ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ok ಸುಮತಿ ಮದನಕುಮಾರರ [ಅಧ್ಯಾಯ ಈ ಹುಡುಗನು ಮಗ್ಗಲ ಗ್ರಾಮದಲ್ಲಿ ಆಗುತಿದ್ದ ಮಾರಿಜಾತ್ರೆ ಯನ್ನು ನೋಡಬೇಕೆಂದು, ಒಂದು ದಿನ ಬೆಳಗ್ಗೆ ಎದ್ದು ಹೊರಟನು. ಇವನ ಸ್ವಭಾವಕ್ಕೆ ಸರಿಯಾದ ಒಂದು ಕೆಟ್ಟ ನಾಯಿಯೂ ಇವನ ಸಂಗಡಲೇ ಹೊರಟಿತು. ಊರ ಬಾಗಿಲಿನ ಹತ್ತಿರ ಒಬ್ಬ ಚಿಕ್ಕ ಹುಡು ಗನು ನಾಲ್ವತ್ತು ಐವತ್ತು ಕುರಿಗಳನ್ನು ಅಟ್ಟಿ ಕೊಂಡು ಹೋಗುತಾ ಈ ತುಂಟನನ್ನು ನೋಡಿ,-ಎಲಣ್ಣಾ, ನಿನ್ನ ನಾಯಿಯನ್ನು ಸ್ವಲ್ಪ ದೂರ ದಲ್ಲಿ ನಿಲ್ಲಿಸಿಕೊ, ಇಲ್ಲದಿದ್ದರೆ, ಅದಕ್ಕೆ ನಮ್ಮ ಕುರಿಗಳೆಲ್ಲಾ ಹೆದರಿ ಕೊಂಡು, ದಿಕ್ಕು ದಿಕ್ಕಿಗೆ ಓಡಿಹೋಗುವವು, ಎಂದು ಕೇಳಿಕೊಂಡನು. ಆ ಮಾತನ್ನು ಕೇಳಿದ ತಕ್ಷಣವೇ, ಆ ಕೆಟ್ಟ ಹುಡುಗನು ತನ್ನ ನಾಯಿ ಯನ್ನು ಕರೆದು- ಬೈ ರೂ, ಭೂ, ಎಂದು ಅದನ್ನು ಕುರಿಹಿಂಡಿನ ಮೇಲೆ ಭೂಬಿಟ್ಟನು. ಅದು ಬಗುಳುವುದಕ್ಕೆ ಮೊದಲು ಮಾಡಿತು. ಕುರಿಗಳೆಲ್ಲಾ ಕೈಗೆ ಸಿಕ್ಕದಹಾಗೆ ದಿಕ್ಕ ಪಾಲಾದವು. ಆಗ ಕುರೀ ಕಾಯುವ ಹುಡುಗನು ಇವ ಮಾಡಿದ ಕೆಲಸಕ್ಕೆ ಅಳುತಾ ಮನೆಗೆ ಹೊರಟುಹೋದನು, ಆ ಹಿಂಡಿನಲ್ಲಿದ್ದ ಬಲವಾದ ಒಂದು ಟಗರು ನಾಯಿಯಮೇಲೆ ತಿರುಗಿ ಬಿತ್ತು ; ತನ್ನ ತಲೆಯಿಂದ ನಾಯಿಗೆ ಬಲ ವಾದ ಡಿಕ್ಕಿ ಯನ್ನು ಹೊಡೆಯಿತು. ಟಗರಿಗಿದ್ದ ಉದ್ದವಾದ ಸನ್ನೆ ಕೊಂಬು ಆ ನಾಯಿಗೆ ಚುಚ್ಚಿ ಕೊಂಡಿತು. ಶ್ವಾನವು ಅರಚಿಕೊಳ್ಳು ತಾ ಓಡಿಹೋಯಿತು. ಅದಕ್ಕೆ ಪೂರಾ ಪೆಟ್ಟಾ ಯಿತು. ಇದಕ್ಕೆ ಸ್ವಲ್ಪವೂ ವ್ಯಥೆಪಡದೆ, ತುಂಟಹುಡುಗನು ಮುಂದಕ್ಕೆ ಹೋದನು. ಅಲ್ಲಿ ಒಬ್ಬ ಹುಡುಗಿಯು ಮೊಸರಿನ ಮಡಕೆಯನ್ನು ಇಳುಕಿಕೊಂಡು ಕೂತಿದ್ದಳು. ಅವಳು ಈ ಹುಡುಗನನ್ನು ನೋಡಿ-ಅಪ್ಪಾ, ಈ ತುಂಬಿದ ಗಡಿಗೆ ಯನ್ನು ನಾನು ಎತ್ತಲಾರೆ. ಮಾರಿಜಾತ್ರೆಯಲ್ಲಿ ನಮ್ಮ ತಂದೆಯು ಜನರಿಗೆ ದೊಡ್ಡ ಪಾನಕ ಪೂಜೆಯನ್ನು ಮಾಡಿಸುತ್ತಾನೆ. ಅನೇಕರಿಗೆ ನೀರಮಜ್ಜಿಗೆಯನ್ನು ಹಾಕಿಸುತ್ತಾನೆ. ಈ ಮಡಕೆಯನ್ನು ಎತ್ತಿ ನನ್ನ ತಲೇ ಮೇಲೆ ಹೊರಿಸಯ್ಯಾ, ನಿನಗೆ ಪುಣ್ಯ ಬರುವುದು, ಎಂದಳು. ಇದಕ್ಕೆ ದುಷ್ಟ ಹುಡುಗನು ಮೊಸರಿನ ಮಡಕೇ ಬಳಿಗೆ ಹೋಗಿ ನಿಂತು ಏನೆಲೇ ಹೆಣ್ಣೆ, ನಿಮ್ಮಪ್ಪ ಪಾನಕ ಪೂಜೆ ಮಾಡಿಸು.