29 ಅಧಿಕಾರಸಲ್ಲಿಸುತ್ತಿರುವ ಸ್ತ್ರೀಯರೆಲ್ಲರನ್ನು ಸೋರಯುದ್ಧದಲ್ಲಿ ಜಯಿಸಿ, ಈ ಹಾಳು ದೇಶದಲ್ಲಿಯೂ ಪುರುಷಸ್ವಾತಂತ್ರವನ್ನು ನೆಲೆಗೊಳಿಸಿರಿ, ಮರ ಜ್ಞನಾದ ನಾನೇ ನಿಮಗೆ ಸಹಾಯಕನಾಗಿರಲು, ನಿಮಗೆ ಅಪದಮವೆಂದೂ ಉಂಟಾಗದು, ನೀವು ಭಯಪಡಬೇಡಿರಿ. ಇಲ್ಲಿ ಸ್ತ್ರೀಯರ ವಾದಮಾನ್ಯವೆಂಬುದು ಮಾ ತೇ ಅಲ್ಲದೆ ಅವರಲ್ಲಿ ಐಕಮತ್ಯವಿಲ್ಲ, ಅವರಲ್ಲಿ ಕೆಲವರು ಪುರುಷರಿಗೆ ವಿದ್ಯೆ ಕೊಟ್ಟು ಅವರಿಗೆ ಕೊಂಚ ಮಟ್ಟಿಗೆ ಸ್ವಾತಂತ್ರಗಳನ್ನು ಕೊಡಬೇಕೆಂಬರು, ಬಹು ಸಂಖ್ಯಾಕರಾದ ಎರಹ ನೆಯ ಪಕ್ಷದವರು ಪುರುಷರಿಗೆ ಎಂದೂ ವಿದ್ಯೆ ಕೊಡಬಾರದೆಂದೂ, ವಿದ್ಯೆ ಕೊಡುವುದರಿಂದ ಸ್ವಚ್ಛಾ ವಿಹಾರಿಗಳಾಗಿ ಕೆಟ್ಟು ಹೋಗುವರೆಂದೂ ಭಾವಿಸಿ, ಪೂರಾಚಾರವನ್ನು ನೆಲೆಗೊಳಿಸುವುದಕ್ಕೆ ಯತ್ನ ಪಡುವರು, ಇದು ಸ್ವತಂತ್ರ ರಾಷ್ಟ್ರ ವೂ ಅಲ್ಲಿ ; ದೊರೆತನದವರಿಗೂ ಪುಜೆಗಳಿಗೂ ಐಕಮತ್ಯವಿಲ್ಲ. ಪರಿಘ ಲನೆ ಮಾಡುವವರು ಸ್ವದೇಶೀಯರಿಗಿಂತಲೂ ಹೆಚ್ಚಾದ ನಾಗರಿಕತೆಯುಳ್ಳವರಾಗಿ, ಆ ದೇಶಕ್ಕೆ ದಕ್ಷಿಣದಲ್ಲಿರುವ ಪಕ್ಷಗಳನ್ನು ದಾಟಿ ಬಂದು ದೇಶವನ್ನು ಜಯಿಸಿ ದರು, ಇವರು ತಮ್ಮ ಪುರುಷರಿಗೆ ವಿದ್ಯೆ ಕೊಡಿಸಿ ಕೆಲವು ಸ್ವಾತಂತ್ರಗಳನ್ನು ಕೊಟ್ಟು ಅವರನ್ನು ಗೌರವದಿಂದ ಕಾಣುವರು. ಅವರು ಆ ದೇಶದಲ್ಲಿ ಪುರುಷರಿ ಗಾಗಿ ಪಾಠಶಾಲೆಗಳನಿಟ್ಟು ಪುರುದ್ದವಿದ್ಯೆ ವ್ಯಾಪಿಸುವಂತೆ ಮಾಡಬೇಕೆಂದು ಪ್ರಮ ತ್ನಿಸುತ್ತಿರುವರಾದರೂ, ಗೌರವವುಳ್ಳ ಕುಟುಂಬಗಳಿಂದ ಗಂಡುಮಕ್ಕಳು ವಾರ ಸಾಲೆಗೆ ಸೇರದುದರಿಂದ ಅವರ 'ಮನೋರಥವಪ್ಪೆಂದು ನೆರವೇರಲಿಲ್ಲ, ಪ್ರಭು ತ್ರದವರು ಪುರುಷರನ್ನು ಉಪಾಧ್ಯಾಯರನ್ನಾಗಿ ತಿದ್ದುವುದಕ್ಕಾಗಿ ರಾಜಧಾನಿ ಯಲ್ಲಿ ಒಂದು ಪಾಠಶಾಲೆಯನ್ನು ಈಗ ಹೊಸತಾಗಿ ಇಟ್ಟಿರುವರು, ದೇಶಾಚಾ ರಕ್ತ ವಿರುದ್ಧವಾದ ಇಂತಹ ಕಾರ್ ಗಳನ್ನು ಮಾಡುತ್ತಿರುವುದರಿಂದ ದೊರೆತನದ ವರಲ್ಲಿ ಜನಸಾಮಾನ್ಯಕ್ಕೆ ಅನುರಾಗ ಕಡಿಮೆಯಾಗಿದೆ, ಓ ಹಿಂದೂಮಹಾಜನಗೆ ೪ರಾ ! ಇವೆಲ್ಲವೂ ನಿಮ್ಮ ವಿಜಯಕ್ಕೆ ಅನುಕೂಲ ಸೂಚಕಗಳೇಹುಲ್ಲವೇ? ನನ್ನ ಮಜವಾನಗಿದಾದ ಭಾಂಧೀಭಾಂಗಿ ಪುರುಷರಿಗೆ ವಿದ್ಯೆ ಕೊಡಿಸಿ ದೇಶದಲ್ಲಿ ಹೊಸ ಬದಲಾವಣೆಗಳನ್ನು ತರಿಸ ಕೋರುವ ಪಕ್ಷದವಳು, ತನ್ನ ದೇಶದಲ್ಲಿ ಪುರುಷರು ಓದುವುದಕ್ಕಾಗಲೀ ಬರೆಯುವುದಕ್ಕಾಗಲೀ ಕಲಿತವರಿಲ್ಲದು ದರಿಂದ ತನ್ನ ಭಾಷೆರು ಪದಗಳನ್ನು ನಾನು ನಮ್ಮ ಭಾಜಿ ಮಲ್ಲಿ ಬರೆದುಕೊ ಇುವುದನ್ನು ನೋಡಿ, ಇತರ ದೇಶಗಳಲ್ಲಿ ಪುರುಷ್ಟರು ಬರೆದು ಕಲಿತಿರುವರೇ
ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೪೨
ಗೋಚರ