ಪುಟ:ಸತ್ಯವತೀ ಚರಿತ್ರೆ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಪ್ರಕರಣ ೨೬ - ಹಾಗೆ ಸತ್ಯವತಿ ಬೇಡಿಕೊಂಡಷ್ಟೂ ಸುಂದರಮ್ಮನಿಗೆ ಮತ್ಸರ ಹೆಜ್ಜೆ ಕಡೆಗೆ ಆಕೆಯೊಂದಿಗೆ ಮಾತನಾಡುವುದನ್ನೇ ಬಿಟ್ಟು ಬಿಟ್ಟಳು. ಆಕೆ ಅತ್ತೆಯ ಕೋಪವನ್ನು ಶಾಂತಿಪಡಿಸುವುದಕ್ಕಾಗಿ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದಳು, ಕಾದ ದೋಸೆಯ ಕಾವಲಿಯ ಮೇಲೆ ನೀರುಹಾಕಿದಂತೆ ಮತ್ತಷ್ಟು ಉರಿದು ಬಿದ್ದು ಯಶೋದಮ್ಮನು ದೊಡ್ಡ ಸೊಸೆಯಮೇಲಣ ಕೋಪವನ್ನು ಸತ್ಯವತಿ ಯಮೇಲೆಯೇ ತೋರಿಸುತ್ತಾ ಆದುದಕ್ಕೂ ಆಗದುದಕ್ಕೂ ನಿರ್ನಿಮಿತ್ತವಾಗಿ ಬಯ್ಯುತ್ತಾ ನಾನಾ ವಿಧವಾಗಿ ಬಾಧೆ ಪಡಿಸುತ್ತಿದ್ದಳು. ಸತ್ಯವತಿ ಯರೆಷ್ಟು ಹಿಂಸೆಗೊಳಿಸಿದರೂ ಸಹಿಸಿಕೊಂಡು ತಾನು ಯಾರಿಗೂ ಒಳ್ಳೆಯವಳಾ ಗದಿದ್ದರೂ ತನ್ನ ಪ್ರಯತ್ನವನ್ನು ಬಿಡದೆ ಅವರನ್ನು ಹೇಗಾದರೂ ಸಮಧಾನಪಡಿಸಿ ಸೇರಿಸಬೇಕೆಂದು ಮನಸ್ಸಿನಲ್ಲಿ ಭಗವಂತನನ್ನು ಧ್ಯಾನಮಾಡುತ್ತಿದ್ದಳು. ಹೀಗಿರುವಾಗ ಜೊತೆಯಲ್ಲಿರುವುದಕ್ಕೆ ಸರಿಬೀಳದೆ ವೆಂಕಟೇಶನೂ ಆತನ ಹೆಂಡತಿಯ ಬೇರೆ ಮನೆಗೆ ಹೋಗಿ ಪ್ರತ್ಯೇಕ ವಾಗಿ ಅಡಿಗೆಮಾಡಿ ಕೊಳ್ಳಲು ಉಪಕ್ರಮಿಸಿದರು. ಗೃಹಚ್ಚಿದ್ರಗಳು ದಿನಕ್ರಮ ವಾಗಿ ಹೆಚ್ಚಾಗುತ್ತಾ ಬಂದರೂ ಗಂಡನ ಮನಸ್ಸಿಗೆ ವ್ಯಸನವುಂಟಾದೀತೆಂದು ಯೋಚಿಸಿ ಪ್ರತಿವಾರದಲ್ಲಿಯೂ ತಾನು ನಾರಾಯಣಮೂರ್ತಿಯ ಹೆಸರಿಗೆ ಬರೆ ಯುವ ಕಾಗದಗಳಲ್ಲಿ ಸತ್ಯವತಿ ಈ ಸಂಗತಿಯನ್ನು ಎಳ್ಳಷ್ಟಾದರೂ ಬರೆಯಲಿಲ್ಲ. ಅಲ್ಲಿ ನಾರಾಯಣಮೂರ್ತಿಯ ತಿಳಿವಳಿಕೆಯನ್ನೂ ಬುದ್ದಿಯನ್ನ ವಿದ್ಯೆಯಲ್ಲಿರುವ ಆಸಕ್ತಿಯನ್ನೂ ನೋಡಿ ನಾಲ್ಕನೆಯ ತರಗತಿಯಲ್ಲಿ ಓದಿಕೊಳ್ಳುತ್ತಿದ್ದ ಆತನ ತಮ್ಮ ನೂ ಅವನಂತೆಯೇ ಆದಾನೆಂದು ನಂಬಿ ರಾಘವಯ್ಯನಿಗೆ ದೂರಬಂಧುವಾದ ಗೋಪಾಲಯ್ಯನು ತನ್ನ ಮಗಳಾದ ಮಹಾಲಕ್ಷ್ಮಿಯನ್ನು ರಾಮಸ್ವಾಮಿಗೆ ಕೊಡಬೇಕೆಂದು ಉದ್ದೇಶಿಸಿ ನಾರಾಯಣಮೂರ್ತಿಯೊಡನೆ ಹೇಳಲು, ಆತನು ತಂದೆಯ ಹೆಸರಿಗೆ ಒಂದು ಪತ್ರಿಕೆ ಬರೆದನು, ಗೋಪಾಲಯ್ಯನಿಗೆ ಮಂಡಲ ನ್ಯಾಯ ಸಭೆಯಲ್ಲಿ ತಿಂಗಳಿಗೆ ಹತ್ತು ರೂಪಾಯಿ ಸಂಬಳವುಳ್ಳ ಒಂದು ಕೆಲಸವಿದೆ. ಈಗ ಮಹಾಲಕ್ಷ್ಮಿಗೆ ಹನ್ನೊಂದುವರ್ಷ ತುಂಬಿ ಹನ್ನೆರಡನೆಯವರ್ಷ ನಡೆಯುತ್ತಿದೆ. ಆ ಹುಡುಗಿ ರಾಜಕೀಯ ಬಾಲಿಕಾಪಾಠಶಾಲೆಯಲ್ಲಿ ಮೇಲಣ ತರಗತಿಯೊಳಗೆ ಓದಿಕೊಳ್ಳುತ್ತಾ ವಿದ್ಯಾಬುದ್ಧಿಗಳಲ್ಲಿ ತನ್ನ ಸಹಪಾಠಿಗಳನ್ನು ಮೀರಿ ಪ್ರತಿವರ್ಷವೂ ಒಳ್ಳೆಯಬಹುಮಾನಗಳನ್ನು ತೆಗೆದುಕೊಳ್ಳುತ್ತಾ ಇದ್ದಳು. ರಾಜಕೀಯ ಪಾಠ ಶಾಲೆಯೊಳಗೆ ಐದನೆಯ ತರಗತಿಯಲ್ಲಿ ಓದಿಕೊಳ್ಳುತ್ತಿದ್ದ ಕೃಷ್ಣ ಮೂರ್ತಿಯೆಂಬ ಹದಿನಾರುವರ್ಷ ವಯಸ್ಸುಳ್ಳ ಹುಡುಗನು ಪ್ರತಿದಿನವೂ ನಾರಾಯಣಮೂರ್ತಿಯ