ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಆ೭ ರಾದ ನಾಲ್ಕು ಜನರನ್ನು ಸಜ್ಜು ಮಾಡಿ ಕಳುಹಿಸಿದರು. ಆ ದ್ವೀಪವು ಅಲ್ಲಿಗೆ ಒಂದು ಕೊಂಬಿನ ಕೂಗಿತ್ತು. ಈ ನಾಲ್ಕು ಜನರೂ ಕೊಡಲಿ, ಮಚ್ಚು ಕತ್ತಿ, ಒಂದೆರಡು ಪಾತ್ರೆ ಗಳು, ಒಂದು ಚೀಲತುಂಬ ಗೋಧಿ ಹಿಟ್ಟು, ಒಂದು ಚೂರಿ, ಚಕ್ಕು ಮುಕ್ಕಿ, ದೂದಿ, ಒಂದು ಕರ್ಣಾಟಕ ಕೋವಿ, ಸ್ವಲ್ಪ ಮದ್ದು, ಹನ್ನೆ ರಡು ಗುಂಡು, ಸ್ವಲ್ಪ ಹೊಗೇಸೊಪ್ಪು, ಇಷ್ಟನ್ನು ಸಂಗಡ ತೆಗೆದು ಕೊಂಡರು. ಶೀತವಲಯವಾದ ಆ ಪ್ರಾಂತದಲ್ಲಿ ಹಿಮದಗೆಡ್ಡೆ ಪರ್ವತದ ಹಾಗೆ ಬಿದ್ದಿತ್ತು. ವಾಯುಗುಣ ವ್ಯತ್ಯಾಸವಾಗಿ ಹಿಮವು ಸ್ವಲ್ಪ ಕರಗು ವುದಕ್ಕೆ ಮೊದಲಾದರೆ ತಮ್ಮ ಸಾಮಾನಿನ ಭಾರ ಹೆಚ್ಚಾಗಿ, ಹಿಮದಲ್ಲಿ ತಾವು ದೊಸಗೊಂಡು ಸತ್ತು ಹೋದೇವೆಂಬ ಭಯದಿಂದ ಇನ್ನೇನನ್ನೂ ತೆಗೆದುಕೊಂಡು ಹೋಗಲಿಲ್ಲ, ಇವರು ಆ ದ್ವೀಪವನ್ನು ತಲಪಿ ಹುಡು ಕಲು ಅಲ್ಲಿ ಮನುಷ್ಯರ ಸೆಲೆಯೇ ಇರಲಿಲ್ಲ. ಅಷ್ಟು ಹೊತ್ತಿಗೆ ಸಾಯಂ ಕಾಲವಾಯಿತು. ಹಿಮದ ಹೊಡೆತ ಹೆಚ್ಚಾಯಿತು. ಚಳಿಯನ್ನು ತಡೆಯಲಾರದೆ ಕೈಕಾಲುಗಳೆಲ್ಲಾ ಬೆರೆತುಕೊಂಡು ಹೋದವು, ಇವರು ಬಂದದಾರಿಯೇ ತಿಳಿಯಲಿಲ್ಲ. ಆಗ ಹತ್ತಿರಿದ್ದ ಒಂದು ಗುಡಿಸಿಲಿನಲ್ಲಿ ಆ ರಾತ್ರಿ ಮಲಗಿದ್ದು ಬೆಳಗಾದ ಮೇಲೆ ಉಳಿದ ಕೆಲಸವನ್ನು ಮಾಡೋಣವೆಂದು ನಾಲ್ಕು ಜನರೂ ಅಲ್ಲಿಗೆ ಹೋಗಿ, ಅಲ್ಲಿ ವಿಶ್ರಮಿಸಿ ಕೊಂಡು ಸೂರ್ಯೋದಯಕ್ಕೆ ಎದ್ದು ಆ ದ್ವೀಪದ ಸ್ಥಿತಿಯನ್ನು ತಮ್ಮವ ರಿಗೆ ತಿಳಿಸೋಣವೆಂದು ಬಂದರು. ಅಷ್ಟು ಹೊತ್ತಿಗೆ ಯಾವ ಕಾರಣ ದಿಂದಲೋ ಗಟ್ಟಿಯಾಗಿದ್ದ ಸಮುದ್ರವೆಲ್ಲಾ ನೀರಾಗಿತ್ತು; ಅದನ್ನು ಕಂಡು ಈ ನಾಲ್ಕು ಜನ ನಾವಿಕರಿಗೂ ಅತ್ಯಂತ ಭಯವಾಯಿತು. ತಮ್ಮ ದೇಶಕ್ಕೆ ಸೇರಲು ಆ ಹಡಗಿನ ಆಶೆಯೊಂದು ಇತ್ತೇ ಹೊರತು ಮತ್ತೇನೂ ಇಲ್ಲ. ಹೇಗೆತಾನೆ ತಮ್ಮ ಜನರ ಮುಖವನ್ನು ಅವರು ನೋಡಿಯಾರು ? ಹಿಂದೆ ಹಾಳು, ಮುಂದೆ ಮಹಾಸಮುದ್ರ ! ಇನ್ನೆನು ಗತಿ ? ಅವರ ಬುದ್ದಿಗೆ ಮುಂದೆ ಏನೂ ತೋರಲಿಲ್ಲ. ಹೀಗೆ ಕಥೆಯನ್ನು ಓದಿ ಅಲ್ಲಿಗೆ ನಿಲ್ಲಿಸಿ, ಮದನನು- ಜೋಯಿ ಸರೆ, ನಿರ್ಮಾನುಷ್ಯವಾದ ಅಂಥಾ ದ್ವೀಪದಲ್ಲಿ ಇವರು ಸೇರಿಕೊಂಡು,