ಪುಟ:ಸತ್ಯವತೀ ಚರಿತ್ರೆ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹನ್ನೆರಡನೆಯ ಪ್ರಕರಣ ୫୮ ದಿನಗಳು ತುಂಬಿದಮೇಲೆ ಒಂದುದಿನ ಸುಖಪ್ರಸವವಾಯಿತು, ಈಸಾರಿ ಸ್ತ್ರೀ ಶಿಶು ಜನನ, ಜಾತಿ ವೈದ್ಯವನ್ನು ತಿಳಿದ ಸೂಲಗಿತ್ತಿಯ. ಹತ್ತಿರವೇ ಇದ್ದಳು. ಹರಿ ಗೆಯ ಮನೆ ದೊಡ್ಡದಾಗಿದ್ದಿತು. ಶುದ್ದವಾದ ಗಾಳಿ ಪ್ರವೇಶಿಸುವ ಹಾಗೆ ಆ ಮನೆಗೆ ಅನೇಕ ಮಾರ್ಗಗಳಿದ್ದುವು, ದೇಹಾರೋಗ್ಯಕ್ಕೆ ಭಂಗವನ್ನುಂಟುಮಾಡುವ ಕುಂಪಟಿಯ ಹೊಗೆ ಮುಂತಾದವುಗಳೊಂದೂ ಇರಲಿಲ್ಲ. ಹೀಗೆ ಮೇಲಣ ಸುಖ ಗಳು ಎಷ್ಟಿದ್ದರೂ ಒಳಗೆ ನೆಮ್ಮದಿಯಿಲ್ಲ ದುದರಿಂದ ನೀರಾದ ನಾಲ್ಕನೆಯ ದಿನವೇ ಜ್ವರವೂ ತಲೆನೋವೂ ಬಂದು ಸತ್ಯವತಿಗೆ ನಿಶ್ಯಕ್ತಿಯನ್ನು ಂಟುಮಾಡುತ್ತಾ ಬಂದುವು. ನಾರಾಯಣಮೂರ್ತಿಯು ಎಷ್ಟು ಹಣವನ್ನು ವೆಚ್ಚ ಮಾಡಿ ಘನವೈದ್ಯರಿಂದ ಔಷ ಧಗಳನ್ನು ಕೊಡಿಸಿದರೂ ದೇಹವು ಸ್ವಸ್ಥವಾಗದೆ ದಿನಕ್ರಮದಿಂದ ಶರೀರದಲ್ಲಿ ತುಂಬಾ ನೋವು ಬಂದುದಲ್ಲದೆ ರಾತ್ರಿ ಕಾಲಗಳಲ್ಲಿ ಜ್ಞಾನವಿಲ್ಲದೆ ತಪ್ಪು ಮಾತು ಗಳನ್ನು ಆಡುವುದಕ್ಕೆ ಪ್ರಾರಂಭಿಸಿದಳು. ಆಕೆ ಯು ಕೆಲವು ವೇಳೆ ದೇಹ ಸ್ಮರಣೆ ಯಿಲ್ಲದೆ ಈ ಲೋಕವನ್ನೇ ಮರೆತು ಇರುತ್ತಿದ್ದಳು. ಹೀಗೆ ಕೆಲವು ದಿನಗಳು ಕಳೆದ ಬಳಿಕ ವೈದ್ಯರೂ ಸಹ ಆಕೆ ಬದುಕುವಳೆಂಬ ಆಸೆಯನ್ನು ಬಿಟ್ಟು ದೇವರೆ ಮೇಲೆ ಭಾರವನ್ನು ಹಾಕಿ ಔಷಧಗಳನ್ನು ಮಾತ್ರ ಕುಡಿಸಿ ಪೋಷಣನಿಮಿತ್ತವಾಗಿ ಯವೆಯ ಗಂಜಿಯನ್ನು ಗಂಟೆಗೊಂದುಸಾರಿ ಕೊಡಿಸುತ್ತಿದ್ದರು. ಮೊಟ್ಟ ಮೊದಲು ನಮನವಾಗುತ್ತಿದ್ದುದರಿಂದ ಯವೆಯ ಗಂಟೆಯು ದಕ್ಕದಿದ್ದರೂ ಕ್ರಮ ಬಾಗಿ ಆ ಗಂಜಿಯು ಸ್ವಲ್ಪ ಆಧಾರವಾಗಿ ಕೆಲವು ಸುಗುಣಗಳು ಕಾಣುತ್ತಾ ಬಂದುವು. ಆಗ ಸೀತೆಯ ಸುಬ್ರಹ್ಮಣ್ಯನ ಅತ್ತಿಗೆಯ ಮಂಚದ ಹತ್ತಿರವೇ ಸದಾ ಕಾದು ಕೊಂಡು ಕುಳಿತಿದ್ದು ಆಕೆಗೆ ಉಪಚಾರಗಳನ್ನು ಮಾಡುತ್ತಿದ್ದರು. ರಾಮಸ್ವಾಮಿಯು ಪ್ರಾತಃಕಾಲದಲ್ಲಿ ಒಂದುಸಾರಿ ಕಿರುಮನೆಗೆ ಹೋಗಿ ನೋಡಿ ಬುಡುಬುಡಿಕೆ ರಾಗಗಳನ್ನೆಳೆದು ಹೋಗುತ್ತಾ ಬಂದರೂ ಮೈಲಿಗೆಯಾದೀತೆಂಬ ಭಯದಿಂದ ಭೋಜನವಾದ ಬಳಿಕ ತಾನು ಆ ಮನೆಗೆ ಹೊಕ್ಕು ನೋಡದೆ ಹೆಂಡತಿ ಯನ್ನೂ ಹೋಗಲಿಸದೆ ನಿರ್ಬಂಧಪಡಿಸುತ್ತಿದ್ದನು. ಮಹಾಲಕ್ಷ್ಮಿಯು ಸತ್ಯವತಿ ಯನ್ನು ನಿಜವಾಗಿ ಹೆತ್ತ ತಾಯಿಯಂತೆ ನೋಡಿಕೊಂಡು ಪ್ರೀತಿಸುತ್ತಾ ಇದ್ದಳಾ ದುದರಿಂದ ತಾನು ಒಳಗೆ ಹೋಗದೆ ಇರುವುದಕ್ಕೆ ಮನಸ್ಸು ನಿಲ್ಲದೆ ಗಂಡಸಿಗೆ ಹೆದರಿ ಆತನು ಮನೆಯಲ್ಲಿರುವವರೆಗೆ ಸುಮ್ಮನಿದ್ದರೂ ಗಂಡನು ಹೊಸಲು ದಾಟಿ ದೊಡನೆಯೇ ಓರಗಿತ್ತಿಯ ಕಿರುಮನೆಯೊಳಗೆ ಹೊಕ್ಕು ಮುಖದ ಮೇಲೆ ಮುಖವ .ನ್ನಿಟ್ಟು ಕೊಂಡು ಅಳುತ್ತಾ ಭಯಪಟ್ಟು ನಿಂತಿರುತ್ತಿದ್ದಳು. ಒಳಿಕ ನಾರಾಯಣ