ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಅಳ್ಳಾಡಿದರೂ, ಅಮ್ಮಯ್ಯ ಭಯದಿಂದ ಕೂಗಿಕೊಳ್ಳುವರು. ನಮ್ಮ ಅಪ್ಪಾಜಿ ಇದನ್ನು ಕಂಡು ನಗುವರು. ಜೋಯಿಸ ಆಕೆಗೂ ನಿಮ್ಮ ಅಪ್ಪಾಜಿಯಷ್ಟು ಧೈಲ್ಯವಿದ್ದರೆ, ಆಕೆ ನಗುತಲೇ ಇದ್ದರು. (ಕಥೆ ಮುಂದಕ್ಕೆ ಸಾಗಲಿ.) ಈ ಮೃಗಗಳ ಬಾಧೆ ಹೆಚ್ಚಾಗುತ್ತಾ ಬಂತು. ಸಾರಗ, ಕರೀನರಿ, ಬಿಳೀನರಿ, ಬಿಳೀಕರಡಿ ಇವುಗಳೇ ಮುಖ್ಯವಾದ ಕಾಡುಮೃಗಗಳು. ಇವು ಈ ನಾವಿಕರನ್ನು ಪೀಡಿಸಲು ಬಂದಹಾಗೆಲ್ಲಾ ಉಪಾಯವನ್ನು ಹುಡುಕಿ, ಅವುಗಳನ್ನು ಕೊಲ್ಲುತಿದ್ದರು. ಈ ಉತ್ತರ ಪ್ರಾಂತದಲ್ಲಿ ರಾತ್ರಿ ಪ್ರಮಾಣ ಹೆಚ್ಚಾಗಿಯೂ ಅಹಃ ಪ್ರಮಾಣ ಕಡಮೆಯಾಗಿಯೂ ಇರುವುದು, ಇದೂ ಅಲ್ಲದೆ ವರುಷದಲ್ಲಿ ಅನೇಕ ತಿಂಗಳು ಸೂರನ ಕಿರಣವೇ ಕಾಣಿಸದೆ ಕತ್ತಲೆ ಕವಿದುಕೊಂಡಿರುವುದು, ಇದರಿಂದ ದೀಪ ಅಗತ್ಯವಾಯಿತು. ಆ ದೀಪಕ್ಕೆ ಎಣ್ಣೆ ಎಲ್ಲಿದೆ ? ಬತ್ತಿ ಯಾವುದು? ಹಣತೆ ಯನ್ನು ಎಲ್ಲಿಂದ ತರಬೇಕು ! ಇದಕ್ಕೆ ಯೋಚನೆ ಮಾಡಿ ಒಂದು ಉಪಾಯವನ್ನು ತೆಗೆದರು. ಸಾಗರದ ತಲೆಯ ಮಿದುಳು ಎಣ್ಣೆ ಯಾಯಿತು, ಅವರಲ್ಲಿದ್ದ ಬಟ್ಟೆ ಯೇ ಬತ್ತಿ ಯಾಯಿತು, ಅಲ್ಲಿ ಸಿಕ್ಕು ತಿದ್ದ ಮಣ್ಣನ್ನು ತೆಗೆದು ಹಣತೆ ಮಾಡಿದರು, ಅದಕ್ಕೆ ಎಷ್ಟು ಕೊಬ್ಬನ್ನು ಹಾಕಿದರೂ ನಿಲ್ಲದೇ ಸೋರಿಹೋಗುತಿತ್ತು, ಆದಕಾರಣ ಒಂದು ಯುಕ್ತಿಯನ್ನು ಮಾಡಿ ಬೆಂಕಿಯಲ್ಲಿ ಅದನ್ನು ಸುಟ್ಟು ಕೊಬ್ಬು ನಿಲ್ಲುವಹಾಗೆ ಮಾಡಿದರು. ಹತ್ತಿರಿದ್ದ ಚಕ್ಕು ಮುಕ್ಕಿಯೇ ಬೆಂಕಿ ಮಾಡುವುದಕ್ಕೆ ಅನುಕೂಲಿಸಿತು. ಹೀಗೆ ಕತ್ತಲೆ ಬಾಧೆಯನ್ನು ಪರಿ ಹರಿಸಿಕೊಂಡರು. ಚಳಿ ಹೆಚ್ಚಾದಕಾರಣ ಬೆಚ್ಚಗಿರುವ ಹೊದಿಕೆ ಬೇಕಾಯಿತು, ಇದಕ್ಕಾಗಿ ಸಾರಗದ ಚಕ್ಕಳವನ್ನು ತೆಗೆದುಕೊಂಡರು. ಚಕ್ಕಳ ಒರಟಾದ್ದರಿಂದ ಅದನ್ನು ನೀರಿನಲ್ಲಿ ನೆನೆಯಿಸಿ ಕೈಲಿ ತಿಕ್ಕಿದರು. ಸ್ವಲ್ಪ ಮೃದುವಾಯಿತು. ಕೊಬ್ಬನ್ನು ಕಾಸಿ ಅದಕ್ಕೆ ಸವರಿದರು. ಇನ್ನೂ ಮೃದುವಾಯಿತು, ಇದರಲ್ಲಿ ಕವಚ ಮೊದಲಾದ್ದನ್ನು ಮಾಡಿಕೊಂಡರು. ಹೀಗೆ ತಾವು ಸುಖವಾಗಿರುವುದಕ್ಕೆ ಬೇಕಾದ್ದನ್ನೆಲ್ಲಾ ಕಲ್ಪಿಸಿಕೊಂಡರು.