ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧do ಸುಮತಿ ಮದನಕುಮಾರರ ಚರಿತ್ರೆ | [ಅಧ್ಯಾಯ ಆದರೆ ಹಾಗೆ ಸಂಭವಿಸಿದರೆ, ಅದು ನಮ್ಮ ಹಣೆಯಲ್ಲಿ ಬರೆದದ್ದೆಂದು. ತಿಳಿದು ಅನುಭವಿಸಿಯೇ ತೀರಬೇಕು. ಮದನ-ಅದೇನೋ ನಿಶ್ಚಯ. ಆದರೆ ಯಾರೂ ಇಲ್ಲದ ಅ೦ಥಾ ದೇಶದಲ್ಲಿ ನಿನ್ನನ್ನು ಕರೆದುಕೊಂಡು ಹೋಗಿ ಬಿಟ್ಟರೆ ನಿನಗೆ ದುಃಖ ಬರುವುದೋ ಇಲ್ಲವೋ ಹೇಳು. ಸುಮತಿ-ಮನಸ್ಸಿಗೇನೋ ಸಂಕಟವಾಗುತ್ತೆ ನಿಜ. ಅ೦ಥಾಕ್ರೂರಮೃಗಗಳ ಬಾಧೆಯನ್ನು ತಪ್ಪಿಸಿಕೊಳ್ಳಲು, ನಾನು ಚಿಕ್ಕ ಹುಡುಗ ನಾದ ಕಾರಣ ಶಕ್ತಿ ಸಾಲದೇ ಪೇಚಾಟವಾಗುವುದು ಖಂಡಿತ, ಆದರೆ ಅತ್ತರೆ ಪ್ರಯೋಜನವೇನು ? ಅದಕ್ಕಿಂತಲೂ ತಕ್ಕ ಉಪಾಯವನ್ನು ಹುಡುಕಿ, ಬಂದ ಸಂಕಟವನ್ನು ಹೋಗಲಾಡಿಸಿಕೊಳ್ಳಲು ಯತ್ನಿಸ ಬೇಕು. ಮದನ-ನೀನು ಏನು ಉಪಾಯವನ್ನು ಮಾಡಬಲ್ಲೆ ? ಸುಮತಿ ಸಿಕ್ಕಿದ ಸಾಮಾನುಗಳಿಂದ ಮನೆಯನ್ನು ಕಟ್ಟು ತಿದ್ದೆ. ಮದನ-ಮನೆಯನ್ನು ಕಟ್ಟುವುದಕ್ಕೆ ಯಾವ ಯಾವ ಸಮಾನು ಬೇಕು ? ಮರಗೆಲಸದವರು, ಕಾಮಾಟದವರು ಮೊದಲಾಗಿ ಅನೇಕ ಕೆಲಸದವರು ಬೇಕಾಗುವುದು, ಇದಕ್ಕೇನು ಮಾಡುತೀಯೆ ? ಸುಮತಿ – ಮನೆ ಎಂದರೆ ವಿಧ ವಿಧವಾದ ಮನೆಗಳಿವೆ, ಬಡವರ ಮನೆಗಳು ನಿಮ್ಮ ಅರಮನೆಯ ಹಾಗೆ ಇರುವವೆ ? ಮದನ-ಹವುದು, ಬಡವರ ಮನೆ ಬಹು ಅಸಹ್ಯವಾಗಿರುವುದು, ಅಂಥವರ ಮನೆಯಲ್ಲಿ ಅರಗಳಿಗೆಯೂ ನಾನು ಇರಲಾರೆ. ಸುಮತಿ- ಆದರೂ ನೋಡು, ಬಡವರು ದೊಡ್ಡವರ ಹಾಗೆಯೇ ಬಲಶಾಲಿಗಳಾಗಿಯೂ, ಆರೋಗ್ಯವಂತರಾಗಿಯೂ ಇರುತ್ತಾರೆ, ನಿನಗೆ ಮನೆ ಇಲ್ಲದೆ ಇದ್ದರೆ, ಬಡವರು ಮಾಡಿಕೊಂಡು ಇರುವಂಥಾ ಗುಡಿಸ ಲಿನಲ್ಲಾದರೂ ವಾಸಮಾಡಿಕೊಂಡು ಇರುತಿದ್ದೆಯೇ ಹೊರತು, ಮೂರು ಹೊತ್ತೂ ಮಳೆಯಲ್ಲಿ ನೆನೆದು ಬಿಸಿಲಿನಲ್ಲಿ ಒಣಗುತಿರಲಿಲ್ಲ. ಮದನ-ಈ ಮಾತು ನಿಜ, ಆದರೆ ಅಂಥಾ ಮನೆಯನ್ನು ಕಟ್ಟು ವುದು ಹೇಗೆ ?