ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ. ಮನುಷ್ಯ ಕಷ್ಟಕ್ಕೆ ಗುರಿಯಾಗುವುದು, ಅಪಾಯ ಬಂದರೆ ತಪ್ಪಿಸಿಕೊಳ್ಳ ಬಹುದು; ತಪ್ಪಿಸಿಕೊಳ್ಳು ವುದಕ್ಕೆ ಯೋಗ್ಯತೆ ಇಲ್ಲದಿದ್ದರೆ ಅದೀಗ ಕಷ್ಟ. ಮದನ- ತಾವು ಹೇಳಿದ್ದು ನನಗೆ ತಿಳಿಯಲಿಲ್ಲ. ಜೋಯಿಸ- ಹಾಗಾದರೆ ವಿವರಿಸುತ್ತೇನೆ, ನಿನ್ನ ಕಾಲಿಗೆ ಹಾವು ಸುತ್ತಿಕೊಂಡಿದ್ದಾಗ ಅದು ನಿನ್ನನ್ನು ಕಡಿಯುವುದೆಂದು ನೀನು ತಿಳಿದು ಕೊಂಡಿದ್ದೆ. ಆದುದರಿಂದ ಕಷ್ಟ ತೋರಿತು. ಹವುದೋ, ಅಲ್ಲವೋ ? ಮದನ-ಹವುದು. ಜೋಯಿಸ-ಆ ನಿಾಗ್ಯದೆಸೆ ಸುಮತಿಗೆ ಇರಲಿಲ್ಲವಷ್ಟೆ. ಮದನ-ಅದೂ ನಿಶ್ಚಯ, ಸ್ವಾಮಿ, ಜೋಯಿಸ-ಆದರೂ ಅದು ಕಡಿಯತಕ್ಕ ಸಂಭವ ನಿನಗಿಂತಲೂ ಅವನಿಗೆ ಹೆಚ್ಚಾಗಿತ್ತು. ಯಾಕೆಂದರೆ, ಅದನ್ನು ಅವನು ಹಿಡಿದು ಕೊಂಡ. ಆದರೆ ಧೈರವಾಗಿ ಹಿಡಿದುಕೊಂಡು, ಅದನ್ನು ಬೀಸಿ ಆಚೆಗೆ, ಎಸೆದರೆ ಅಪಾಯ ಕಡಮೆಯೆಂದು ಅವನು ಬಲ್ಲ. ನಿನಗೂ ಅಂಥಾ ತಿಳಿವಳಿಕೆ ಇದ್ದರೆ, ನಿನಗೂ ಅಷ್ಟು ಭಯ ಉಂಟಾಗುತಿರಲಿಲ್ಲ. ಮದನ-ನೀವು ಹೇಳುವುದು ನಿಜ, ಜೋಯಿಸರೆ, ಇನ್ನೊಂದು ಸಾರಿ ಅ೦ಥಾ ಅ ಪಾಯಕ್ಕೆ ನಾನು ಒಳಗಾದರೆ, ನಾನೂ ಹಾಗೆಯೇ ಧೈಲ್ಯವನ್ನು ಅವಲಂಬಿಸುತೇನೆ. - ಜೋಯಿಸ-ನಿನಗೆ ಮೊದಲು ಆದಹಾಗೆಯೇ ಈಗಲೂ ಸಂಕಟ ಉ೦ಟಾದರೆ ? ಮದನ-ಒಂದುಕಾಲಕ್ಕೂ ಇಲ್ಲ, ಈಗ ನನಗೆ ಧೈಲ್ಯ ಹೆಚ್ಚಾಗಿದೆ. ಜೋಯಿಸ-ಅ ಪಾಯ ಉಂಟಾದಾಗ ಹೇಡಿಗಳಿಗಿಂತಲೂ ದೈತ್ಯ ಶಾಲಿಗಳಿಗೆ ಸಂಕಟ ಕಡಮೆ ಎಂತಲೋ ? ಮದನ-ಹವುದು. ಜೋಯಿಸ-ಎಂಥಾ ಅಪಾಯ ಸಂಭವಿಸಿದರೂ ಹೀಗೆಯೇ ಸರಿಯಷ್ಟೆ ? ಮದನ-ಹವುದು, ಜೋಯಿಸರೆ, ನಮ್ಮ ಅಪ್ಪಾಜಿಯೂ, ಅಮ್ಮಯ್ಯನೂ ಅ೦ದಳದಲ್ಲಿ ಕೂತು ಹೋಗುವಾಗ, ಅ೦ದಳ ಸ್ವಲ್ಪ