ಪುಟ:ಸತ್ಯವತೀ ಚರಿತ್ರೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪ್ರಕರಣ +/5# \\ # # # #\r\ \\ # ++ * * **#\ A #4 #ry * * * * * * * * * * * * # # # * #\ # & P 1 * * * * * * * * * \ # ೩

  • * * * * * * * * * * * r\ f* f

ಎತಿಮೀರಿ ಹೋಗಿದ್ದಾಳೆ, ಹೊತ್ತು ಮುಳುಗುವವರೆಗೆ ತಾನು ಪ್ರತಿದಿನವೂ ಓದಿ ಕೆಡುವುದಲ್ಲದೆ ಚಿಕ್ಕವಳಾದ ಸೀತೆಗೂ ಓದುಹೇಳಿ ಹಾಳುಮಾಡುತ್ತಾಳೆ. ಅವಳೂ ಇವರಸಂಗಡ ಸೇರಿಕೊಂಡಳು. ಓದಬೇಡ, ಓದಬೇಡ, ಎಂದು ನಾನು ಎಷ್ಟು ತರವಾಗಿ ಹೇಳಿದರೂ ನನ್ನ ಮಾತನ್ನು ಕೇಳುವುದಿಲ್ಲ, ನನ್ನ ಎರಡನೆಯ ಮಗನಿಗಾದರೂ ಒಳ್ಳೆಯ ಸಂಬಂಧ ದೊರದೀತೋ ಏನೋ ಎಂದು ಇದ್ದೆ, ಅವ ನ ಓದು ಬೂದಿಯಾಗ, ಅವನು ಈ ಹಾಳು ಇಂಗ್ಲಿಷ್ ವಿದ್ಯೆಯನ್ನು ಕಲಿತು ದರಿಂದ ಇಂತಹ ದಿಕ್ಕು ಕೆಟ್ಟ ಸಂಬಂಧ ದೊರೆಯಿತು. ಅವಳು ತನ್ನ ತಂದೆಯ ಭಾಗ್ಯವನ್ನು ನೋಡಿಕೊಂಡು, ತನಗೆ ಸರಿಯಾದವರು ಈ ಲೋಕದಲ್ಲಿಯೇ ಇಲ್ಲ ವೆಂದು ಮೇಲೂ ಕೆಳಗೂ ನಿಲ್ಲದೆ ಸಿಡಿದು ಬೀಳುತ್ತಾಳೆ, ಅವಳು ಮಾಡುವ ಚೇಷ್ಟೆಗಳು ಯಾರಿಗೂ ಕಾಣುವುದಿಲ್ಲ. ಏನಾದರೂ ಎಂದರೆ ನಾಲ್ಕು ಜನರಿಗೆ ನನ್ನ ಬಾಯಿ ಮಾತ್ರ ಕಾಣುತ್ತದೆ. ಅವರ ಬಾಯಲ್ಲಿ ಹುಳುಬೀಳ, ಅವಳು ಮೊದ್ದು ಎಂದು, ನಾನು ಸುಮ್ಮನೆ ಅವಳನ್ನು ಹುರಿದುಕೊಂಡು ತಿನ್ನು ತ್ತೇನೆ ಎಂದೂ ಅಮ್ಮಂದಿರು ಅಕ್ಕಂದಿರು ಎಲ್ಲರೂ ನನ್ನನ್ನು ಅನ್ಯಾಯವಾಗಿ ಆಡುತ್ತಾ ರಲ್ಲ ? (ಎಂದು ಸೊಸೆಯರನ್ನಿ ಬ್ಬರನ್ನೂ ಬೀದಿಯ ಬಾಗಿಲಲ್ಲಿ ಕುಳ್ಳಿರಿಸಿದ್ದು ತನ್ನ ಬಾಯಿ ನೋವೆತ್ತಿ ಬೇಸರವಾಗುವವರೆಗೂ ಬಯ್ದಳು; ಆಗ ಸಾವಿತ್ರಿಯು ನೀರಬಿಂ ದಿಗೆ ಹೊತ್ತುಕೊಂಡು ಬಂದಳು). ಯ-ಅಮ್ಮಾ, ಸಾವಿತ್ರೀ ! ನೋಡಿದೆಯೋ ? ನಾನು ಕುಲಹೀನೆಯಂತೆ. ಸಾ-ಅಮ್ಮಾ ! ಯಾರು ಹಾಗೆಂದವರು ? ಯ-ಹೊರಗಣವರು ಯಾರೂ ಅಲ್ಲ, ನನ್ನ ಮನೆಹಾಳುಮಾಡುವು ದಕ್ಕೆ ಬಂದಿರುವ ಈ ಗಯ್ಯಾಳಿಯರೇ ? ಸಾವಿತ್ರಿಯು ಬಾಯಿಗೆ ಬಂದಹಾಗೆಲ್ಲಾ ಸುಂದರಮ್ಮ ನನ್ನೂ ಸತ್ಯವತಿಯ ನ್ನೂ ಅವರ ತಾಯಿತಂದೆಗಳನ್ನೂ ಬಾಯೊಣಗಿಹೋಗುವವರೆಗೂ ಬಯ್ದಳು. - ಸುಂದರಮ್ಮನು ಮಧ್ಯೆ ಮಧ್ಯೆ ಎಟಗಿಸಿಕೊಂಡು ಬಯ್ಯುವದಕ್ಕೆ ಹೋದಳು. ಸತ್ಯವತಿಯು ಬೇಡಿಕೊಂಡು ಅದನ್ನು ತಪ್ಪಿಸಿದಳು. ಇಂತಹ ಅತ್ತೆಯರೂ, ಹೆಣ್ಣು ಮಕ್ಕಳೂ, ಈ ಲೋಕದೊಳಗೆ' ಎಷ್ಟೋ ಸ್ಥಳಗಳಲ್ಲಿ ಇರಬಹುದು. ಆದ್ಯಂತವಾಗಿ ಈ ಪುಸ್ತಕವನ್ನು ಓದಿದವರು ಯಾರೂ ಜಗಳವಾಡದೆ, ಬಯ್ದರೆ ಬದಲಾಗಿ ಬಯ್ಯದೆ ಈ ಸತ್ಯವತಿಯ ಶಾಂತಿಗುಣವನ್ನೇ