ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕಥೆಯನ್ನು ಇಲ್ಲಿಗೆ ಮುಗಿಸಿ ಇನ್ನು ದೇಶ ವ್ಯಕ್ತ೦ತಕ್ಕೆ ಆರಂಭಿಸುವೆನು, ಸಾವಧಾನವಾಗಿ ಕೇಳಿರಿ. ಆಗ ನಾನು ಎದ್ದು ಕೊಂದದೂರ ನಡೆದು, ಒಂದು ಗಿಡದ ನೆರಳಿಗೆ ಕುಳಿತು ಕೊಂಡು, ಯುವಕಡೆಗೆ ಹೋಗಲೆಂದು ಆಲೋಚಿಸಿ ಕೊಳ್ಳುತ್ತಿರಲು, ಮೂಡ ಲಿಂದ ಎರಡು ವಿಗ್ರಹಗಳು ನನ್ನ ಕಡೆಗೆ ನಡೆದು ಬಂದುವು. ಆ ಬಂದವರು ಪುರು ಪರೆ ಸ್ತ್ರೀಯರೇ ಎಂದು ನನ್ನ ಮನಸ್ಸಿಗೆ ಆಗ ಒಂದು ದೊಡ್ಡ ಸಂದೇಹ ವುಂಟಾಯಿತು, ಅವರ ಮುಖಗಳನ್ನು ನೋಡಲಾಗಿ ಹೆಚ್ಚು ಕಡಿಮೆ ಅವರು ಮೂವತ್ತು ವರ್ಷ ಹರೆಯದವರಾಗಿ ಕಾಣಬರುತ್ತಿದ್ದರು, ಅವರ ಮುಖಗಳಿಗೆ ಗಡ್ಡಗಳಾಗಲೀ ಮಾಸೆಗಳಾಗಲೀ ಇರಲಿಲ್ಲ, ಇದರಿಂದ ಅವರು ಹೊಸತಾ ಹರಕಮಾಡಿಸಿ ಕೊಂಡಿದ್ದರೆಂದು ನೀವು ಭಾವಿಸಕೂಡದು, ನಮ್ಮ ಮರ ಹಾಗೆಯೇ ಅವರಿಗೂ ಮುಖದಮೇತೆ ಗಡ್ಡ ವಿರಾಸೆಗಳನ್ನು ಭಗವಂತನೇ ಪ್ರಸಾದಿಸತ್ತಿಲ್ಲ, ಅವರಿಬ್ಬರೂ ಕಪಿಲವರ್ಣದವರಾಗಿ ನನಗಿಂತಲೂ ಒಂದು ಹಿಡಿ ಎತ್ತರವಾಗಿದ್ದರು, ಅವರಿಗೇನೂ ಆಭರಣಗಳಿರಲಿಲ್ಲ ; ಮುಖದಲ್ಲಿ ಹೊಟ್ಟುಗಳು ರಲಿಲ್ಲ; ಕಣ್ಣಿಗೆ ಕಾಡಿಗೆ ಇರಲಿಲ್ಲ, ಏಕರೀತಿಯಾಗಿ ಅವರಿಬ್ಬರೂ ಉದ್ದವಾದ ಕಪ್ಪು ಹಲ್ಲಣಗಳನ್ನೂ, ಕಂಪಾದ ಅಂಗಿಗಳನ್ನೂ, ತಣೆಯಲ್ಲಿ ಹುಲ್ಲಿಂದ ಮಾಡಿದ ಬಿಳಿಯ ಟೊಪ್ಪಿಗೆಗಳನ್ನೂ ಧರಿಸಿದ್ದರು ; ಕಾಲುಗಳಿಗೆ ಎರೆದು ಕರಗ ಳನ್ನು ಹಾಕಿಕೊಂಡಿದ್ದರು, ಅವರ ಸೊಂಟದ ಸುತ್ತಲೂ ಪಟ್ಟದಟ್ಟಗಳು ಬಿಗಿಯಲ್ಪ ತಿದ್ದುವು, ಆ ಪಟ್ಟದಟ್ಟಿಗಳಿಗೆ ಮುಂದುಗಡೆಯಲ್ಲಿ ಏನೋ ಅಕ್ಷರ ಗಳು ಕೆತ್ತಿಸಿರುವ ಹಿತ್ತಾಳೆಯ ಬಿಲ್ಲೆಗಳದ್ದುವು, ಅವರ ಕೈಗಳಲ್ಲಿ ಎರಡು ಮೊಳ ದುದ್ದದ ಗುಂಡಾದ ಎರಡು ಚಂದನದ ಸೋಂಟಾಗಳಿದ್ದುವು, ಈ ಲಕ್ಷಣಗಳೆಲ್ಲವು ಗಳಿಂದಲೂ ಅವರಾರೊ ರಾದಭಟರೆಂದೂ ನಪುಂಸಕಮುಖದವರೆಂದೂ ನಾನಾಗ ನಿಶ್ಚಯಿಸಿಕೊಂಡೆನು. ಅವರು ಮೊತ್ತಮೊದಲು ನನ್ನೊಡನೆ ಏನನ್ನೂ ಮಾತನಾಡದೆ, ತರುಣಿಯಾದ ಹೊಸ ನ್ತಿ ಯಾರಾದರೂ ಬೀದಿಯಲ್ಲಿ ಕಂಡುಬಂದಾಗ ನಮ್ಮ ದೇಶದಲ್ಲಿ ಪುರುಷರು ಅವಳ ಮುಖದಕಡೆಗೆಯೇ ನೋಡು ವ ಹಾಗೆ ಅವರೂ ನನ್ನ ಮುಖದಕಡೆಗೆ ಹತ್ತು ನಿಮಿಷಗಳ ವರೆಗೆ ರೆಪ್ಪೆ ಹಾಕದೆ ನೋಡಿ, ತಮ್ಮೊಳಗೆ ಮೆಲ್ಲನೆ ಏನನ್ನೋ ಗುನುಗುಸು ಮಾತನಾಡಿಕೊಂಡು, ತರುವಾಯ ಅವರಲ್ಲಿ ಒಬ್ಬನು ನನ್ನ ಸವಿಾಪಕ್ಕೆ ಬಂದು • ತೂಮಿತಾಭ ಭೇ ?” ಎಂದು ಯಾವುದೋ ಪ್ರಶ್ನೆ ಹಾಕಿದಹಾಗೆ ಮಾತನಾಡಿದನು, ನನಗಾ