ಪುಟ:ಸತ್ಯವತೀ ಚರಿತ್ರೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಪ್ರಕರಣ ಚ೩ • :

  • * * * * * * * * * * * * * \+ \f +

ದ್ದಾರೆಂದು ಆತನು ಎಷ್ಟು ಮಂದಿಗಳ ಮುಂದೆ ಹೇಳಿದರೂ ರಾಜಕೀಯ ಪಾಠ ಶಾಲೆಯಲ್ಲಿ ಐದನೆಯ ತರಗತಿಗೆ ಸೇರುವುದಕ್ಕೆ ಮಾತು ಬೇರೆ ಸಹಕಾರಿ ಯಾಗಲಿಲ್ಲ. ಆತನು ಮೊದಲು ಓದುತ್ತಿದ್ದ ತರಗತಿಯಲ್ಲಿಯೇ ಪುನಃ ಓದಲೇ ! ಎಂಬ ದುರಭಿಮಾನದಿಂದ ಯಾವ ಪಾಠಶಾಲೆಗೂ ಸೇರದೆ ಕೆಲವು ದಿನಗಳನ್ನು ಕಳೆದು, ಬಳಿಕ ತಾನು ಯಾವುದೋ ಒಂದು ಪಾಠಶಾಲೆಗೆ ಸೇರುವುದಕ್ಕೆ ಪ್ರಯತ್ನಿ ಸಿದನು, ಆದರೆ ನಾರಾಯಣಮೂರ್ತಿ ತಾನು ಉಪಾಧ್ಯಾಯನಾಗಿದ್ದ ಪಾಠ ಶಾಲೆಯಲ್ಲೇ ಸೇರಂದು ನಿರ್ಬಂಧಪಡಿಸಿದುದರಿಂದ ಮೊದಲನೆಯ ಪ್ರಯತ್ನವನ್ನು ಬಿಟ್ಟು ಉದ್ಯೋಗಗಳನ್ನು ಸಂಪಾದಿಸಿ ಮನೆಗೆ ಚಿನ್ನದ ಕಲಶಗಳನ್ನು ಹಾಕಿಸು ತೇನೆಂದು ಪ್ರಯಾಣ ಮಾಡಿ ಹೋಗಿ ಶಿರಸ್ಕಾರರನ್ನು ಅನುಸರಿಸುವುದಕ್ಕೆ ಮೊದಲು ಮಾಡಿದನು. ಆ ಶಿರಸ್ಕಾರನು ಲಂಚ ವೇ ಉದ್ಯೋಗಧರ್ಮವೆಂದೂ ವ್ಯಭಿಚಾರವೇ ಪುರುಷಧರ್ಮವೆಂದೂ ಎಣಿಸಿದ ಸಿದ್ಧಾಂತದಲ್ಲಿ ಸೇರಿದ ಪೂರ್ವ ಕಾಲದವನು. ಆದು ದರಿಂದ ಈಗಿನ ವಿದ್ಯೆಯನ್ನೂ ಈಗಣವರ ನಡತೆಗಳನ್ನೂ ಆಕ್ಷೇಪಿಸುತ್ತಾ ತನ್ನ ಹತ್ತಿ ರಕ್ಕೆ ಒರತಕ್ಕ ವರ ನಡತೆ ಹೇಗಿದ್ದರೂ ಅವರು ವಿಭೂತಿಯಿಟ್ಟು ಕೊಂಡಿದ್ದಾರೆಯೋ ಇಲ್ಲವೋ ಎಂದು ನೋಡುವುದರಲ್ಲಿಯ, ಮೀಸೆಗಳನ್ನು ಬೆಳೆಯಿಸಿಕೊಂಡಿದ್ದಾ ರೆಯೋ ಇಲ್ಲವೋ ಅದನ್ನು ಕಂಡುಹಿಡಿಯುವುದರಲ್ಲಿಯ, ಕಚ್ಚೆಪಾವಡೆಯನ್ನು ಹಾಕಿಕೊಂಡಿರುವರೋ ಇಲ್ಲವೋ ಎಂದು ವಿಚಾರಿಸುವುದರಲ್ಲಿಯ, ಕುತೂಹಲ ವುಳ್ಳವನಾಗಿದ್ದನು, ನಮ್ಮ ರಾಮಸ್ವಾಮಿಯು ಈಗ ಆತನ ಅನುಗ್ರಹವನ್ನು ಸಂಪಾ ದಿಸಿಕೊಳ್ಳುವುದಕ್ಕೆ ತಿರುಗುತ್ತಿದ್ದನಾದುದರಿಂದ ಒಳಗೆ ಭಕ್ತಿ ಇಲ್ಲದಿದ್ದರೂ ಮೇಲೆ ಬೇಕಾದಷ್ಟು ವೇಷಗಳನ್ನು ಹಾಕಿಕೊಂಡು ಅವನಲ್ಲಿಯೇ ಪುಣ್ಯವೂ ಪುರು ಪಾರ್ಥವೂ ಇರುವುದೆಂದೆಣಿಸಿ ಸ್ತ್ರೀಯರು ವಿದ್ಯೆಯನ್ನು ಓದಬಾರದೆಂದೂ ಪುರು ಷರು ಇಂಗ್ಲಿಷ್‌ ಓದಬಾರದೆಂದೂ ವಾದಿಸುವುದಕ್ಕೆ ತೊಡಗಿದನು. ಇಷ್ಟೇಅಲ್ಲದೆ ಸ್ನಾ ನವನ್ನು ಮಾಡಿ ಜುಟ್ಟನ್ನು ಒರಸಿ ಗಂಟುಹಾಕಿಕೊಂಡು ದೇವತಾರ್ಚನೆಯನ್ನು ಮಾಡಿ ರಾಮಾಯಣವನ್ನು ಸà: ರಾಯಣಮಾಡಿ ಹಗಲೆಲ್ಲಾ ಭಕ್ತಾಗ್ರೇಸರನಾಗಿದ್ದು ರಾತ್ರಿ ಕಾಲದಲ್ಲಿ ಬೆಲೆವೆಣ್ಣಳ ಮನೆಗೆ ಹೋಗುವ ದೊಡ್ಡ ಮನುಷ್ಯರನ್ನು ನೋಡಿ ೭ವರಂತೆ ತಾನೂ ವ್ರವರ್ತಿಸಬೇಕೆಂದು ಯೋಚಿಸಿ ರಾಮಸ್ವಾಮಿ ರಾತ್ರಿಕಾ ಲದ ಸಂಚಾರಕ್ಕೆ ಆರಂಭಿಸಿದನು. ನಾರಾಯಣಮೂರ್ತಿಯೂ ಸತ್ಯವತಿಯ ಇದನ್ನೆಲ್ಲಾ ನೋಡಿ ರಹಸ್ಯವಾಗಿ ಆಲೋಚಿಸಿ ಆತನನ್ನು ದುರ್ಮಾರ್ಗದಿಂದ ಹಿಂದಿರುಗಿಸುವುದಕ್ಕಾಗಿ ಹಿ ಔಪಾಯಗಳನ್ನು ಯೋಚಿಸಿ, ಮೂರು ತಿಂಗಳ