ಪುಟ:ಸತ್ಯವತೀ ಚರಿತ್ರೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪ್ರಕರಣ ೩ರಿ.

  1. # * * 12 * */*/* * # )
  • * * # */* * */* * * * * * * * # 14 11 W \ \# ೬?'
  1. • + ' + 1 # ** # 1 # , # , " * * * * * * * * # \

ದ್ದುದರಿಂದ ತಾನು ಎಟಕಿಸಿಕೊಂಡು ಮನೆಯೆಲ್ಲಾ ಹಾರಿಹೋಗುವಂತೆ ಜಗಳವಾ ಡಿದಳು. ಅವರಿಬ್ಬರೂ ಮಾತಿನಲ್ಲಿ ಒಬ್ಬರಿಗೊಬ್ಬರು ಸೋಲತಕ್ಕ ವರಲ್ಲ. ಅದ ರಿಂದ ಚಿತ್ರವಿಚಿತ್ರವಾಗಿ ವರ್ಣನೆಗಳನ್ನು ಕಲ್ಪಿಸಿ ಬಯ್ದ ಹಾಗೆ ಬಯ್ಯದೆ ಭಾಷೆಯ ಇರುವ ಆಡಬಾರದ ಮಾತುಗಳನ್ನೆಲ್ಲಾ ಉಪಯೋಗಿಸುವುದಕ್ಕೆ ಮೊದಲು ಮಾಡಿ ದರು. ಲಕ್ಷ್ಮೀನಾರಾಯಣಯ್ಯನು ಅದನ್ನು ಕೇಳಿ ಸಹಿಸಲಾರದೆ ಹೆಂಡತಿಯ ನ್ನು ಗದರಿಸಿಕೊಂಡು ಜಗಳವಾಡಬೇಡ ಎಂದು ಬಯ್ದನು. ಯಶೋದಮ್ಮ ನಿಗೆ ಕೋಪಾವೇಶದಿಂದ ಮೈಮೇಲೆ ಜ್ಞಾನವೇ ಇರಲಿಲ್ಲ. ಆದುದರಿಂದ ಆಕೆ ಮೆತ್ತಗಿರುವ ನನ್ನನ್ನು ಬಯ್ಯುವುದಕ್ಕೆ ಬರುವ ನಿಮ್ಮ ಬಾಯಿ ನಿಮ್ಮ ಸೊಸೆಯನ್ನು ಬಯ್ಯುವುದಕ್ಕೆ ಸೇರಿಹೋಯಿತೆ ಎಂದು ಗಂಡನಿಗೆ ಇದುರು ಬಿದ್ದಳು. ಎಷ್ಟು ಶಾಂತಾತ್ಮರಾದರೂ ಅಂತಹ ಸಮಯದಲ್ಲಿ ಸಹಿಸಲಾದೀತೆ? ಆಗ ಲಕ್ಷ್ಮಿನಾರಾ ಯಣಯ್ಯನು ಕೋಪವನ್ನು ತಡೆಯಲಾರದೆ ಮೂಲೆಯಲ್ಲಿದ್ದ ಕಡ್ಡಿಯಿಂದ ಒಂದು ದೆಬ್ಬೆ ಹಾಕಿದನು, ಆಮೇಲೆ ಯಶೋದಮ್ಮ ನು ಗೊಳೋ ಎಂದು ಅಳುತ್ತಾ ಗಟ್ಟಿಯಾಗಿ ಕೂಗುತ್ತಾ ಶೋಕಿಸುವುದಕ್ಕೆ ಪ್ರಾರಂಭಿಸಿದಳು. ಅದುವರೆಗೆ ಕಿರು ಮನೆಯಲ್ಲಿ ಮಂಚದಮೇಲೆ ಮಲಗಿದ್ದು ವಿನೋದ ನೋಡುತ್ತಿದ್ದ ವೆಂಕಟೇಶನು ಒಳಗಿನಿಂದ ಎದ್ದು ಬಂದು ತಾಯಿಯ ಮೇಲಣ ಕೋಪದಿಂದ ಹೆಂಡತಿಯನ್ನು ಹಿಡಿದುಕೊಂಡು ಹೊಡೆದನು.' ಆಗ ಸುಂದರಮ್ಮನು ಮನೆಯಲ್ಲಿ ಹೆಣ ಹೋದಹಾಗೆ ತಲೆಯನ್ನು ಬಿರಿ ಹೊಯ್ದು ಕೊಂಡು ಕೆಳಗೆ ಬಿದ್ದು ಉರುಳಾಡುತ್ತಾ ಊರಿಗೆಲ್ಲಾ ಕೇಳಿಸುವಂತೆ ಗೋಳಾಡಿ ರೋದನವಾಡಿದಳು. ಸಾಧಾರಣವಾಗಿ ಮರ್ಖರ ಕಾರ್ಯಸಾಧನೆ ಗೆ ಅಳುವೇ ಮುಖ್ಯಸಾಧನ. ಯಾವಾಗ ಬೇಕಾದರೂ ಆದು ಸಿದ್ಧವಾಗಿರುವುದ ಲ್ಲವೆ ? ಸ್ತ್ರೀಯರಿಗೆ ವಿದ್ಯಾಭ್ಯಾಸಮಾಡಿಸಿ ಐಕಮತ್ಯದಿಂದ ಲಾಭವುಂಟೆಂದು ಅವ ರು ತಿಳಿದು ಕೊಳ್ಳುವಂತೆ ಮಾಡಿದರೆ ಅವರು ವಿವೇಕಿನಿಯರಾಗಿ ಜಗಳವಾಡದೆ ಒಟ್ಟಾಗಿಯೇ ವಾಸಮಾಡುತ್ತಾರೆ. ಒಂದು ಮನೆಯಲ್ಲಿ ನೂರು ಮಂದಿ ಗಂಡಸ ರಾದರೂ ಇರಬಹುದು, ಇಬ್ಬರು ಹೆಂಗಸರುಮಾತ್ರ ಇರುವುದಕ್ಕೆ ಆಗುವುದಿಲ್ಲ ವೆಂಬ ಮಾತು ಆಗ ಸುಳ್ಳಾಗದೆ ಇದ್ದೀತೆ. ಬಳಿಕ ಮದುವೆಗಾಗಿ ಬಂದಿದ್ದ ನಂಟ ರೆಲ್ಲರೂ ತಮ್ಮ ತಮ್ಮ ಗ್ರಾಮಗಳಿಗೆ ಹೊರಟುಹೋದರು, ಯಶೋದಮ್ಮನು ನಾದಿನಿಯನ್ನೂ ಸೋದರಸೊಸೆಯಾದ ಸೂರಮ್ಮನನ್ನೂ ತನಗೆ ಪ್ರೀತಿಪಾತ್ರರಾಗಿ ದ್ದುದರಿಂದ ತನ್ನ ಹತ್ತಿರವೇ ಕೆಲವು ದಿನಗಳವರೆಗೆ ಇಟ್ಟು ಕೊಂಡಿದ್ದಳು. ಸೂರ