ಪುಟ:ಸತ್ಯವತೀ ಚರಿತ್ರೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪ್ರಕರಣ ೨೩ +A #1 # \ # * * \ # # # # ry # » # "\ # #: 74fy / 4 / 4 # f # # # # # # \ \ ** * * *

  • * * * * * * * * * * * * * * * * * * * * * ! ! " f, ' “ # * * ** * \ \।

ತನ್ನನ್ನು ನೂಕಿದರೂ, ಎಷ್ಟು ಸಾರಿ ಗದರಿಸಿಕೊಂಡರೂ ಸಹಿಸಿಕೊಂಡು ಬಲಾತ್ಕಾ ರದಿಂದ ಎಬ್ಬಿಸಿ ಪ್ರಯಾಣಮಾಡಿಸಿದಳು, ತನಗೆ ತವರುಮನೆಯವರು ಕೊಟ್ಟಿದ್ದ ಅಮಲ್ಯವಾದ ವಸ್ತ್ರವನ್ನೊ೦ದನ್ನೂ ಉಟ್ಟು ಕೊಳ್ಳದೆ ಸಾಧಾರಣವಾದ ಬಿಳಿಯ ಸೀರೆಯನ್ನು ಟ್ಟು ರಾಮಾನುಜಮ್ಮನನ್ನು ಕಂಕುಳಲ್ಲಿ ಎತ್ತಿಕೊಂಡು ತನ್ನ ಒಳ್ಳೆಯ ಸೀರೆಯನ್ನು ಸೀತೆಗೆ ಉಡಿಸಿ, ಒಡವೆಗಳನ್ನು ಇಟ್ಟು ಮುಂದೆ ನಡೆಸಿಕೊಂಡು ಅತ್ತೆ ಯೊಡನೆ ಹೊರಟಳು. ಯಶೋದಮ್ಮ ನು ಹೊರಡುವಾಗ 66ಸಾವಿತ್ರಿ ! ಮನೆ ಜೋಕೆ ??” ಎಂದು ಹಿರಿಯಮಗಳಿಗೆ ಹೇಳಿ ಮುಂದೆ ನಡೆಯಲು ಪತ್ರಮಿ ಸಿದಳು, ಈಗ ಸಾವಿತ್ರಿಗೆ ಇಪ್ಪತ್ತು ನಾಲ್ಕು ವರ್ಷ, ವೆಂಕಟೇಶನ ಮದುವೆಗೆ ಒಡವೆಗಳು ಬೇಕಾಗಿದ್ದು ದರಿಂದ ಐದುಸಾವಿರ ರೂಪಾಯಿಗಳನ್ನು ತೆಗೆದುಕೊಂಡು ತಾಯಿ ತಂದೆಗಳು ಆಕೆಯನ್ನು ಎಪ್ಪತ್ತು ವರ್ಷ ವಯಸ್ಸುಳ್ಳ ಮರನೆಯ ಮದು ವೆಯ ವರನಿಗೆ ಕೊಟ್ಟು ಮದುವೆಮಾಡಿದ್ದರು. ಮದುವೆಯಾದ ಎರಡನೆಯ ವರ್ಷವೇ ಗಂಡನು ಕಾಲವಾದನು. ಆತನು ತನ್ನ ಮದುವೆಗೋಸ್ಕರ ಮಾಡಿದ್ದ ಸಾಲಕ್ಕಾಗಿ ಸಾಲಗಾರರು ವ್ಯವಹರಿಸಿ ಮಾನ್ಯಗಳನ್ನೆಲ್ಲಾ ಮಾರಿಸಿದರು. ಈಗ್ಗೆ ಎರಡು ವರ್ಷಗಳ ಹಿಂದೆ ಸಾವಿತ್ರಿ ಸುಬ್ರಹ್ಮಣ್ಯ ಯಾತ್ರೆಗೆ ಹೋಗಿ ತನ್ನ ತಲೆಗೂದ ಲನ್ನು ತೆಗೆಯಿಸಿದಳು. ಇದಲ್ಲದೆ ತನಗೆ ಜೀವನಾಂಶವನ್ನು ಕೊಡಬೇಕೆಂದು ಅತ್ತೆ ಯನ್ನು ಎಷ್ಟೋಸಾರಿ ಕೇಳಿದಳು. ಆದರೂ ಆಕೆ ಆ ಮಾತೇ ಕಿವಿಗೆ ಬೀಳದಂತೆ ಇದ್ದಳು, ತಮಗಾದರೆ ಬಡತನ, ಜೀವನ ಜರುಗುವುದು ಬಹು ಕಷ್ಟ, ಈಕಾಲ ದಲ್ಲಿ ಈ ಮಗಳೂ ವಿಧವೆಯಾಗಿ ತಮ್ಮ ಮನೆಯಲ್ಲಿದ್ದರೆ ಕಾವಾಡುವುದು ಹೇಗೆ ಎಂದು ಲಕ್ಷ್ಮಿನಾರಾಣಯ್ಯನು ಯೋಚಿಸಿ ಅಮಲಾಪುರದ ಡಿಸ್ಟ್ರಿಕ್ಟ್ ಮುನ ಸಿಫ್ ಕೋರ್ಟಿನಲ್ಲಿ ಸಾವಿತ್ರಿಯ ಸವತಿಯ ಮಗನ ಮೇಲೆ ತನ್ನ ಮಗಳ ಕೈಯಲ್ಲಿ ವ್ಯವಹಾರ ಮಾಡಿಸಿದನು. ಅದರಮೇಲೆ ಅವನು ತನ್ನ ತಂದೆಯ ಆಸ್ತಿ ತನಗೆ ಸೇರ ಲಿಲ್ಲ ವೆಂದೂ ತನ್ನ ಕಿರಿಯ ತಾಯಿ ವ್ಯಭಿಚಾರಿಣಿಯೆಂದೂ ವಾದಿಸಿ, ಜೀವ ನಾಂಶವನ್ನು ಕೊಡಬೇಕಾದ ನಿಮಿತ್ತವಿಲ್ಲ ವೆಂದು ಹೇಳಿದನು, ಆದರೆ ಆಗ ಲಕ್ಷ್ಮಿ ನಾರಾಯಣಯ್ಯನು ಪಿತ್ರಾರ್ಜಿತವಾದ ಹೆಂಚಿನ ಮನೆಯೊಂದಿರುವುದೆಂದು ಸ್ಥಾಪಿಸಿದ ಮೇಲೆ ವರ್ಷಕ್ಕೆ ಹನ್ನೆರಡು ರೂಪಾಯಿಗಳನ್ನು ಅವಳ ಜೀವ ನಕ್ಕಾಗಿ ಕೊಡಬೇಕೆಂದು ನ್ಯಾಯಾಧಿಪತಿ ತೀರ್ಪುಮಾಡಿದನು. ಚೇವನಾಂಶ ಕೊಡದೆ ತಪ್ಪಿಸಿಕೊಳ್ಳುವುದಕ್ಕಾಗಿ ಅವನು ಮಾಡಿದ ಕುತಂತ್ರವೇ ಹೊರತು ಸಾವಿತ್ರಿ ವ್ಯಭಿಚಾರಿಣಿಯಲ್ಲ. ಇವಳು ಸ್ವಲ್ಪ ಗಯ್ಯಾಳಿ, ಮಢಭಕ್ತಿ