ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಮತಿ ಮದನಕುಮಾರರ ಚರಿತ್ರೆ ೧೦೧ ಸುಮತಿ-ಹೇಗೆ ಎಂದರೆ, ನನ್ನ ಹತ್ತಿರ ಈಗ ಒಂದು ದೊಡ್ಡ ಮಚ್ಚು ಕತ್ತಿಯೂ ಒಂದು ಗುದ್ದಲಿಯೂ ಇದ್ದರೆ, ತೋರಿಸಿಯೇನು. ಗುದ್ದಲಿಯಲ್ಲಿ ಮಣ್ಣ ಅಗೆದು ನೀರ ಹಾಕಿ ಕಲೆಯಿಸಿ, ಮುದ್ದೆ ಕಟ್ಟಿ ಚಿಕ್ಕದಾಗಿ ಗೋಡೆಯನ್ನು ಹಾಕುವುದು, ಬಲವಾದ ಎರಡು ಕವೆ ಗಳನ್ನು ಕಡಿದು ಎದುರುಬದುರಿಗೆ ನೆಡುವುದು, ಅದರ ಮೇಲೆ ಅಡ್ಡ ಮರಗಳನ್ನು ಹಾಕಿ ಸಣ್ಣ ಕೊಂಬೆಗಳನ್ನು ಕಡಿದು ಮೇಲಿನಿಂದ ಕೆಳಗಿನ ವರೆಗೂ ಎರಡು ಕಡೆಯೂ ಇಳಿಜಾರಾಗಿಯೂ ಸ್ವಲ್ಪ ಒತ್ತಾಗಿಯೂ ಹಾಕುವುದು, ಆಮೇಲೆ ಹುಲ್ಲಿನ ಕಂತೆಗಳನ್ನು ತಂದು ಹಾಗೆ ಕಟ್ಟಿದ ಹಾರಿನ ಮೇಲೆ ಒತ್ತಾಗಿ ಹಾಕುವುದು. ಮದನ-ಮನೆಯನ್ನು ಕಟ್ಟುವುದು ಇಷ್ಟು ಸುಲಭ ಎಂದು ನನಗೆ ತಿಳಿಯದು. ಇಂಥಾ ಮನೆಗಳಲ್ಲಿ ಜನರು ವಾಸಮಾಡು ತಾರೆಯೆ ? ಇದು ಸಾಧ್ಯವೆ ? ಸುಮತಿ-ಸಾಧ್ಯವೇ, ಅನೇಕ ದೇಶಗಳಲ್ಲಿ ಬಡ ಜನರು ಇಂಥಾ ಮನೆಗಳಲ್ಲಿ ವಾಸಮಾಡುತ್ತಾರೆಂದು ನಾನು ಕೇಳಿದೇನೆ.. ಮದನ-ಹಾಗಾದರೆ ನಾನೂ ಒಂದು ಮನೆಯನ್ನು ಕಟ್ಟ ಬೇಕೆಂದು ಆಸೆಯಾಗುವುದು. , ಇವರಿಬ್ಬರೂ ಹೀಗೆ ಮಾತನಾಡುತಿರುವಾಗ ಜೋಯಿಸನು ಬಂದು, ಓದುವುದಕ್ಕೆ ಬನ್ನಿ ಎಂದು ಕರೆದು, ಮದನನನ್ನು ಕುರಿತು ಪ್ರಾಣಿಗಳಿಗೆ ದಯಾರಸವನ್ನು ತೋರಿಸಬೇಕೆಂಬ ವಿಷಯವಾಗಿ ನಾನು ಒಂದು ಒಳ್ಳೆ ಕಥೆಯನ್ನು ಹುಡುಕಿ ಇಟ್ಟಿದೇನೆ, ಅದನ್ನು ಓದುಎಂದು ಹೇಳಿದನು, ಮದನ-ಅಗತ್ಯವಾಗಿ ಓದುತ್ತೇನೆ. ಈಚೆಗೆ ನನಗೆ ಓದುವುದು ಚೆನ್ನಾಗಿ ಬಂತು. ಈಗ ನಾನು ಏನನ್ನಾದರೂ ಓದಿಕೊಳ್ಳುತಾ ಆನಂದಪಡಬಲ್ಲೆ. ಜೋಯಿಸ ಓದುವುದರಿಂದ ಅನೇಕರು ಆನಂದ ಪಡಬಲ್ಲರು. ಓದುವುದಕ್ಕೆ ಬಂದಮೇಲೆ ವಿದ್ಯವನ್ನು ಕಲಿಯುವುದು ಭಾರವಾಗಿರು ವುದಿಲ್ಲ, ಓದು ಬಲ್ಲವನು ಗ್ರಂಥಗಳನ್ನು ಓದಿ ಸಂತೋಷ ಪಡದೇ