ಪುಟ:ಸತ್ಯವತೀ ಚರಿತ್ರೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಸತ್ಯವತಿಚರಿತ್ರೆ vvv ಹಾರಗಳನ್ನು ತೀರಿಸಿ ಹೊತ್ತು ಕಳೆಯುತ್ತಾರೆ, ಬೆಳಗ್ಗೆ ಶಾನುಭೋಗ ಮುಂತಾ ದವರು ಅಲ್ಲಿ ಕುಳಿತುಕೊಂಡು ಹಲ್ಲುಜ್ಜಿ ಕೊಳ್ಳುತ್ತಾ ವ್ಯವಹಾರ ಮೊದಲಾದು ದನ್ನು ಕೇಳುತ್ತಾರೆ. ಅದಕ್ಕೆ ಸ್ವಲ್ಪ ದೂರದಲ್ಲಿ ದನಗಳನ್ನು ಕೂಡುವ ಒಂದು ದೊಡ್ಡಿ ಇದಿರಾಗಿ ಕಾಣುತ್ತದೆ. ಹೊಲಗಳಲ್ಲಿ ಕೆಲಸವಿಲ್ಲದವರು ಸಾಧಾರಣ ವಾಗಿ ಸಾಯಂಕಾಲದಲ್ಲಿ ಆ ಜಗುಲಿಯ ಮೇಲೆ ಕುಳಿತು ಕೊಂಡು ಲೋಕವಾರ್ತೆ ಯನ್ನೂ ಕಾಲಸ್ಥಿತಿಯನ್ನೂ ಬೆಳೆಯ ವಿಷಯವನ್ನೂ ಮಾತನಾಡಿಕೊಳ್ಳುತ್ತಾ ಹೊತ್ತು ಮುಳುಗಿದ ಮೇಲೆ ಮನೆಗಳಿಗೆ ಹೋಗುತ್ತಾರೆ. ನಾರಾಯಣ ಮೂರ್ತಿ ತನ್ನ ಪ್ರಯಾಣದ ಸಂಗತಿಯನ್ನು ಅಣ್ಣನ ಸಂಗಡ ಹೇಳುತ್ತಿರುವಾಗ ಒಳಗಿದ್ದ ಯಶೋದಮ್ಮ ನು-ಮಂತ್ರ ಸಾನೀ! ಮಂಕ್ರಸಾನೀ!.... ಎಂದು ಕೂಗುತ್ತಾ ಬಂದು ಮಕ್ಕಳನ್ನು ನೋಡಿ... ಅಪ್ಪಾ ! ನೀವು ಓಡುತ್ತಾ ಹೋಗಿ ನಾಗಮ್ಮನನ್ನು ಕರೆ ದುಕೊಂಡು ಬನ್ನಿ '.... ಎಂದು ಹೇಳಿ ಪುನಃ ಒಳಗೆ ಹೋದಳು. ಆ ಸುತ್ತು ಮುತ್ತಿನ ನಾಲೈದು ಗ್ರಾಮಗಳಿಗೂ ನಾಗಮ್ಮನೊಬ್ಬಳೇ ಮಂತ್ರ ಸಾನಿ. ಅವ ಳು ಶೂದ್ರಜಾತಿಯ ಹೆಂಗಸು. ಅವಳಿಗೆ ಈಗ ಪ್ರಾಯಶಃ ಎಂಭತ್ತು ವರ್ಷವಾ ಗಿರಬಹುದು, ಅವಳು ಪ್ರಾಯದಲ್ಲಿ, ಯಾವನೊಡನೆಯೋ ಹೊರಟು ಬಂದಳೆಂದು ಜನಗಳು ಹೇಳುತ್ತಾರೆ. ಅವಳಿಗೆ ಮಕ್ಕಳು ಮರಿಗಳೇನೂ ಇಲ್ಲ, ಮ೦ ಗೊಂಡಾಗ್ರಹಾರಕ್ಕೆ ಒಂದುವರೆ ಮೈಲಿ ದೂರದಲ್ಲಿ ಒಂದು ಚಿಕ್ಕ ಹಳ್ಳಿಯುಂಟು. ಅಲ್ಲಿ ಅವಳು ಗುಡಿಸಲು ಹಾಕಿಕೊಂಡು ಒಗೆತನಮಾಡುವಳು. ಅವಳಿಗೆ ಪ್ರಸವ ವೈದ್ಯವಾಗಲಿ, ಸುಖಪ್ರಸವಕ್ಕೆ ಮಾಡಬೇಕಾದ ಉಪಾಯಗಳಾಗಲಿ, ಯಾವುದೊ ತಿಳಿಯದಿದ್ದರೂ ಕೆಲವುವೇಳೆ ನೋವುಬಂದವರಿಗೆ ಮಂತ್ರ ತೀರ್ಥವನ್ನು ಕೊಟ್ಟು ಮಂತ್ರ ಸಾನಿಯ ಕೆಲಸದಲ್ಲಿ ಗಟ್ಟಿಗಳೆಂದು ಪ್ರಸಿದ್ಧಿಗೆ ಬಂದಿರುವಳು. ಆ ದಿನದ ರಾತ್ರಿ ಅಣ್ಣ ತಮ್ಮಂದಿರಿಬ್ಬರೂ ಅವಳ ಮನೆಗೆ ಹೋಗಿ, ಈ ಸಂಗತಿ ಯನ್ನು ತಿಳಿಸಿ ಕಟ್ಟನೆ ಬಾರೆಂದು ಕರೆದರು. ಅವರೆಷ್ಟು ಆತುರ ಪಡುತ್ತಿದ್ದರೂ ನಡುಮನೆಯಲ್ಲಿ ಕುಪಟೆಯ ಹತ್ತಿರ ಕುಳಿತಿದ್ದ ನಾಗಮ್ಮನು ಹೊಗೆ ಬತ್ತಿಯನ್ನು ಹೊತ್ತಿಸಿ ಸೇದಿ ಮುಗಿಸುವವರೆಗೂ ಏಳಲೇ ಇಲ್ಲ. ಆಮೇಲೆ ಮೆಲ್ಲನೆದ್ದು ಮಂಚವನ್ನು ಗೋಡೆಗೊರಗಿಸಿ, ಕುಂಪಟಿಯನ್ನು ಕಿರುಮನೆಯಲ್ಲಿಟ್ಟು, ಸೀರೆಯ ಸೆರಗಿನಲ್ಲಿ ಕೆಲವು ನಾರುಬೇರುಗಳನ್ನು ಕಟ್ಟಿ ಕೊಂಡು ಬಂದು ಮೇಲುಹೊದಿಕೆ ಹೊದ್ದು ಕೊಂಡು ಒಳಗಣ ಕದವನ್ನು ಮುಚ್ಚಿ ಹೊರಗೆ ಬೀದಿಯ ಬಾಗಲಿಗೆ ಬೀಗಹಾಕುತ್ತಿರುವಾಗ ಒಂದು ಮುದಿಗೂಬೆ ಕೂಗಿತು, ನಾಗಮ್ಮನು ಅದನ್ನು ಕೇಳಿ ಅಪಶಕುನವಾ.