ಪುಟ:ಸತ್ಯವತೀ ಚರಿತ್ರೆ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೊಂದನೆಯ ಪ್ರಕರಣ ೫೭.

    • PAz " ht > L ++ * *+y * * * * * * * * * # # # # # # # # ) +# *

ವೆಚ್ಚವನ್ನೂ ಪಶುಗಳ ಸಂರಕ್ಷಣೆಯನ್ನೂ ತಾನೇ ವಿಚಾರಿಸುತ್ತಾ ಒಂದು ಕಾಸ ಸ್ಟಾದರೂ ವ್ಯರ್ಥವಾಗಿ ವೆಚ್ಚ ಮಾಡುವುದಕ್ಕೆ ಮನಸ್ಸಿಲ್ಲದೆ ಸೇವಕರ ಸಂಬಳ ಭತ್ಯ ಗಳನ್ನು ತನ್ನ ಕೈಯಿಂದಲೇ ಕೊಡುತ್ತಿದ್ದಳು. ಬಿಸಿಲು ತಂಪಿದಮೇಲೆ ಹೂವಿನ ಗಿಡಗಳಿಗೆ ನೀರೆರೆಯುತ್ತಲೂ ಅಗೆಯುತ್ತಲೂ ಬೆವರು ಬರುವಂತೆ ಕೆಲಸಮಾಡು ತಿದ್ದಳು, ಅವಕಾಶವಾದಾಗ ನೆರೆಹೊರೆಯ ಹೆಂಗಸರಿಗೆ ವಿದ್ಯಾಬುದ್ಧಿಗಳನ್ನು ಹೇಳುತ್ತಲೂ ಇತರ ಸಹಾಯಗಳನ್ನು ಮಾಡುತ್ತಲೂ ಕೈಯಲ್ಲಾದಮಟ್ಟಿಗೆ ಮೇಲುಮಾಡುತ್ತಾ ಇದ್ದಳು, ಅದರಿಂದ ಸುತ್ತುಮುತ್ತಲಿನ ಕುಟುಂಬಗಳ ಲ್ಲೆಲ್ಲಾ ಆಶ್ವರಕರವಾದ ಬದಲಾವಣೆಯುಂಟಾಗಿ ಎಷೆ ಕಲಹಗಳು ಅಡಗಿ ಸುಖವು ಹೆಚ್ಚಾಗುತ್ತಾ ಬಂದಿತು, ನೋಡಿದಿರಾ ? ಒಬ್ಬ ಉತ್ತಮ ಸ್ತ್ರೀಯಿಂದ ಎಷ್ಟು ಮಂದಿಗಳಿಗೆ ಎಷ್ಟು ವಿಧಗಳಾದ ಲಾಭಗಳು ಉಂಟಾಗುತ್ತಿವೆ. ಇದನ್ನು ಓದುವುದಕ್ಕೆ ಮನಸ್ಸಿಟ್ಟು ನೀವೆಲ್ಲರೂ ಸತ್ಯವತಿಯ ಹಾಗೆ ಪ್ರವರ್ತಿಸುವುದಕ್ಕೆ ಪ್ರಯತ್ನ ಮಾಡಿರಿ, ಆ ಬೀದಿಯಲ್ಲಿದ್ದ ಸ್ತ್ರೀಯರಿಗೆಲ್ಲಾ ಸತ್ಯವತಿಯೆಂದರೆ ಪ್ರಾಣ ವಾಗಿದ್ದುದರಿಂದ ಯಾರಿಗೆ ಯಾವ ಒಳ್ಳೆಯ ವಸ್ತು ಸಿಕ್ಕಿದರೂ ಅವರು ಅದನ್ನು ಸತ್ಯವತಿಗೆ ಕೊಡುತ್ತಿದ್ದರು, ಯಾರು ಯಾವ ಹೊಸ ಒಡವೆಯನ್ನು ಮಾಡಿಸಿ ಕಂಡರೂ ಸತ್ಯವತಿಗೆ ಮೊದಲು ತೋರಿಸುತ್ತಿದ್ದರು. ಅವರಿಗೆ ಯಾವ ಕಷ್ಟ ಬಂದರೂ ಓಡಿಬಂದು ಆಕೆಯೊಡನೆ ಹೇಳುತ್ತಿದ್ದರು, ಎಳೆ ಮಕ್ಕಳಿಗೆ ಸ್ವಲ್ಪ ಇರುಸುಮುರುಸಾಗಿದ್ದರೆ ಆಕೆಯ ಬಳಿಗೆ ಬಂದು ಆಲೋಚಿಸುತ್ತಿದ್ದರು. ಗಂಡ ನಾಗಲಿ, ಅತ್ತೆಯಾಗಲಿ, ಅತ್ತಿಗೆಯಾಗಲಿ, ಹೊಡೆದರೂ ಬಯ್ದರೂ ಬಂದು ಆಕೆ ಯೊಡನೆ ಹೇಳಿಕೊಂಡು ಅಳುತ್ತಿದ್ದರು. ಆಗ ಆಕೆ ಅವರನ್ನು ಒಳ್ಳೆಯ ಮಾತುಗಳಿಂದ ಸಮಾಧಾನಪಡಿಸಿ ಬುದ್ದಿವಾದಗಳನ್ನು ಹೇಳಿ ಸಂತೋಷಪಡಿಸಿ ಪುನಃ ಕಳುಹಿಸುತ್ತಿ ದ್ದಳು, ನೆರೆಹೊರೆಯವರು ಜಗಳವಾಡಿಕೊಂಡು ತನ್ನೊಂದಿಗೆ ಹೇಳಿಕೊಳ್ಳುವುದಕ್ಕೆ ಬಂದಾಗ ಎಲ್ಲರಿಗೂ ಹೇಳುವಂತೆ ಅವರಿಗೂ ಹೇಳಿ ಸಮಾಧಾನಪಡಿಸಿ ನಗೆಮೊಗದಿಂದ ಅವರನ್ನು ಕಳುಹಿಸುತ್ತಿದ್ದಳು, ಯಾರಾದರೂ ದುರ್ಮಾರ್ಗದಲ್ಲಿ ಪ್ರವೇಶಿಸಿದರೆ ಸಾಧ್ಯವಾದ ಮಟ್ಟಿಗೆ ಪ್ರಯತ್ನ ಮಾಡಿ ನಯಭಯಗಳಿಂದ ಅವರಿಗೆ ಬುದ್ದಿಯನ್ನು ಹೇಳಿ ಸನ್ಮಾರ್ಗಕ್ಕೆ ತರುತ್ತಿದ್ದಳು. ಬಡವರಿಗಾರಿಗಾದರೂ ರೋಗಗಳಾಗಲಿ ಇತರ ಕಷ್ಟಗಳಾಗಲಿ ಬಂದಾಗ ಅವರ ಮನೆಗಳಿಗೆ ತಾನು ಹೋಗಿ ಆದರಿಸಿ ಪಠ್ಯ ಪಾನಗಳನ್ನು ವಿಚಾರಿಸಿ ಅವರ ಮಕ್ಕಳನ್ನು ತನ್ನ ಮನೆಗೆ ಎತ್ತಿಕೊಂಡು ಬಂದು ಹಾಲು ಕುಡಿಸಿ ತಿಂಡಿಯನ್ನು ಇಕ್ಕಿಸುತ್ತಿದ್ದಳು. ಹೀಗೆ ಸುಖವಾಗಿರುವ ಕಾಲ