14 ನಾನು ಪ್ರತ್ಯಹ ಕೊಟ್ಟಿದ್ದು ರಾಹುಲಡಲ್ಲಿ ಪಯಣಕ್ಕೆ ಹೆ ರಸ ಭುರಂದು ಆರನು ಹೇಳದನು, ನಮ್ಮ ದೇಶದಲ್ಲಿ ರಾಹುಕಾಲವೆಂದು ಪುರಾಣವಿಲ್ಲ: ಪ್ರಕಾಲದಲ್ಲಿ ಮಾತ್ರ ಹೊರಡರು' ಎಂದು ನಾನು ಹೇಳಿದೆನು. ನಿಮ್ಮ ಉತ್ತರ ದೊಶದವರು ಏನೂ ತಿಳಿಯದ ಮೂಢರೆಂದು ಅವನು ಹೇಳಿದನು, ಇಷ್ಟರಲ್ಲಿ ನಾವು ಏರಿದ ಹೊಗೆಬಂಡಿ ಹೊರಟು ನಡೆಯಲಾರಂಭಿಸಿತು, ನಮ್ಮ ಬ್ರಾಹ್ಮಣನು ದೇಶ ತಿಳದ ಅನುಭವಜ್ಞನಾದುದರಿಂದಲೂ, ದೇಶಭಾಷೆ ತಿಳದವ ನಾದುದರಿಂದಲೂ, ಎಷ್ಟೇ ಪ್ರಮಾಣಗಳನ್ನು ಮಾಡಿದವನಾದುದರಿಂದಲೂ, ಭದ್ರವಾಗಿರುವುದೆಂದು ನನ್ನ ಮೂಟಿಯನ್ನು ಕೂಡ ಆತನ ಸಂಚಿಯಲ್ಲಿಯೆ ಇಟ್ಟೆನು, ಆ ದಿನ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಬಂಡಿ ಗೂಡಲೂರು ಬಳಿಯಲ್ಲಿ ಹತ್ತು ನಿಮಿಷ ನಿಲ್ಲಲಾಗಿ, ನಾನಲ್ಲಿ ಲಘುಶಂಕೆಗೆ ಹೋಗುವುದಕ್ಕೆ ದೆವು, ಇಷ್ಟರೊಳಗೆ ನಾವೇರಿದ ಬಂಡಿಯಲ್ಲಿ ನಮ್ಮ ಹತ್ತರವೇ ಬೇರೆ ಯಾರೋ ಹೊಸಬರು ಬಂದು ಕುಳಿತು ಕೊಂಡಿದ್ದರು. ನಾವು ತಿರಿಗಿ ಬಂದು ಕುಳಿತುಕೊಂಡ ಎರಡು ನಿಮಿಷದೊಳಗಾಗಿ ಬಂಡಿ ಮುಂದೆ ಹೊರಟಿತು, ಆಗ ನಮ್ಮ ಬಾಹ್ಯ ಣನು ಅವರೊಡನೆ ಅರವದಲ್ಲಿ ಪ್ರಸಂಗಿಸಲಾರಂಭಿಸಿದನು. ಅವರಾರೆಂದು ನಾನು ತೆಲುಗಿನಲ್ಲಿ ಕೇಳಲಾಗಿ, ಅವರು ಹೊಲೆಮರೆಂದೂ, ಹೊಗೆಬಂಡಿಯಲ್ಲಿ ಸುಮಾಣ ಮಾಡುವವರು ಆಚಾರವ್ಯವಹಾರಗಳನ್ನು ಯೋಚಿಸ ಬಾರದೆಂದೂ, ನಮ್ಮ ಬ್ರಾಹ್ಮಣನು ನನಗೆ ಹಿತಬೋಧೆಮಾಡಿದನು.ಈ ಪ್ರಮಾಣದ ದೆಸೆಯಿಂದ ಹೊಲೆಯರ ಸಂಪರ್ಕವಾಯಿತಲ್ಲಾ ! ಎಂದು ನನ್ನಲ್ಲಿ ನಾನೇ ಬೇಸರಪಟ್ಟು ಸಂಜೆ ಆರು ಗಂಟೆಗೆ ಮಾಯಾವರದ ಹತ್ತಿರ ಬಂಡಿ ಏಳು ನಿವಿಂದನಿಲ್ಲಲಾಗಿ, ಇಳಿದು ೯ಮೂಂದು ಬಿಂಡಿಗೆ ಹೋಗಿ ಕುಳಿತುಕೊಂಡೆನು. ಏಳೂಕಾಲು ಗಂಟೆಯು ಹೊತ್ತಿಗೆ ಬಂಡಿ ಪುನಃ ಕುಂಭಕೋಣದ ಹತ್ತಿರ ನಿಂತಾಗ, ನಮ್ಮ ಬ್ರಾಹ್ಮಣನು ಬಂಡಿಯಿಳಿದು ನನಗಾಗಿ ಏನನ್ನೋ ಫಲಹಾರಕ್ಕೆ ತಂದನು. ಆದರೆ ನಾನು ಹೊಲೆಯುಬಟ್ಟಿಯಲ್ಲಿ ಏನೂ ತಿನ್ನ ದುದರಿಂದ, ನನ್ನ ಪಾಲಿಗೆ ಬಂದುದನ್ನು ಕೂಡ ಆತನೇ ತಿಂದು ಬಂಡಿಯೊಳಕ್ಕೆ ಹೋದನು, ಆ ರಾತ್ರಿ ನಾವಿಬ್ಬರೂ ಮರಳಿ ಒಟ್ಟಿಗೆ ಕೂಡಲಿಲ್ಲ, ಸ್ಥಳ ಇಕ್ಕಟ್ಟಾದುದರಿಂದ ಮಲಗುವುದಕ್ಕೆ ತಾಣವಿಲ್ಲದೆ, ನನಗೆ ಚೆನ್ನಾಗಿ ನಿದ್ರೆ ಬರಲಿಲ್ಲ, ಮರುದಿನ ಹೊತ್ತಾರೆಯಲ್ಲಿ ಅಯಿದೂ ಕಾಲು ಗಂಟೆಗೆ ನಾವಿಬ್ಬರೂ ಹೊರಗಡೆಗೆ ಹೋಗುವುದಕ್ಕಾಗಿ ಮಧುರೆದು ಹತ್ತಿರ ಇಳಿದೆವು, ಅವನು ಎಷ್ಟು ಹೊತ್ತಾದರೂ ತಿರಿಗಿ ಬರಲಿಲ್ಲ, ಕಾಲುಗಂಟೆಯು
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೨೭
ಗೋಚರ