾಂಗೀ|| ೧೦c ರೂ ಪ ಗೊ ಸ್ವಾ ಮಿ ಇವನು ನಂಗೀಯನು, ಇವನ ಮಾತಾಪಿತೃಗಳಾರೆಂಬದು ತಿಳಿಯದು ಇವನು ಕ್ರಿ. ಶ. ೧೪೯೦ರಲ್ಲಿ ಜನ್ಮಗ್ರಹಣಮಾಡಿ ಕ್ರಿ. ಶ. ೧೫೯೦ರ ವರೆಗೆ ಜೀವಿ ಸಿದ್ದು ಹುರ್ಸೇಶಹನ ಆಸ್ಥಾನ ಮಂತ್ರಿಯಾಗಿದ್ದನು. ಇವನ ಸೋದರನಾದ ಸನಾತನೂ ರೂಪಗೋಸ್ವಾಮಿಯಂತೆ ಹುರ್ಸೇಶಹನ ಬಳಿ ಮಂತ್ರಿ ಪದವಿಯಲ್ಲಿ ದ್ದನು. ಇವರು ಮಹದೈಶ್ವರ್ಯವಂತರಾಗಿಯೂ, ಮಹಾಮೇಧಾವಿಗಳಾಗಿಯೂ ರಾಜತಂತ್ರಪಟುಗಳಾಗಿಯೂ ಇದ್ದರು. ಕಾಲಕ್ರಮದಲ್ಲಿ ಚೈತನ್ಯ ಧರ್ಮವನ್ನವ ಲಂಬಿಸಿ ಸನ್ಯಾಸಗ್ರಹಣಮಾಡಿದರು* ಕಾಲ: ಮೇಲೆ ಹೇಳಿರುವ ಕಾಲದಿಂದ ಇವನು ಕ್ರಿ. ಶ ೧೬ನೆಯ ಶತ ಮಾನದವನೆಂದು ಸ್ಪಷ್ಟವಾಗಿರುವುದಲ್ಲದೆ, ನಂದಸಿಂಧುರಬಾಣೇಂದು (೧೫೮೯) ಸಂಖ್ಯೆಸಂವತ್ಸರೇಗಳೇ ವಿದಗ್ಗ ಮಾಧವಂನಾಮ ನಾಟಕಂಗೋಕುಲೀಶಂ + ಎಂಬ ಶ್ಲೋಕದಿಂದಲೂ ಖಂಡಿತವಾಗುವುದು. ಗ್ರಂಥಗಳು:-(೧) ಹಂಸದೂತ (೨) ಉದ್ದ ವಸಂದೇಶ (೩) ಕೃಷ್ಣ ಜನ್ಮತಿಥಿ (೪) ಗಾನೋದ್ದೆಶದೀಪಿಕಾ (೫) ಸವಮಾಲಾ (೬) ವಿದಗ್ಧ ಮಾಧವ (೭) ಲಲಿತಮಾಧವ (೮) ದಾನಕೇಳಿಕೌಮುದೀ: () ಆನಂದಮಹೋದಧಿ (೧೦) ಭಕ್ತಿರಸಾಮೃತಸಿಂಧು (೧೧) ಉಜ್ಜಲನೀಲಮಣಿ (೧೨) ಪ್ರಯುಕ್ತ ಖ್ಯಾತಚಂದ್ರಿಕಾ (೧೩) ಮಧುರಾಮಹಿಮಾ (೪) ಪದ್ಯಾವಳಿ (೧೫) ರಘುಭಾಗ ವತಾಮೃತ (೧೬) ಗೋವಿಂದ ಬಿರುದಾವಳಿ, ಇವುಗಳಲ್ಲಿ ಉಜ್ಜಲನೀಲಮಣಿ' ಎಂಬದು ಅಲಂಕಾರ ಗ್ರಂಥ. ಇದಕ್ಕೆ ವಿಶ್ವನಾಥ ಚಕ್ರವರ್ತಿ ಎಂಬವನು 'ಆನಂದಚಂದ್ರಿಕಾ' ಎಂಬ ವ್ಯಾಖ್ಯಾನವನ್ನೂ,

  • Bengali Language and Literature P. 504

1 ವಿದಗ್ಗ ಮಾಧವ ಪುಟ ೯, $ ವಂಗಭಾಷಾ ಸಾಹಿತ್ಯ ಪುಟ ೫೦೪. Foot Note: