ಪುಟ:ಸತ್ಯವತೀ ಚರಿತ್ರೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನೆಯ ಪ್ರಕರಣ ೧೧ • • • • • • + + , , , ಕಾಣದಂತೆ ತಾನೂ ಪುಸ್ತಕಗಳನ್ನು ತಂದು ಕೊಟ್ಟು ಮದುವೆಯಾದಂದಿನಿಂದ ಅವಳಿಗೆ ಓದು ಹೇಳುತ್ತಾ ಬಂದನು, ಅದರಿಂದ ಸತ್ಯವತಿ ವಿದ್ಯೆಯಲ್ಲಿ ಬುದ್ದಿ ಯಲ್ಲಿಯ ತನ್ನ ಓರಗೆಯವರನ್ನೆಲ್ಲಾ ಮೀರಿಸಿದ್ದಳು. ಸ್ವಲ್ಪ ಓದು ಕಲಿತಿರುವ ಕೆಲ ಹುಡುಗಿಯರಂತೆ ಅವಳು ತರಾಶಶಾಂಕಮಿಜಯ ಮುಂತಾದ ದುಶ್ಯಾವ್ಯ ಗಳನ್ನು ಓದಳು. ಶೃಂಗಾರ ಕಾವ್ಯಗಳ ಹೆಸರನ್ನೂ ಕೇಳಲೊಲ್ಲಳು, ತನಗೆ ಅವಕಾಶವಾದಾಗ ಪತಿವ್ರತೆಯರ ಚರಿತ್ರೆಗಳನ್ನೂ, ನೀತಿಗಳನ್ನೂ, ಒಳ್ಳೆಯ ನಡೆ ವಳಿಯನ್ನು ಬೋಧಿಸುವ ಪುಸ್ತಕಗಳನ್ನೂ, ಓದುವಳು, ಅದರಿಂದ ತಮ್ಮಂತೆ ಹೆರರ ಮೇಲೆ ದೋಷಾರೋಪಣೆ ಮಾಡುವ ವ್ಯರ್ಥಪ್ರಸಂಗಕ್ಕೆ ಈಕೆ ಬರುವದಿಲ್ಲ ವೆಂದೂ ಕವಡೆ ಗಜಗದ ಕಾಯಿಗಳ ಆಟವನ್ನು ಬಿಟ್ಟು, ಕಸೂತಿ ಹಾಕುವಳಲ್ಲ ಎಂದೂ ನೆರೆಹೊರೆಯವರು ಎರಡು ವಿಷಯಗಳಲ್ಲಿ ಸಿಟ್ಟುಗೊಡಿದ್ದರು. ತನ್ನ ಸೊಸ ಓದುವುದನ್ನು ಹೇಗಾದರೂ ತಪ್ಪಿಸಬೇಕೆಂದು ಯಶೋದಮ್ಮನು.... 4 ಹೆಂಗಸು ಓದಿಕೆಟ್ಟಳು ; ಗಂಡಸು ಓದದೆ ಕೆಟ್ಟನು. ” ಎಂಬ ಗಾದೆಯನ್ನು ಉದಾಹರಿಸುತ್ತಲ, ಸ್ತ್ರೀಯರು ಓದಿದರೆ ಸಭೆಗಳಿಗೆ ಹೋಗಿ ಅಧಿಕಾರಗಳನ್ನು ಮಾಡಬಲ್ಲರೇ ? ಓದಬೇಡ-ಎಂದು ಬೋಧಿಸುತ್ತಲೂ ಯಾವಾಗಲೂ ಇಲ್ಲದ ಲಕ್ಷ್ಮಿನಾರಾಯಣಯ್ಯನವರ ಸೊಸೆ ಓದುತ್ತಾಳೆ ಎಂದು ನಂಟರೆಲ್ಲರೂ ಆಡಿ ಕೊಳ್ಳುವುದರಿಂದ ತಾನು ಅಪಮಾನಕ್ಕೆ ಗುರಿಯಾಗಿ ತಲೆಯೆತ್ತಿಕೊಂಡು ತಿರುಗ ದಂತೆ ಆಗಿದೆ...-ಎಂದು ದೂಷಿಸುತ್ತಲೂ, ಓದುಕಲಿತ ಹೆಂಗಸಿನೊಡನೆಯ ಅಡಿಗೆ ಕಲಿತ ಗಂಡಸಿನೊಡನೆಯೂ ಯಾರೂ ಬೇಯಲಾರರು-ಎಂದುಬಯ್ಯುತ್ತಲೂ ಇದ್ದಳು. ಇದಲ್ಲದೆ ಸಿಕ್ಕಿದಾಗ ಪುಸ್ತಕಗಳನ್ನೆಲ್ಲಾ ಹರಿದುಹಾಕಿ ತನ್ನ ಕೈಲಾದ ಮಟ್ಟಿಗೂ ಅವಳ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡುತ್ತಿದ್ದಳು. ಆದರೆ ಸತ್ಯವತಿ ಅತ್ತೆಯಿಂದ ತನಗೆಷ್ಟು ತೊಂದರೆಯಾದರೂ ಬದಲು ಮಾತಾಡಳು. ಮಧ್ಯಾಹ್ನ ಯಶೋದಮ್ಮನಿಗೆ ನಿದ್ದೆ ಬಂದಮೇಲೂ ಅವಳು ತನ್ನ ಕಿರುಮನೆಯ ಕದವನ್ನು ಮುಚ್ಚಿಕೊಂಡು ಕುಳಿತಿರುವಾಗಲೂ ಬೆಳಗಿನಜಾವ ದಲ್ಲಿಯ, ರಹಸ್ಯವಾಗಿ ತನ್ನ ವಿದ್ಯೆ ಯನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಲೇ ಇದ್ದಳು, ಓದುವುದಕ್ಕೆ ಮನಸ್ಸಿದ್ದರೆ ಎಷ್ಟು ಕಷ್ಟ ಪಟ್ಟಾದರೂ ಕಲಿಯ ಬಹುದು. ಸತ್ಯವತಿಯ ಮೂರನೆಯ ತಮ್ಮ ಯಾವುದೆಂದರೆ.-ಶುಚಿಯಾಗಿರುವಿಕೆ, ಆಕೆ ಚಿಕ್ಕಂದಿನಲ್ಲಿಯೇ ಸುಖಾಧಾರಪ್ರಕಾಶಕ, ಆರೋಗ್ಯ ಮಾರ್ಗದರ್ಶಿನಿ ಎಂಬ ಪುಸ್ತಕಗಳನ್ನು ಓದಿ, ಗಾಳಿ ಮುಂತಾದುವುಗಳ ಉಪಯೋಗವನ್ನು ತಿಳಿದಿದ್ದಳು. " knಳ೩ಕ್ಕೆ •