ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ಮದನ-ಅವು ಕಾಡ ಹಕ್ಕಿಗಳು, ಜೋಯಿಸ-ಕಾಡ ಹಕ್ಕಿ ಎಂದರೇನು ? ಮದನ-ಮಂದಿಯನ್ನು ಹತ್ತಿರಕ್ಕೆ ಹೊದ್ದ ಗೊಡಿಸದೇ ಇರ ತಕ್ಕವು. ಜೋಯಿಸಗಿಣಿಯು ಹತ್ತಿರಕ್ಕೆ ಬರಗೊಡಿಸದೇ ಇರುವುದ. ರಿಂದ, ಅದು ಕಾಡಹಕ್ಕಿಯಾಯಿತು ; ಅದು ಕಾಡಹಕ್ಕಿಯಾದ್ದರಿಂದ ಹತ್ತಿರಕ್ಕೆ ಬರಗೊಡಿಸದೇ ಹೋಯಿತು. ಈ ಮಾತಿನಿಂದ ಏನು ತಿಳಿದಹಾಗಾಯಿತು ? ಗಿಣಿ ಕಾಡ ಹಕ್ಕಿಯ ಹಾಗೆ ಇದ್ದಾಗ ಮಂದಿ ಯನ್ನು ಹತ್ತಿರಕ್ಕೆ ಹೊದ್ದಗೊಡಿಸುವುದಿಲ್ಲ. ಆದರೆ ಗಿಣಿ ಕಾಡ ಹಕ್ಕಿಯ ಹಾಗೆ ವರ್ತಿಸುವುದಕ್ಕೆ ಕಾರಣವೇನು ಹೇಳು. ಮದನ-ಅದೇನೋ ನನಗೆ ತಿಳಿಯದು, ಗಿಣಿಗಳ ಸ್ವಭಾವ ಯಾವಾಗಲೂ ಕಾಡಹಕ್ಕಿಯ ಹಾಗೆಯೇ ಇರತಕ್ಕದ್ದು. ಜೋಯಿಸ-ಅವುಗಳ ಸ್ವಭಾವ ಹಾಗಿದ್ದರೆ ಈ ಗಿಣಿ ಸುಮತಿಗೆ ಹೇಗೆ ಒಗ್ಗಿತು ? ಮದನ-ಅವನು ಯಾವಾಗಲೂ ಅದನ್ನು ಪ್ರೀತಿಯಿಂದ ಸಾಕು. ತಾನೆ. ಜೋಯಿಸ-ಹಾಗಾದರೆ ಪ್ರೀತಿಯಿಂದ ಸಾಕತಕ್ಕವರನ್ನ ಕಂಡರೆ, ಬೆಚ್ಚಿ ದೂರಾ ಓಡಿಹೋಗುವುದು ಪ್ರಾಣಿಗಳಿಗೆ ಸ್ವಭಾವವೊ ? ಮದನ-ಹಾಗೆ ಓಡಿ ಹೋಗುವುದು ಅವುಗಳ ಸ್ವಭಾವವಲ್ಲ. ಜೋಯಿಸ-ಆದರದಿಂದ ಸಾಕದೇ ಇರುವ ಮನುಷ್ಯನನ್ನು ಕಂಡರೆ ಮೃಗಗಳು ಓಡಿಹೋಗುವವಷ್ಟೆ ? ಮದನ-ಹವುದು. ಜೋಯಿಸ-ಆದ್ದರಿಂದಲೇ ಅವು ಕಾಡಮೃಗಗಳೆಂದು ನೀನು ಅನ್ನು ತೀಯೊ ? ಮದನ-ಹವುದು. ಜೋಯಿಸ-ತಮ್ಮನ್ನು ಹೊಡೆಯುತ್ತಾರೆ ಎಂಬ ಭಯದಿಂದ ಈ ಮೃಗಗಳು ಓಡಿಹೋಗುವವು. ಹುಲಿ, ಕರಡಿ, ಮುಂತಾದವುಗಳನ್ನು