ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ t ಎಂದು ಕರೆದು ಅದಕ್ಕೆ ತಿಂಡಿಯನ್ನು ಹಾಕಿದನು, ಅದು ಬರದೇ ಓಡಿ ಹೋಗುತಿತ್ತು, ಸಿಡುಕನಾದ ಈ ಮದನನು ಕೋಪದಿಂದ-ಛೀ ಕೆಟ್ಟ ಹಂದಿಯೇ ! ನಾನು ತಿಂಡಿ ಕೊಡುವುದಕ್ಕೆ ಹೋದರೆ ಓಡಿ ಹೋಗುತೀಯ ? ನಿನಗೆ ಬುದ್ದಿ ಕಲಿಸುತ್ತೇನೆ, ಎಂದು ಓಡಿ ಹೋಗಿ ಅದರ ಹಿಂಗಾಲನ್ನು ಹಿಡಿದುಕೊಂಡು ಎಳೆತರುತಿದ್ದನು. ಅದು ಅರಚಿ ಕೊಂಡಿತು, ಅದರ ಅರಚಲು ಆದರ ತಾಯಿಗೆ ಕೇಳಿಸಿತು. ತಾಯಿ ಹಂದಿಯು ಇತರ ಮರಿಹಂದಿಗಳೊಡನೆ ಸರನೆ ಮದನ ಇದ್ದ ಕಡೆಗೆ ಓಡಿ ಬಂತು, ಇವನು ಹೆದರಿಕೊಂಡು ತನ್ನ ಕೈಲಿದ್ದ ಮರಿಯನ್ನು ಬಿಟ್ಟು ಬಿಟ್ಟನು, ಅದು ಗಾಬರಿಯಲ್ಲಿ ಓಡಿ ಹೋಗುವಾಗ, ಇವನ ಎರಡು ಕಾಲು ಸಂದಿಯಲ್ಲಿ ನುಸಿದು ಹೊರಟು ಹೋಯಿತು. ಆ ಜೋರನ್ನು ತಡೆಯಲಾರದೆ ಮದನನು ಕೆಳಕ್ಕೆ ಬಿದ್ದನು. ಆ ಸ್ಥಳ ಇಳಿಜಾರಾಗಿದ್ದ ಕಾರಣ, ಮೇಲಿನಿಂದಾ ಉರುಳಿಕೊಂಡು ಬಂದು ಕೆಳಗೆ ಹರಿಯುತಿದ್ದ ಬಚ್ಚಲಿಗೆ ಮಗುಚಿಕೊಂಡನು. ಮೈಯೆಲ್ಲಾ ಕೊಚ್ಚೆ ಯಾಯಿತು. ಈ ಹುಡುಗನಿಗೆ ಮತ್ತೂ ಕೋಪ ಹೆಚ್ಚಿತು. ಆ ಹಂದಿ ಯನ್ನು ತಿರುಗಿ ಎಳೆತರಬೇಕೆಂದು ಹೋಗಿ ಅದನ್ನು ಹಿಡಿದುಕೊಂಡನು. ಅದು ಇವನ ಕೈಗೆ ದಕ್ಕದೇ ಬಹಳ ತೊಂದರೆಮಾಡಿತು, ಈ ಜಗಳದಲ್ಲಿ ಹಂದಿಯು ಹುಡುಗನನ್ನು ಎಳೆದುಕೊಂಡು ಹೋಗಿ, ನಾಲ್ಕು ಮಾರು ದೂರದಲ್ಲಿ ಆಡುತಾ ಇದ್ದ ಕೋಳಿಗಳ ಮಧ್ಯೆ ಬಿತ್ತು, ಕೋಳಿಗಳೆಲ್ಲಾ ಚದರಿ ಹಾರಿಹೋದವು. ಆ ಗುಂಪಿನಲ್ಲಿದ್ದ ಒಂದು ಹುಂಜವು ರೇಗಿ ಕೊ೦ಡು, ಹರಿಸಿಕೊಂಡು ಬಂದು, ಮದನನ ಕಾಲನ್ನು ಕುಕ್ಕಿತು. ನಿಂತ ಕೋಳಿಗಳೆಲ್ಲಾ ಅದೇ ಪ್ರಕಾರ ಅವನನ್ನು ಕುಕ್ಕಲು ಆರಂಭಿಸಿ ದವು. ಆಗ ಈ ಯಾತನೆಯನ್ನು ತಡೆಯಲಾರದೆ ಭಯದಿಂದ ಅರಚಿ ಕೊಂಡನು. ಈ ಕೂಗು ಮನೇ ಒಳಗಿದ್ದ ರಾಮಜೋಯಿಸನಿಗೆ ಕೇಳಿ ಸಿತು. ಆತನು ತಟ್ಟನೆ ಓಡಿ ಬಂದು ದೊರೆಮಗನನ್ನು ನೋಡಿದನು. ಕಾಲಿನಿಂದ ತಲೆಯವರೆಗೂ ಆ ರಾಜಪುತ್ರನಿಗೆ ಬಚ್ಚಲ ಕೊಚ್ಚೆಯಲ್ಲಿ. ಅಭಿಷೇಕವಾಗಿತ್ತು, ಉಪಾಧ್ಯಾ ಯನು-ಮಗು, ಹೀಗಾಗುವುದಕ್ಕೆ ಕಾರಣವೇನಪ್ಪಾ, ಎಂದು ಕೇಳಲು, ಮದನನು-ಜೋಯಿಸರೇ,