ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vi ಹವಾಯಿತು - 1870ನೆಯ ವರ್ಷದಲ್ಲಿ ಇವರು ಪ್ರವೇಶ ಪರೀಕ್ಷೆಯನ್ನು ಜ ಯಿಸಿದವರಾದರು. 1875ನೆಯು ವರ್ದದವರೆಗೂ ಅಲ್ಲಲ್ಲಿ ಪಾಠಶಾ ತೋಪಾಧ್ಯಾ ದುರಾಗಿ ಕೆಲಸ ನೋಡುತ್ತಿದ್ದ ಇವರನ್ನು ಆ ಸಂವತ್ಸರದಲ್ಲಿ ರಾಜಮಹೇಂದ)ಪು ರದ ಸರ್ವಕಲಾ ಶಾಲೆದ ತೆಲುಗು ಪಂಡಿತರನ್ನಾಗಿ ನಿಯಮಿಸಿದರು, ಇದುವರೆ ಗೂ ಅದೇ ಕೆಲಸದಲ್ಲಿದ್ದ ಇವರು, ಈಗ ನೂತನವಾಗಿ ಮದರಾಸಿನ ಸಂಸ್ಥಾನ ಕಲಾಶಾಲೆಯ ತೆಲುಕು ಪಂಡಿತರಾಗಿ ಸಿಯಮಿಸಲ್ಪಟ್ಟಿರುವರು, ರೇತಲಿಂಗಂ ಸಂತರು ಅಂದಿನಿಂದ ಇಂದಿನವರೆಗೆ ಬರೆದ ಗ್ರಂಥಗಳನ್ನು ಒಟ್ಟಾಗಿ ಎಣಿಸಿದರೆ ನೂರಕ್ಕಿಂತಲೂ ಹೆಚ್ಚಾಗಿಯೇ ಇವೆ, ಪದ್ಯ, ಗದ್ಯ, ನಾಟಕ, ಪ್ರಹಸನ, ಕಥಾಪ್ರಬಂಧ, ಶಾಸ್ತ್ರಿ ಯಪುಸ್ತಕಗಳೆಂಬ ಈ ಸಿಹ್ನದು ಗಳಲ್ಲಿ ಇವರು ಬರೆದದೆ ಬಿಟ್ಟುದೊಂದೂ ಇಲ್ಲ. ಈ ಉದ್ದಾಮಕವಿಯಿಂದ ಬರೆ ಮಲ್ಪಟ್ಟ ಕಾವ್ಯಗಳು ಉತ್ತಮರಾದ ಪ್ರಾಚೀನಕವಿಗಳ ಗ್ರಂಥಗಳಿಗೆ ಸಮಾನ ವಾಗಿದೆ ಯೆಂದು ಲಾಕ್ಷಣಿಕರು ಒಪ್ಪುವರು, ತೆಲುಗಿನಲ್ಲಿ ನೂತನರೀತಿಯು ಕಲ್ಪನಾಕಥೆಗಳನ್ನು ಬರೆಯಲು ಮೊದಲುಮಾಡಿದವರು ಇವರೆ - ಇವರು ಬರೆದ ಇಂತಹ ಪುಬಂಧಗಳೊಳಗೆ ರಾದ ಶೇಖರ ಚರಿತ್ರೆ, ಸತ್ಯ ವಚರಿತ್ರೆ, ಸತ್ಯರಾಜಾ ಪೊರದೇಶಯಾತ್ರೆಗಳು ಎಂಬೀ ಮೂರು ಪುಸ್ತಕಗಳು ಪ್ರಸಿದ್ದವಾ ಗಿವೆ. ಇವುಗಳಲ್ಲಿ ಮೊದಲನೆಯೆರಡು ಈ ಮೊದಲೇ ಕನ್ನಡಿಸಲ್ಪಟ್ಟಿವೆ - ಇವರು ಸತ್ಯರಾಜಾಪೂರದೇಶಯಾತ್ರೆಗಳನ್ನು ನಾವು ಭಾಗಗಳಾಗಿ ಬರೆದು ಲುಪಕ್ರಮಿಸಿ ಇಂದಿನ ಎರಡನ್ನು ಮಾತ್ರವೇ ಬರೆದು ಪ್ರಕಾಶಗೊಳಿಸಿರುವರುಸಂಸ್ಕೃತಾಂಧಗಳಲ್ಲಿ ಹೇಗೆಯೋ ಹಾಗೆಯೇ ಇವರಿಗೆ ಇಂಗ್ಲೀಷಿನಲ್ಲಿನ ಒಳ್ಳೆಯ ಪಾಂಡಿತ್ಯವಿರುವುದರಿಂದ, ಇಂಗ್ಲೀಷು ಗ್ರಂಥಕರ್ತೃಗಳಲ್ಲಿ ಪ್ರಸಿದ್ಧರಾದ ಅನೇಕರ ಗ್ರಂಥಗಳನ್ನು ಇವರು ಗದ್ಯರೂಪವಾಗಿಯೂ ಪದ್ಯ ರೂಪವಾಗಿಯೂ ತೆಲುಗಿಗೆ ಪರಿವರ್ತಿಸಿರುವರು, ಇವರ ಗ್ರಂಥಗಳ ಕೈಲಿ ಸುಲಭವಾಗಿಯೂ ಅರ್ಥಪುಷ್ಟಿಯಿಂದ ಕೂಡಿದುದಾಗಿಯೂ ಇರುವುದರಿಂದ ಸಾಧಾರಣಾಕ್ಷರದ ಗುರುತು ಉಂಟಾದಂದಿನಿದ ತೆಲುಗಿನಲ್ಲಿ ಒಳ್ಳೆಯ ಪಾಂಡಿತ್ಯವುಂಟಾಗುವ ವರೆಗೂ ಇವರ ಗ್ರಂಥಗಳನ್ನೇ ಓದಬಹುದು. ಆಂಧ) ಸಾಹಿತ್ಯದ ಆಧುನಿಕ ಗ್ರಂಥ ಸಮುದಾಯದಲ್ಲಿ ವೀರೇಶಲಿಂಗಂ ಸಂತರು ರಚಿಸಿದ ಗ್ರಂಥಗಳನ್ನು ಬಿಟ್ಟರೆ, ಉಳಿದುದು ಬಹಳಮಟ್ಟಿಗೆ ಸ್ವಲ್ಪ ವೇ ಎನ್ನ ಬೇಕು.