ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಈ ರೀತಿಯಾಗಿ ಅನೇಕ ದಿವಸಗಳು ಇವರು ಅಲ್ಲಿ ವಾಸವಾಗಿ ರಲು, ಮಿಾನು ಹಿಡಿಯುವುದಕ್ಕಾಗಿ ಕೆಲವು ಜನರು ದೋಣಿಗಳನ್ನು ಹಾಕಿಕೊಂಡು ಸಮುದ್ರದ ಮೇಲೆ ಆ ಕಡೆಗೆ ಬಂದರು, ಸಮುದ್ರದ ದಡದಲ್ಲಿ ಸ್ವಲ್ಪ ಹೊಗೆ ಕಾಣಿಸಲು ಅಲ್ಲಿ ಮನುಷ್ಯರಿರಬೇಕೆಂದು ದೋಣಿ ಯನ್ನು ಇತ್ತ ತಿರುಗಿಸಿದರು, ಮನುಷ್ಯರ ಮುಖವನ್ನು ಕಂಡೇವೇ ಎಂದು ಹಂಬಲಿಸುತಿದ್ದ ಈ ನಾಲ್ಕು ಜನ ನಾವಿಕರೂ ಬಹು ಸಂತೋಷ ಪಟ್ಟು, ದೋಣಿ ಜನರನ್ನು ಕರೆದು ತಮ್ಮ ದುರವಸ್ಥೆಯನ್ನು ಅವರಿಗೆ ಹೇಳಿಕೊಂಡರು, ಆ ಜನರು ಕನಿಕರದಿಂದ ಇವರನ್ನು ದೋಣಿಯ ಮೇಲೆ ಕರೆದುಕೊಂಡು ಹೋದರು. ಈ ನಾಲ್ಕು ಜನರೂ ದಿನಕ್ರಮ ದಲ್ಲಿ ತಮ್ಮ ದೇಶವನ್ನು ಸೇರಿಕೊಂಡರು. ಈ ಕಥೆ ಮುಗಿಯಿತು, ಈ ಸಮಯಕ್ಕೆ ಸರಿಯಾಗಿ ತಮ್ಮ ತಂದೇಮನೆಗೆ ಹೋಗಿದ್ದ ಸುಮತಿಯು ಅಲ್ಲಿಗೆ ಬಂದನು. ಬರುತಾ ಜೊತೆಯಲ್ಲಿ, ಹಿಂದಕ್ಕೆ ಹದ್ದು ಎತ್ತಿಕೊಂಡು ಹೋಗುತಿದ್ದಾಗ, ಪ್ರಾಣ ವನ್ನು ಉಳಿಸಿ ಮನೆಗೆ ಕೊಂಡುಹೋಗಿ ತಾನು ಸಾಕುತಿದ್ದ ಗಿಣಿ ಮರಿಯನ್ನು ತೆಗೆದುಕೊಂಡು ಬಂದನು. ಅದು ಇವನ ಸಂಗಡಲೇ ಹಾರುತಾ ಕು ಏು ತಾ ಬರುವುದು, ತಲೆಯಮೇಲೆ ಹಾರುವುದು, ಭುಜದ ಮೇಲೆ ಕೂರುವುದು, ಇವನ ಕೈಲಿದ್ದ ಹಣ್ಣನ್ನು ಕಿತ್ತು ಕಿತ್ತು ತಿನ್ನು ವುದು, ಹೀಗೆ ಮಾಡಿಕೊಂಡುಬಂತು. ಇದನ್ನು , ಕಂಡು ಮದನನು ಆಶ್ಚರ ಪಡುತಾ-ಸುಮತಿ, ಈ ಗಿಣಿ ಇಷ್ಟೊಂದು ಸಾಧುವಾಗಿ ಒಗ್ಗಿ ಕೊಳ್ಳುವುದಕ್ಕೆ ನೀನೇನು ಮಾಡಿದೆ? ಎಂದು ಕೇಳಿದನು, ಸುಮತಿಯು -ನಾನು ಮತ್ತೇನೂ ಮಾಡಲಿಲ್ಲ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಅನ್ನವನ್ನು ಹಾಕಿ ಆಗಾಗ್ಗೆ ಹಣ್ಣುಗಳನ್ನು ತಂದುಕೊಡುತ್ತಾ, ಕೈ ಮೇಲೆ ಕೂರಿಸಿಕೊಂಡು, ಆಡಿಸುತಾ ಲಾಲಿಸಿದೆ, ಅದಕ್ಕಾಗಿ ನನ್ನ ಕಂಡರೆ ವಿಶೇಷ ಸಲಿಗೆಯಾಗಿದೆ, ಎಂದನು, ಮದನ- ಇದು ಆಶ್ಚರವಾಗಿದೆ, ಹಕ್ಕಿಗಳ ಹತ್ತಿರಕ್ಕೆ ಯಾರಾ ದರೂ ಹೋಗಿ ನಿಂತರೆ, ಅವು ಹಾರಿ ಹೋಗುವವು. ಜೋಯಿಸ-ಅದಕ್ಕೆ ಕಾರಣವೇನು ಬಲ್ಲೆ ಯ ?