ಪುಟ:ಸತ್ಯವತೀ ಚರಿತ್ರೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 ೨d. ಸತ್ಯವತಿಚರಿತ್ರೆ •\YYY\'\r & \ \ \/1 •

  1. * \ \t & Y 444
  • \ v $4 * \/ 4 (• \ Y * * \ \ # 44

VWY \# \r\VVy ಸುಂ-ಬೇಕಾದರೆ ನನ್ನನ್ನು ಅನ್ಯಾಯವಾಗಿ ಬಯ್ದು ಗೋಳಾಡಿಸುವರ ಬಾಯಲ್ಲಿ ಹುಣ್ಣು ಹುಟ್ಟಲಿ, ನಾನು ಕುಲಹೀನೆಯೆಂಬುದೂ ನೀನು ಮಹಾ ಕುಲೀನೆಯೆಂಬುದೂ ನೀನಾಡುವ ಮಾತಿನಿಂದಲೇ ತಿಳಿಯುತ್ತದೆ. ಸತ್ಯ-ಅಕ್ಕಾ ! ಅತ್ತೆಯವರು ದೊಡ್ಡವರು. ಅವರು ಯಾವಾಗಲೂ ಕೆಟ್ಟ ಪರಾಗರು. ನನ್ನ ಮಾತನ್ನು ಕೇಳಿ ನೀನು ಸುಮ್ಮನಿರು, ಅವರು ಏನಾದರೂ ಆಡಿದರೆ ನಾವು ಕೇಳಿಕೊಂಡಿರಬೇಕು, ನಿನಗೆಬೇಕಾದರೆ ನನ್ನ ಬನಾರಸ್‌ ಸೀರೆ ಯನ್ನೇ ಕೊಡುತ್ತೇನೆ ಬಾ. ಸುಂ-ಬೇಕಾದರೆ ನೀನು ಕೇಳಿಕೊಂಡಿರು, ನಾನು ಎಂದಿಗೂ ಕೇಳು ವವಳಲ್ಲ. ಸತ್ಯ-ಆ ಮಾತೆಲ್ಲಾ ನನ್ನ ಮೇಲಿರಲಿ, ಅವರು ನನ್ನ ಸ್ನೇ ಆಡಿದರೆಂದು ತಿಳಿದು ಕೊಂಡು ನೀನು ಎದ್ದು ಬಾ. ಯ-ಎಲೇ ! ನಿನಗೇನೋ ಹೋಗುವಕಾಲ ಬಂದಿದೆ. ಅದರಿಂದ ಹೀಗೆ ಬೊಕ್ಕ ಬೋರ್ಲಾಗಿ ಬೀಳುತ್ತೀಯ. ಅಯ್ಯೋ ! ನಿನ್ನ ನಾಲಗೆ ಹುಳಿತು ಹೋಗಲಿ. ನನ್ನನ್ನು ಕುಲಹೀನೆ ಎಂದು ಬಯ್ಯುತ್ತೀಯಾ ? ನಿನ್ನ ಗಂಡ ಮನೆಗೆ ಬರಲಿ, ಈ ಹೊತ್ತು ನಿನಗೇನು ಮಾಡಿಸುತ್ತೇನೆಯೋ ! ಸುಂ-ಅವರು ಬಂದರೆ ನನ್ನ ಸ್ನೇನು ಮಾಡುತ್ತಾರೆ ? ನಾನು ತಂದ ಕೆಟ್ಟ ಹೆಸರಿಗೆ ನನ್ನನ್ನು ಕೊಂದುಹಾಕುತ್ತಾರೋ ?, ಆಗಲಿ, ಹಾಗೆ ಕೊಂದುಹಾಕಿದರೆ ನೋಡೋಣ, ಒಂದುವೇಳೆ ಕೊಂದರೆ ಈ ಕಷ್ಟವಾದರೂ ತೊಲಗುವುದು, ಸದ್ಯಃ ನಾನು ಈ ಮನೆಯ ಸೊಸೆತನವನ್ನು ನೀಗಿಕೊಂಡರೆ ಸಾಕು. ಸತ್ಯ-ಅಕ್ಕಾ ! ಕೈಮುಗಿದು ಬೇಡಿಕೊಳ್ಳುತ್ತೇನೆ, ನನ್ನ ಬಿನ್ನಹವನ್ನು ಕೇಳಿ ಒಳಗೆ ನಡೆ, (ಎಂದು ಸಂತೈಸಿ ಬಲಾತ್ಕಾರದಿಂದ ಎರಡು ಕೈಗಳಿಂದಲೂ ಸುಂದರಮ್ಮನನ್ನು ಹಿಡಿದುಕೊಂಡು ಹೋಗಿ ಒಳಗೆ ಕುಳ್ಳಿರಿಸಿ ತನ್ನ ಓರಗಿತ್ತಿ ಏನೋ ಎನ್ನು ವುದಕ್ಕೆ ಹೋಗುತ್ತಿರುವಾಗ್ಗೆ ಸೈರಿಸು, ಸೈರಿಸು, ಎಂದು ಕೇಳಿಕೊಳ್ಳುತ್ರಿ ದಳು.) ಯ- ಈ ಚಿಕ್ಕವಳಿಗೂ ಅಷ್ಟಕ್ಕಷ್ಟಕ್ಕೆ ದೊಡ್ಡ ಕೇಡುಗಾಲ ಬರುತ್ತಿದೆ; ತನ್ನ ಓರಗಿತ್ತಿಯನ್ನು ನಾನೇನೋ ಕೆಟ್ಟ ಮಾತಾಡಿದಂತೆಯ ತಾನು ಒಳ್ಳೆಯ ಮಾತಾಡಿ ಸಮಾಧಾನಪಡಿಸುವಂತೆಯ ನಡುವೆ ಅಡ್ಡವಾಗಿಬಂದು, ಅವಳನ್ನು ಒಳಗೆ ಎಳೆದುಕೊಂಡು ಹೋದಳು. ಇವಳಿಗೆ ಭಯಭಕ್ತಿಗಳೊಂದೂ ಇಲ್ಲ.