ಪುಟ:ಸತ್ಯವತೀ ಚರಿತ್ರೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ ೪೫

  • ೬ Fxy \# + > ** * J * * * * * * * # ' , , * ' + ' \

ಪಾರ್ವ-ನಾವು ಹಾಗೆ ದೂಷಿಸಬಾರದು, ಶಾಸ್ತ್ರದಲ್ಲಿ ಹೇಳಿದುದನ್ನು ದೂಷಿಸಿದರೆ ಕಣ್ಣುಗಳು ಹೋಗುತ್ತವೆ. ನಮಗೆ ಎಷ್ಟು ಕಷ್ಟವಾಗಿ ಕಾಣಬಂ ದರೂ ಶಾಸ್ತ್ರ ಹೇಳಿದಂತೆ ನಡೆದರೆ ಬಹು ಪುಣ್ಯ, ಆಗಲೂ ಎಲ್ಲಿಯೋ ಲಕ್ಷಕ್ಕೆ ಒಬ್ಬ ವೀರಪತಿವ್ರತೆ ಸಹಗಮನ ಮಾಡುತ್ತಿದ್ದಳೇ ಹೊರತು ಎಲ್ಲರೂ ಮಾಡುತ್ತಿರ ಲಿಲ್ಲ. ಚಿತೆಗೆ ಬೆಂಕಿ ಹಾಕುವಾಗ್ಗೆ ನನ್ನ ಮೈಯೆಲ್ಲಾ ಬೆವರಿ ಮರಣ ಕಂಪನ ವೆತ್ತಿ ನಿಲ್ಲಲಾರವೆ ಹಿಂದಿರುಗಿಬಂದು ಬಸವಳಿದು ಕೆಳಗೆ ಬಿದ್ದೆನು, ಮೈಗೆ ಉರಿ ಸೋಕಿದೊಡನೆಯೆ? ಆ ಹುಡುಗಿ ಕಿಿಂದು ಗಟ್ಟಿಯಾಗಿ ಅರಚಿ ಕೊಂಡು ಬೆಚ್ಚಿ ಬಿದ್ದು ಎದ್ದು ಅಳುತ್ತಾ ಕೆಳಕ್ಕೆ ಧುಮುಕಿದಳು. ಆಗ ತಂದೆ ಅವಳನ್ನು ಎಷ ಬಲ್ಕು ಜಾವಹೊತ್ತಿನವರೆಗೆ ಶಾಸ್ತ್ರದಲ್ಲಿ ಹೇಳಿದ ಪ್ರಾಯಶ್ಚಿತ್ರಗಳನ್ನೆಲ್ಲಾ ಮಾಡಿಸಿ ಪುನಃ ಮಲಗಿಸಿದರಂತೆ, ನಾನು ಅದನ್ನು ನೋಡದರೆ ಮನೆಗೆ ಓಡಿಬಂದೆನು. ಆ ರಾತ್ರಿಯೇ ನನಗೆ ಜ್ವರಬಂದಿತು. ಹತ್ತು ದಿನಗಳವರೆಗೆ ನಿದ್ದೆಯಲ್ಲಿಯ ಬೆಚಿ ಬೀಳುತ್ತಿದ್ದನು. ಅದು ಇನ್ನೂ ಮರೆಯಲಿಲ್ಲ. ಈಗಲೂ ಆ ಸಂಗತಿ ನೆನಪಿಗೆ ಬಂದರೆ ಭಯದಿಂದ ಮೈಯೆಲ್ಲಾ ಬೆವರುತ್ತದೆ. ಬಳಿಕ ತಿರುಗಿ ಮಲಗಿಸಿದಮೇಲೆ ಪುನಃ ಎದ್ದು ಬಾರದಂತೆ ಬ್ರಾಹ್ಮಣರು ಬಿದಿರುಕಡ್ಡಿಗಳಲ್ಲಿ ಗಟ್ಟಿಯಾಗಿ ಅಮುಕಿ ಹಿಡಿದು ಕೊಂಡು ಅಳುವ ಸದ್ದು ಕೇಳಿಸದಂತೆ ವಾದ್ಯಗಳನ್ನು ಬಾಜಿಸಿರಿ, ಎಂದು ವೇದ ಮಂತ್ರಗಳನ್ನು ಗಟ್ಟಿಯಾಗಿ ಹೇಳುತ್ತಾ ಒಂದು ನಿಮಿಷದೊಳಗಾಗಿ ದಹನಮಾಡಿ ಸಿದರಂತೆ. ಆ ಹುಡುಗಿ ಅಂದಿನಿಂದ ಪಿಶಾಚಿಯಾಗಿ ನಮ್ಮ ಊರಿನ ಹತ್ತಿರವೇ ಇದಾಳೆಯಂತೆ, ನಮ್ಮ ಕಾಲದಲ್ಲಿ ಅಂತಹ ಪತಿವ್ರತೆಯರಿದ್ದರು. ಈ ಕಾಲದ ಈ ಗಂಡ ಮನೆಗೆ ಬಂದರೆ ಮೇಲಕ್ಕೆ ಏಳುವುದೇ ಇಲ್ಲ, ನಮ್ಮ ಕಾಲದಲ್ಲಿ ಸೊಸೆ ಯರು ತಮ್ಮ ಗಂಡಂದಿರೊಂದಿಗೆ ಮಧ್ಯಾಹ್ನ ಮಾತಾಡಿದರೆ ಅತ್ತೆಯರು ಕೊಂದು ಹಾಕುತ್ತಿದ್ದರು. ಈಗಿನವರು ಅತ್ತೆ ಮಾವಂದಿರ ಇದಿರಾಗಿಯೇ ಗಂಡಂದಿರೊಂದಿ ಗೆ ಗುಸುಗುಟ್ಟುತ್ತಾರೆ, ಕಾಲವೆಲ್ಲಾ ಕೆಟ್ಟು ಹೋಯಿತು. ಸತ್ಯ-ಅಜ್ಜಮ್ಮಾ, ಹೊತ್ತಾಯಿತು.” ಈಸಾರಿ ಹೋಗಿ ಮಲಗಿಕೊ. ಎಂದು ಆ ರಾತ್ರಿ ಎಲ್ಲರೂ ಹೋಗಿ ಮಲಗಿಕೊಂಡು ಸುಖವಾಗಿ ನಿದ್ರೆ ಮಾಡಿದರು. ಸತ್ಯವತಿ ಗ್ರಹಣ ನೋಡಿದಳೆಂಬ ಸುದ್ದಿ ಆ ಊರಿನಲ್ಲೆಲ್ಲಾ ಹಬ್ಬಿತು. ಎಲ್ಲರೂ ಮಂಗಿನಮೇಲೆ ಬೆರಳಿಟ್ಟು ಕೊಂಡು ಆಶ್ಚರ ಪಡುತ್ತಾ ಸತ್ಯವತಿ ಹೆರುವ ಮಗುವಿಗೆ ಯಾವ ಅಂಗವು ಸೊಟ್ಟೆಯಾಗಿರುವುದೋ ನೋಡಬೇಕೆಂದು ಬೆಟ್ಟದಷ್ಟು ಆಸೆಯ ನ್ನು ಇಟ್ಟು ಕೊಂಡಿದ್ದ ರು. ಇ~