ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೪ ಸುಮತಿ ಮದನಕುಮಾರರ ಚರಿತ್ರ [ಅಧ್ಯಾಯ ಹತ್ತಿರ ಕೂತುಕೊಂಡು, ಅಳುವುದಕ್ಕೆ ಮೊದಲುಮಾಡಿದನು. ಆಗ ಇವನ ಸಂಗಡಲೆ ಹೋಗುತಿದ್ದ ನಾಯಿಯು ಎಲ್ಲಿಂದಲೋ ಒಂದು ಗಂಟನ್ನು ಕಚ್ಚಿ ಕೊಂಡು ಬಂದು ಮುಂದೆ ಹಾಕಿತು. ಹುಡುಗನು ಅದನ್ನು ತೆಗೆದುಕೊಂಡು ಬಿಚ್ಚಿ ನೋಡಲು, ಅದರಲ್ಲಿ ಎರಡು ರೊಟ್ಟಿ ಇತ್ತು. ಇವನು ಆ ರೊಟ್ಟಿಯನ್ನು ತಿಂದು, ಸ್ವಲ್ಪ ಹಾಗೆಯೇ ಕೂತು ಕೊಂಡನು. ಆಗ ಒಂದು ಕುದುರೆಯು ಇವನ ಸಮಿಾಪಕ್ಕೆ ಬಂದು ನಿಂತಿತ್ತು. ಇವನಿಗೆ ಕಾಲು ಬಹು ಯಾತನೆಯಾಗಿದ್ದ ಕಾರಣ ಅದರಮೇಲೆ ಹತ್ತಿ ಕೊಂಡು ಹೋದನು. ಅದು ಇವನನ್ನು ದಾರಿಗೆ ಕರೆದುಕೊಂಡು ಹೋಗಿಬಿಟ್ಟಿತು. ಅಷ್ಟು ಹೊತ್ತಿಗೆ ಬೆಳದಿಂಗಳು ಬಂತು. ತಾನು ಆ ದಿನ ಬೆಳಗ್ಗೆ ಹುಲ್ಲನ್ನು ಹಾಕಿ, ಕಾಲನ್ನು ನೀವಿ, ಉಪಚರಿಸಿದ್ದ ಕುದು ರೆಯೇ ಅದೆಂದು ತಿಳಿದುಕೊಂಡನು, ಮತ್ತು ಈ ನಾಯಿ ಇಲ್ಲದಿದ್ದರೆ ನಾನು ಹಸಿವಿನಲ್ಲಿ ಸಾಯಬೇಕಾಗುತಿತ್ತು, ಈ ಕುದುರೆ ಇಲ್ಲದಿದ್ದರೆ ರಾತ್ರೆ ಎಲ್ಲಾ ಕಾಡಿನಲ್ಲಿ ನರಳಬೇಕಾಗುತಿತ್ತು, ನಾನು ಮಾಡಿದ ಉಪ ಕಾರವನ್ನು ಸ್ಮರಿಸಿಕೊಂಡು ಈ ಜಂತುಗಳು ನನಗೆ ಪ್ರತಿಯಾಗಿ ಉಪ ಕಾರವನ್ನು ಮಾಡಿದವು. ನಾವು ಒಬ್ಬರಿಗೆ ಒಳ್ಳೇದನ್ನು ಮಾಡಿದರೆ ಅದರ ಫಲ ನಮಗೆ ಎಂದಿಗಾದರೂ ಇದ್ದೇ ಇರುವುದು, ಎಂದುಕೊಂಡನು. ಇವನಿಗೆ ಇನ್ನೊಂದು ಅಪಾಯ ಕಾದಿತ್ತು, ಮುಂದಕ್ಕೆ ಹೊರ ಡಲು ಇಬ್ಬರು ಕಳ್ಳರು ಹೊಂಚು ಹಾಕಿಕೊಂಡಿದ್ದು ಓಡಿ ಬಂದು ಇವ ನನ್ನು ಹಿಡಿದುಕೊಂಡು, ಬಟ್ಟೆ ಯನ್ನು ಕಿತ್ತು ಕೊಳ್ಳುವುದಕ್ಕೆ ಮೊದಲು ಮಾಡಿದರು. ಈ ಹುಡುಗನ ಸಂಗಡಲೇ ಬರುತಿದ್ದ ಬಡ ಕಲ ನಾಯಿಯು ಒಬ್ಬ ಕಳ್ಳನ ಕಾಲನ್ನು ಚೆನ್ನಾಗಿ ಕಚ್ಚಿತು. ಅವನು ಅದನ್ನು ಹರಿಸಿಕೊಂಡು ಓಡಿಹೋದನು. ಇಷ್ಟರಲ್ಲಿಯೇ “ ಅಕೊ, ಅಲ್ಲಿದಾರೆ, ಹಿಡಿದುಕೊಳ್ಳಿ ಹಿಡಿದುಕೊಳ್ಳಿ,” ಎಂದು ಧ್ವನಿ ಕೇಳಿತು. ಕೂಡಲೆ ಒಬ್ಬ ಮನುಷ್ಯನು ಇನ್ನೊಬ್ಬನ ಹೆಗಲಿನಮೇಲೆ ಕೂತುಕೊಂಡು ಬಂದನು. ಆ ಕ್ಷಣವೇ ಇನ್ನೊಬ್ಬ ಕಳ್ಳನೂ, ಹುಡುಗನನ್ನು ಬಿಟ್ಟು ಬಿಟ್ಟು ಓಡಿಹೋದನು, ಆಗ ಈ ಬಾಲಕನನ್ನು ಕುರಿತು ಹೆಗಲಮೇಲೆ ಕೂತಿದ್ದ