ಮಾಡಿ, ವಿನಾಡದ ಶಿಕ್ಷಕೆಂದು ಇನ್ನೂರು ರೂಪಾಯನ್ನು ಮತ್ತೊಬ್ಬರ ಸಂ ಗಡ ಕಡವಾಡಿ, ಕುಕ್ಖಸಂವತ್ಸರ ವೈಶಾಖ ಮಾಸದಲ್ಲಿ ಒಂದು ಒಳ್ಳೆಯ ಮುಹ ರ್ತದಲ್ಲಿ ನನಗೆ ಮದುವೆ ಮಾಡಿದರು. ನನಗೆ ಆಗ ಹದಿನೆಂಟು ವರ್ಷ ತುಂಬಿತು. ನನ್ನ ಭಾರೈ ರೂಪವತಿಯಾಗದೆ ಹೋದರೂ ಗುಣವತಿಯಾಗಿ ತೋರುತ್ತಿ ದ್ದಳು, ಕುಲಕಾಂತೆದುರಿಗೆ ಗುಣವೇ ಪ್ರಧಾನವಲ್ಲದೆ ಚೆಲುವಿಕೆಯಲ್ಲಿ, ಹೀಗೆ ಒಂದು ವರ್ಷಕಳೆದಮೇಲೆ ನನ್ನ ಭಾರೆಗೆ ಸ್ಕೂಟಕವಾಯಿತು, ಆಗಲಾ ಚಿಕ್ಕ ವಳಿಗೆ ಜೀವಿಸುವುದೇ ದುರ್ಸ'ಟವೆಂದು ಎಲ್ಲರೂ ಭಾವಿಸಿದರೂ, ನಾನು ಪುರಸ್ಥ ರಣೆ ಮಾಡಿದ ವೀರ ಹನುಮಂತ ಮಂತ್ರಪ್ರಭಾವದಿಂದ ಅವಳಿಗೆ ಪ್ರಾಣಭಯ ತಪ್ಪಿ ಬಲಕಣ್ಣು ಮಾತ್ರ ಹೋಯಿತು, ಮುತುಂಬ ಮಚ್ಚೆಗಳು ಬಿದ್ದು ಆಕೆ ಮತ್ತ ಹೂ ಕುರೂಪಿಣಿಯಾಗಲು « ಭಾರಾ ರೂಪವ!e ಶತು?” ಎಂಬರ ಬಾಧೆ ನನಗೆ ಇಲ್ಲದೆ ಹೋಗುವುದಾಯಿತು ನಾನು ನನ್ನ ಒಂದು ಪರೀಕ್ಷೆಯಲ್ಲಿ ತೀರ್ ನಾಗಿ ಪಾಠಶಾಲೆ ಬಿಡುವಾಗ ನನ್ನ ಹೆಂಡ! ಮೈನೆರೆದು ಸಂಸಾರಕ್ಕೆ ಬರುವ ಳಾದಳು, ನಮ್ಮ ಮಾತೃಗಳಮೇಲೆ ಬರುವ ಆದಾಯವೆಲ್ಲವೂ ನಾವು ಮಾಡಿದ ಸಾಲಗಳ ಬಡ್ಡಿಗೆಕೂಡ ಸಾಲದುದರಿಂದ, ನನ್ನ ಕುಟುಂಬ ಭಾರಕೂಡ ನಮ್ಮ ಸೋದರಮಾವನ ಮೇಲೆಯೇಬಿತ್ತು, ಹೀಗಾಗಲು ಎರಡು ಕುಟುಂಬಗಳನ್ನೂ ಪೋಷಿಸುವುದು ದುರ್ಲಭವಾದುದರಿಂದ ನಮ್ಮ ಸೋದರಮಾವನವರು ನನ್ನ ಶಾಲೆಬಿಡಿಸಿ, ವಿಶಾಖಪಟ್ಟಣಕ್ಕೆ ಹೋಗಿ ಹಾರಾರನ್ನೋ ಆಶ್ರಯಿಸಿ ಬಹಳ ಕಷ್ಟಪಟ್ಟು, ದೊರೆತನದವರ ಕಾರಸ್ಥಾನದಲ್ಲಿ, ತಿಂಗಳಿಗೆ ಹದಿನೈದು ಪಾಯಿ ಸಂಬಳದ ಒಂದು ಉದ್ಯೋಗವನ್ನು ನನಗೆ ಹೇಳಿಕೊಡಿಸಿದರು, ಆ ಕಾಲದಯೇ ಸಾಲಗಾರರು ನನ್ನ ಮೇಲೆ ವ್ಯಾಜ್ಯಗಳನ್ನು ಮಾಡಿ ಧನದಿ ಗುಣಕ್ಕೆ ಕೇರುಗಳನ್ನು ಹೊಂದಿ ನನ್ನ ಮಾನ್ಯಗಳನ್ನು ಮಾರಿಸಿದರು. ನನ್ನ ಮಾನ್ಯಗಳ ವಿಕ್ರಮದಲ್ಲಿ ಬಂದ ಹಣದಿಂದ ನನ್ನ ಸಾಲ ವರ್ಧ ರಿತು ಮಿಕಾ ದುದು ತೀರುವುದಕ್ಕೆ ಸಾಧನಕಾಣಲಿಲ್ಲ, ಸಾಲಗಾರರು ಪ್ರತಿದಿನವೂ ಬಂದು ನನ್ನ ಮನೆ ಸುತ್ತಿಕೊಂಡು ಖುಣ ತೀರಿಸೆಂದು ನನ್ನ ನ್ನು ನಾನಾ ವಿಧವಾಗಿ ಪೀಡಿಸಲು ಮೊದಲು ಮಾಡಿದರು, ಈ ತೊಂದರೆಗಳಲ್ಲಿ ಇರುವಾಗಲೇ ನನಗೆ Mಮದಿಂದ ಗ್ರಾಮಕ್ಕೆ ತಿರುಗುವ ಮತ್ತೊಂದು ಕೆಲಸವಾಯಿತು, ಈ ಹೊಸ ಕೆಲಸದ ಸಂಬಳ ವಿಪ್ಪತ್ತು ರೂಪಾಯರಾದರೂ ಆ ಹೆಚ್ಚಿದ ಸಂಬಳ ಪ್ರಾಣ ವ್ಯಯಗಳಿಗೇ ಸಾಲದಿತ್ತು, ಈಗ ಇನ್ನೊಂದು ಬಗೆಯ ಹೊಸ ವೆಷ್ಟವು
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೧೮
ಗೋಚರ