ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೮೬ ಮಾಡುವುದಿಲ್ಲ. ಆದರೆ ಅವುಗಳ ಸ್ವಭಾವವನ್ನು ನಾವು ಅರಿತು ಅವು ಗಳ ಗೋಜಿಗೆ ಹೋಗಬೇಕೇ ಅಲ್ಲದೆ ಸುಮ್ಮನೆ ಹೋಗಬಾರದು. ಇದಕ್ಕೆ ಒಂದು ಕಥೆ ಇದೆ. ಆನೆ ಮತ್ತು ಚಿಪ್ಪಿಗ ಒಬ್ಬ ಚಿಪ್ಪಿಗೆ ಇದ್ದನು. ಅವನು ನಿತ್ಯವೂ ತನ್ನ ಗುಡಿಸಲಿನಲ್ಲಿ ಕೂತುಕೊಂಡು ಹೊಲಿಗೇ ಕೆಲಸವನ್ನು ಮಾಡುತಿದ್ದನು, ಆನೆಯನ್ನು ಪ್ರತಿದಿನವೂ ನೀರ ಕುಡಿಸುವುದಕ್ಕೆ ಇವನ ಮನೆ ಮುಂದೆಯೇ ಕರೆದುಕೊಂಡು ಹೋಗುತಿದ್ದರು. ಈ ಚಿಪ್ಪಿಗನು ತನ್ನ ಮನೇ ಕಿಟಕಿ ಯೋಳಗಿನಿಂದ ಹಣ್ಣು, ತೆಂಗಿನಕಾಯಿ, ಮೊದಲಾದ ಯಾವುದಾದರೂ ಒಂದು ತಿಂಡಿಯನ್ನು ದಾರಿಯಲ್ಲಿ ಹೋಗುತಿದ್ದ ಒಂದು ದೊಡ್ಡ ಆನೆಗೆ ನಿತ್ಯವೂ ಕೊಡುವ ಪದ್ಧತಿ ಇತ್ತು, ಹೀಗೆ ಆ ಆನೆಯು ಅವನ ಸಂಗಡ ಬಹು ಸಲಿಗೆಯಾಗಿತ್ತು, ಒಂದಾನೊಂದು ದಿನ ಆನೆಯು ಬರುತಾ ಪದ್ದ ಶ್ರೀ ಪ್ರಕಾರಕ್ಕೆ ಚಿಪ್ಪಿಗನ ಮನೇ ಕಿಟಕಿಯೊಳಕ್ಕೆ ಸೊಂಡಿಲನ್ನು ತಿಂಡಿ ಇಸಕೊಳ್ಳಬೇಕೆಂದು ನೀಡಿತು. ಆ ದಿನ ಚಿಪ್ಪಿಗನು ಯಾತಕ್ಕೊ ಸ್ಕರವೊ ಬಹಳ ಕೋಪವಾಗಿದ್ದನು. ಆನೆಯು ಸೊಂಡಿಲನ್ನು ಕಿಟಕಿ ಯಲ್ಲಿ ಚಾಚಿದ ಕೂಡಲೆ ಚಿಪ್ಪಿಗನು ಸುಮ್ಮನೆ ಇರದೆ ತನ್ನ ಕೈಲಿದ್ದ ಸೂಜಿ ಯಿಂದ ಆ ಸೊಂಡಿಲನ್ನು ತಿವಿದನು. ಕೂಡಲೇ ಗಜವು ಸೊಂಡಿಲನ್ನು ಎಳೆದುಕೊಂಡು ಕೋಪವನ್ನು ತೋರಿಸದೆ ಹೊರಟುಹೋಯಿತು ; ತರುವಾಯ ಕೆರೆಯಲ್ಲಿ ನೀರ ಕುಡಿದು ಬರುತ್ತಾ ಸೊಂಡಿಲೊಳಕ್ಕೆ ಐದಾರು ಕೊಡದಮಟ್ಟಿಗೆ ಕೊಚ್ಚೆ ನೀರನ್ನು ತುಂಬಿಕೊಂಡು ಚಿಪ್ಪಿಗನ ಮನೇ ಕಿಟಕೀ ಹತ್ತಿರ ಬಂದು ನೀರೆಲ್ಲವನ್ನೂ ಅವನಮೇಲೆ ಸೊಂಡಿಲಿ ನಿಂದ ಎರಚಿತು. ಇದರಿಂದ ಚಿಪ್ಪಿಗನ ಮನೆಯೆಲ್ಲಾ ನೀರಾಯಿತ್ತು ಅವನಿಗೂ ಪೂರಾ ಸ್ನಾನವಾಯಿತು. ಇವನು ಮಾಡಿದ ಚೇಷ್ಟೆ ಗೆ ತಕ್ಕ ಪ್ರಾಯಶ್ಚಿತ್ರವಾಯಿತು. ಹೀಗೆಂದು ರಾಮಜೋಯಿಸನು ಕಥೆಯನ್ನು ಹೇಳಿ ಮುಗಿಸಲು, ಮದನನು-ಜೋಯಿಸರೆ, ಜಂತುವಿನ ಶಕ್ತಿಯನ್ನು ನೋಡಿಕೊಂಡು, ಅವನು ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕಾಗಿತ್ತು. ?