ವಿಷಯಕ್ಕೆ ಹೋಗು

ಪುಟ:ಸತ್ಯ ರಾಜ ಪೂರ್ವ ದೇಶ ಯಾತ್ರಗಳು ಪ್ರಥಮ ಭಾಗ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

41 ಈ ಕೊನೆಗೆ ಹೇಳಿದ ಮಾತುಗಳಿಂದ ನನಗೆ ಸ್ವಲ್ಪ ಸಂತೋಶವುಂಟಾ ಯಿತು, ಇಲ್ಲಿ ಕೂಡ ಹುರು ಪುರುಷರ ಮಾತುಗಳನ್ನೇ ಕೇಳ ತೊಡಗಿದ ರಲ್ಲವೇ ? ಕೇಳುವುದೇ ಸ್ವಭಾವಸಿದ್ಧವು ; ಕೇಳದಿರುವುದೇ ಪ್ರಭಾವವಿರುದ್ಧವು. ಈ ಆಲೋಚನೆಗಳೆಲ್ಲವೂ ನನ್ನ ಮನಸ್ಸಿನಲ್ಲಿ ಹುಟ್ಟಿದರೂ ಆಕೆಯ ಮನಸ್ಸು ನೋಡಬಹುದೆಂದು ನಾನು ಬಾಯಿಂದ ಹೇಳಲಿಲ್ಲ. ಈ ಪ್ರಸಂಗವಾದ ತರುವಾಯ ನಾನಾಕೆಯನ್ನು ಭಕ್ತಿಯಿಂದ ನಮಸ್ಕರಿಸಿ, ನನಗಾ ಮಂತ್ರಗಳನ್ನು ಪದೇಶಿಸದೆ ಕೂಡದೆಂದು ಕಾಲುಗಳ ಮೇಲೆ ಬಿದ್ದು ಏಳಲಿಲ್ಲ, ಆಗ ಉಪದೇಶಿಸು ವುದಕ್ಕೆ ಸಮಯವಾಗದುದರಿಂದ ಮತ್ತೊಂದು ಹೊತ್ತಿನಲ್ಲಿ ಉಪದೇಶಿಸುವೆನೆಂದು ಹೇಳ, ಕೆಲವು ದಿನಗಳಾದ ಮೇಲೆ, ನಾನು ಮೂರು ಉಪವಾಸಗಳನ್ನು ಮಾರಿ ಮಿಂದು ಕುಚಿವರಾಗಿ ಅಮಾವಾಸ್ಯೆಯ ದಿನ ಪ್ರಾತಃಕಾಲದಲ್ಲಿ ಹೋಗಿ ಸಂದ ರ್ಶನ ಮಾಡಿಕೊಂಡು ಮದಪಣಾಮ ಮಾಡಲಾಗಿ, ನನಗಾಕೆ ವಶೀಕರಣವೇ ಮೊದಲಾದ ಮಹಾಮಂತುಗಳನೇಕವನ್ನು ಉಪದೇಶಿಸಿದಳು. ಆಕೆ ನನಗಾಗಿ ಹೇಳದೆ ಹೋದರೂ, ನಾನೀ ಮಂತ್ರಗಳನ್ನು ನಮ್ಮ ದೇಶದ ಸ್ತ್ರೀಯರಿಗೆ ಹೇಳ ಬೇಕೆಂಬ ಹುಚ್ಚು ಆಸೆಯಿಂದ ನನಗೆ ಮತ್ತಷ್ಟು ಪ್ರೀತಿಪೂಲ್ಸಕವಾಗಿ ಉಪದೇಶಿಸಿದ ಹಾಗೆ ನಾನು ಕಂಡುಹಿಡಿದೆನು, ಆದರೆ ನಾನು ಅಂತಹ ಕೆಲಸವ ನ್ನು ಎಂದಾದರೂ ಮಾಡುವನೇ ? ಈ ಮಂತ್ರಗಳನ್ನು ಈಗ ಪ್ರಕಟಿಸಿ ನಿಮಗೆ ಉಪದೇಶಿಸುತ್ತಿದ್ದೆನು, ಆದರೆ ಪದರಗೊಳಿಸಿದ ಪಕ್ಷದಲ್ಲಿ ಸ್ತ್ರೀಯರು ಕೂಡ ಗ್ರಹಿಸಿ, ಈ ದೇಶದ ಹಾಗೆಯೇ ನಮ್ಮ ದೇಶದಲ್ಲಿಯೂ ಅವರು ಪುರುಷರನ್ನು ತಮ್ಮ ದಾಸರನ್ನಾಗಿ ಮಾಡಿಕೊಳ್ಳುವರೆಂಬ ಭಯದಿಂದ ನಾನಿಂದು ಪ್ರಕಟಿಸಲು ಸಾಹನಿಸದಿರುವೆನು, ಓ ಹಿಂದೂಮಹಾಜನಗಳರಾ ! ಇದರಿಂದ ನನಗೆ ನಿಮ್ಮಲ್ಲಿ ಅನುರಾಗವು ಕಡಿಮೆಯಾಯಿತೆಂದು ನೀವು ಎಣಿಸಬೇಡಿರಿ, ನನ್ನ ಬಳಿಗೆ ಬಂದ ಪಕ್ಷದಲ್ಲಿ ಸ್ತ್ರೀಯರಿಗೆ ಹೇಳಲಾರೆವೆಂದು ನಿಮ್ಮಿಂದ ಪ್ರಮಾಣಗಳನ್ನು ಮಾಡಿಸಿ ಕೊಂಡು, ಮಂತ್ರ ಸಿದ್ಧಿಗಾಗಿ ನಿಮ್ಮಿಂದ ಗುರುದಕ್ಷಿಣೆಗಳನ್ನು ಸ್ವೀಕರಿಸಿ, ನಿಮ ಗೊಬ್ಬರಿಗೆಯೇ ಸರ ಮಂತ್ರಗಳನ್ನೂ ಪುಯೋಗೋಪಸಂಹಾರಗಳೊಡನೆ ಮೂ ಅಂಗನ್ಯಾಸ ಕರನ್ಯಾಸಗಳೊಡನೆಯೂ, ರಹಸ್ಯವಾಗಿ ಉಪದೇಶಿಸುವೆನು. ಆ ತರುವಾದ ಒಳ್ಳೆಯ ಪಾಂಡಿತ್ಯ ಸಂಪಾದಿಸಿ ನನ್ನ ಯಜಮಾನಿಗಿತಿಯು ಕೋರಿಕೆಯಂತೆ ನಾನು ಪಾಠಶಾಲೆಯಲ್ಲಿ ಪ್ರವೇಶಿಸಿದೆನು, ಮತ್ತೊಬ್ಬ ಪುರುಷ ನು ಕೂಡ ಈಶ ಶಾಲೆಯನ್ನು ಸೇರಿ ನನಗೆ ಸಹಪಾಠಿಯಾಗಿ ಮಿತ್ರನಾದನು.