ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಕೊಂಡು ಹೋದನು, ಈಶ್ವರಾನುಗ್ರಹದಿಂದ ನಾನು ಹೀಗೆ ಕಾರಾಗೃಹ ವಿಮುಕ್ತನಾಗಿ ಒಳ್ಳೆದು ಮನೆಯಲ್ಲಿ ಬಿದ್ದವನಾದೆನು. ಆತನು ದಯಾರಸವುಳ್ಳವನಾ ದುದರಿಂದ ನನ್ನನ್ನು ಆದರಿಸಿ, ತನ್ನ ಮನೆಯಲ್ಲಿ ಬೀದಿಯ ಕಡೆಗೆ ನನಗೊಂದು ಕೊಟ್ಟಡಿ ಕೊಡಿಸಿ, ಮಲಗುವುದಕ್ಕೆ ಆ ಕೋಣೆಯಲ್ಲಿ ಒಂದು ಮಂಚವಿಡಿಸಿ, ತನ್ನ ಸೇವಕನಿಂದ ಭೋಜನ ಪದಾರ್ಥಗಳನ್ನು ತರಿಸಿ ನನ್ನಿ ದಿರಿಗೆ ಇಡಿಸಿದನು. ಅವರು ಯಾವ ಜಾತಿಯವರೋ ತಿಳಿಯದೆ ಹೋದುದರಿಂದ ಅವರು ಮುಟ್ಟದ ಪದಾರ್ಥಗಳನ್ನು ತಿನ್ನಲು ನಾನು ಮೊತ್ತಮೊದಲು ಸಂಕೋಚಿಸಿದೆನಾದರೂ ಯಾವುದಾದರೂ ಸರಿಯೇ, ತಿ೦ದು, ಕುದೇವತೆ ನನ್ನ ಹೊಟ್ಟಿದ್ದಲ್ಲಿ ತೂರಿ ನನ್ನ ನ್ನು ಬಾಧಿಸದುದರಿಂದ, ಆ ದೇಶದಲ್ಲಿ ಬ್ರಾಹ್ಮಣರು ಇರುವರೆಂಬ ಗುರುತೇ ಇಲ್ಲದೆ ಹೋದುದರಿಂದಲೂ, ಪೂರ ಕಾಲದಲ್ಲಿ ಆಪತ್ಸಮಯಗಳಲ್ಲಿ ವಿಶ್ವಾಮಿತಾ)ದಿಗಳು ಚಂಡಾಲಗೃಹದಲ್ಲಿ ಅಕ್ಷ್ಯಮಾಂನಾಡಿಗಳನ್ನು ಕದ್ದು ಕೊಂಡು ಕುತ್ತು ತೀರಿಸಿಕೊಂಡುದು ಪುರಾಣಗಳಲ್ಲಿ ಓದಿರ್ದುದರಿಂದಲೂ, ಆತ್ಮ ರಕ್ಷಣವೇ ಪರಮಧರ್ಮವೆಂದು ನಮ್ಮ ಶಾಸ್ತ್ರಗಳು ಹೇಳಿರುವುದರಿಂದಲೂ, ಪ್ರದೇಶವನ್ನು ಸೇರಿದ ತರುವಾಯ ಪಾ ಮುಶ್ಚಿತ್ತ ಮಾಡಿಸಿಕೊಂಡು ಬ್ರಾಹ್ಮಣ ಸಂತರಣೆ ಮಾಡಿ ಶುದ್ಧನಾಗ ಬಹುದೆಂದೂ, ಆ ದಿನ ಭೋಜನಮಾಡಿದೆನು, ಆ ದಿನ ಬಾಯಿಗೆ ಸ್ವಲ್ಪವೂ ಅನ್ನ ಹೊಗಲಿಲ್ಲವಾದರೂ ತರುವಾಯು ಕಮಕಮ ದಾಗಿ ಅಭ್ಯಾಸವಾದುದರಿಂದ ವಾಂಚ್ಛಿ (ಮುವಾದ ಮದುಮಗನಹಾಗೆ ಭೋ ಜನಪ್ರಿಯನಾಗಿ ಊಟವಾಡ ತೊಡಗಿದೆನು, ನಮ್ಮ ಮನೆಯ ಯಜಮಾನನ ಹೆಸರು : ನಾಂಢೀಭಂಗೀ', ಆತನು ಬ್ರಾಹ್ಮಣ ಭಕ್ತಿಯಿಂದಲ್ಲದೆ ಹೋದರೂ ಒಳ್ಳೆಯ ಹೃದಯವುಳ್ಳವನಾದುದರಿಂದ, ನನಗೆ ನಮಸೋಪಚಾರಗಳ ನಡೆ ಮುವಹಾಗೆ ವ್ಯವಸ್ಥೆಯಿಟ್ಟು, ಆರಂಭದಲ್ಲಿ ತಮ್ಮ ಭಾಷೆಯನ್ನು ನನಗೆ ಸೃ ಮವಾಗಿ ಕಲಿಸುತ್ತ ಒಂದನು, ನಾನು, ಗೋಡೆ, ಉಪ್ಪರಿಗೆ, ಉಪ್ಪು, ಹೇಳೆ, ಹನಿಮಸುಂಟಿ, ಬೆಲ್ಲ, ಬಟ್ಟೆ, ತಟ್ಟೆ, ದನ, ಕುರಿ, ಮೊದಲಾದುವನ್ನು ತೋರಿಸಿ, ಅವುಗಳ ಹೆಸರುಗಳೇನೆಂದು ಸನ್ನೆ ಮಾಡುತ್ತ ಬರಲಾಗಿ, ಅವನು ತಿಳುಹುತ್ತ ಬಂದನು, ಆ ಹೆಸರುಗಳೆಲ್ಲವನ್ನೂ ನಾನು ಹಿಂದೆ ಕೊಂಡುಹೋದ ಬಿಳು ಕಾಗದದ ಪುಸ್ತಕದ ಮೇಲೆ ತೆಲುಗಿನಲ್ಲಿ ಬರೆದುಕೊಂಡು, ಕಲಿಯುತ್ತ ಬಂದೆನು. ಮೊದಲನೆಯ ದಿನ ನಾನಾಮಾತುಗಳನ್ನು ಬರೆಯುತ್ತಿರಲು, ಅವನು ನೋಡಿ, ಅತ್ಯಾಶ್ಚರ್ಯಪಟ್ಟನು, ಈ ಆಶ್ಚರ್ಯದ ಕಾರಣವನ್ನು ನಿಮಗೆ ಮುಂದೆ ಹೇಳು