ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಜೋಯಿಸ-ನೀನು ಹೇಳಿದ್ದು ಸರಿ, ನನಗೆ ಇನ್ನೊಂದು ಆನೇ ಕಥೆ ಜ್ಞಾಪಕಕ್ಕೆ ಬರುತ್ತಿದೆ. ಅದು ಇದಕ್ಕಿಂತಲೂ ವಿಚಿತ್ರವಾಗಿದೆ, ಹೇಳುತೇನೆ ಕೇಳು ಆನೆ ಮತ್ತು ಮಗು ಒಂದಾನೊಂದು ಆನೆಗೆ ಮದ ಹತ್ತಿತು, ಅದು ವಿಪರೀತವಾಗಿ ಆರ್ಭಟಿಸುತಾ ಕಟ್ಟಿ ಹಾಕಿದ್ದ ಸರಪಣಿಯನ್ನೂ ಮಿಣೀಹಗ್ಗವನ್ನೂ ಕಿತ್ತು ಕೊಂಡು ಬಹು ರಭಸದಿಂದ ಹೊರಟಿತು. ಮಾಹುತನ ಹತೋಟ ಮಿಾರಿತು, ಯಾರೂ ಅದನ್ನು ಅಡಗಿಸುವುದಕ್ಕಾಗಲಿಲ್ಲ. ಸಿಕ್ಕಿದ | ಮರಗಳನ್ನು ಮುರಿದು ಮನೆಗಳನ್ನು ಉರುಳಿಸಿ, ಸಿಕ್ಕಿದ ಜನ ರನ್ನು ಹಿಡಿದು ಬಡಿದು, ವಿಶೇಷವಾದ ಹಾವಳಿಯನ್ನು ಮಾಡು ತಿದ್ದ ಆ ಆನೆಯ ಹೊಡೆತಕ್ಕೆ ಊರೆಲ್ಲಾ ಭಯದಿಂದ ಗಡಗಡನೆ ನಡುಗಿ ಹೋಯಿತು. ಅದರ ಬಾಧೆಯನ್ನು ತಪ್ಪಿಸಿಕೊಳ್ಳುವು ದಕ್ಕಾಗಿ ಮಾಹುತನ ಹೆಂಡತಿಯು ತನ್ನ ಮಗುವನ್ನು ಕಂಕು ಳಲ್ಲಿ ಎತ್ತಿಕೊಂಡು ಓಡಿ ಹೋಗುತಿದ್ದಳು, ಅವಳನ್ನು ಕಂಡು ಆನೆಯು ಹಿಂದಟ್ಟಿ ಕೊಂಡು ಬಂತು, ಆ ಹೆಂಗಸು ಕೊನೆಗೆ ನಿಲ್ಲಲಾರದೆ ತನ್ನ ಕಂಕುಳಲ್ಲಿದ್ದ ಮಗುವನ್ನು ಆನೆಯ ಮುಂದೆ ಮಲಗಿಸಿ- ಛೇ ! ನೀಚಜಂತುವೆ, ಈ ಮಗುವನ್ನು ತಿಂದುಕೊ, ನನ್ನ ನ್ಯೂ ಕೊಂದು ಹಾಕು, ನಾವು ನಿನಗೆ ತಿಂಡಿಯನ್ನು ಹಾಕಿ ಸಾಕಿದ್ದಕ್ಕೆ ಇದೇ ನೀನು ಮಾಡುವ ಪ್ರತ್ಯುಪಕಾರ, ಇಗೋ ನಿನ್ನ ರೋಷಕ್ಕೆ ನಾವೆಲ್ಲರೂ ಬಲಿಯಾಗುತ್ತೇವೆ ; ಹೀಗೆಂದು ಎದುರಿಗೆ ಕೂಗಿ ಹೇಳಿದಳು. ಆಗ ಆ ಗಜರಾಜನು ಆ ಮಗುವನ್ನು ಸೊಂಡಿಲಿನಿಂದ ಎತ್ತಿಕೊಂಡು ಮೇಲೆ ಆಡಿಸಿ ತರುವಾಯ ಅದನ್ನು ತನ್ನ ಕತ್ತಿನ ಮೇಲೆ ಕೂರಿಸಿಕೊಂಡು, ಆ ಮಗುವಿಗೆ ಯಾವ ಯಾತನೆಯೂ ಇಲ್ಲದ ಹಾಗೆ ತಾಯಿಯ ಮುಂದೆ ಮಲಗಿಸಿ ಆರ್ಭಟವನ್ನೆಲ್ಲಾ ಬಿಟ್ಟು ಸುಮ್ಮನೆ ನಿಂತು ಕೊಂಡಿತು, ಆಗ ಮಾವುತನ ಹೆಂಡತಿಯು- ಛಿ, ನಡೆ ನಿನ್ನ ಗೊತ್ತಿಗೆ, ಎಂದು ಗದರಿಸಲು, ಕೂಡಲೆ ಗೊತ್ತಿಗೆ ಹೋಗಿ ಸಾದಾಗಿ ನಿಂತುಕೊಂಡಿತು. ಕೂಡಲೆ ಅದನ್ನು ಕಟ್ಟಿ ಹಾಕಿದರು.