ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿ ಠಿಕೆ ಸಣ್ಣ ಹುಡುಗರಿಗೆ ಕ್ರಮವಾಗಿ ವಿದ್ಯಾಭ್ಯಾಸ ಮಾಡಿಸುವುದು ಬಹು ಶ್ರಮ, ಇದರ ಕಷ್ಟವು ಈ ವಿಷಯದಲ್ಲಿ ಪರಿಶ್ರಮ ಪಟ್ಟಿ ರತಕ್ಕ ವಿದ್ವಾಂಸರಿಗೆ ಗೊತ್ತಾಗಿದೆ. - ಒಂದು ಮಠಾ ಇಟ್ಟು ಕೊಂಡು ಹುಡುಗ ರಿಗೆ ಓದಿಸುವುದಕ್ಕೂ ಇವನಿಗೆ ಯೋಗ್ಯತೆ ಇಲ್ಲ ; ಯಾವ ಕೆಲಸಕ್ಕೆ ತಾನೇ ಈ ಮನುಷ್ಯ ಬಂದಾನು ? ' ಎಂಬದಾಗಿ ಜನರು ಆಡಿಕೊಳ್ಳು ವರು, ಹುಡುಗರಿಗೆ ಓದಿಸುವುದು ಕೇವಲ ನಿಕೃಷ್ಟ ವಾದ ವೃತ್ತಿ ಎಂತಲೂ, ಇನ್ನು ಅದಕ್ಕಿಂತಲೂ ಹೀನವಾದ ವೃತ್ತಿ ಯಾವುದೂ ಇಲ್ಲ ವೆಂತಲೂ, ಈ ವೃತ್ತಿಯಿಂದ ಜೀವನ ಮಾಡತಕ್ಕವನು ಕೇವಲ ಅಧಮ ನೆಂತಲೂ, ಅರಿಯದ ಅಲ್ಪರು ಹೇಳಿಕೊಳ್ಳುವರು. ಆದರೆ ಉಪಾಧ್ಯಾ ಯರ ವಿಷಯವನ್ನು ಏನು ವರ್ಣಿಸಲಿ ? ಕೈಯಲ್ಲಿ ಒ೦ದು ಬೆತ್ತವನ್ನು ಹಿಡಿದು ಹತ್ತು ಜನ ಹುಡುಗರನ್ನು ಕೂರಿಸಿಕೊಂಡು ಯಾವ ವಿಧಿ ಯನ್ನೂ ಅನುಸರಿಸದೆ ಮನಸ್ಸಿಗೆ ಬಂದುದನ್ನು ಹೇಳುತಾ ಸಿಕ್ಕಿದ ಹುಡು ಗರನ್ನು ಬೆತ್ತದಿಂದ ಸೆಳೆಯುತಾ ಇದ್ದರೆ, ವಿದ್ಯಾಭ್ಯಾಸ ಮಾಡಿಸಿದಂತಾ ಗುವುದೆಂದು ತಿಳಿದಿರತಕ್ಕವರು ಅನೇಕರುಂಟು. ಇದೂ ಸಹಿತ ಅರಿ ಯದ ಅಲ್ಪರ ಕೆಲಸವೇ ಸರಿ. ಬಾಲಕರ ಬುದ್ದಿ ಯಾವ ಸ್ಥಿತಿಯಲ್ಲಿ ದೆಯೋ ಅದನ್ನು ಮೊದಲು ತಿಳಿದುಕೊಂಡು, ತನ್ನ ಬುದ್ಧಿಯನ್ನು ಬಾಲಕರ ಬುದ್ದಿ ಯ ಸ್ಥಿತಿಗೆ ಇಳಿಸಿಕೊಂಡು, ಹೇಳಿಕೊಟ್ಟದ್ದನ್ನು ಬಾಲಕರು ತಿಳಿದುಕೊಳ್ಳುವುದಕ್ಕೆ ಪ್ರತಿಬಂಧಕಗಳೇನಿವೆ ಎಂಬುದನ್ನು ಪರೀಕ್ಷಿಸಿ, ಅ೦ಥಾ ಪ್ರತಿಬಂಧಕಗಳನ್ನು ನಿವಾರಣಮಾಡಿ, ತನ್ನ ಮನಸ್ಸಿನಲ್ಲಿರುವುದನ್ನು ಬಾಲಕನು ತಿಳಿದುಕೊಳ್ಳುವುದಕ್ಕೆ ಬೆಳಕನ್ನು ತೋರಿಸುವ ಪುಣ್ಯಾತ್ಮರು ಈ ಲೋಕದಲ್ಲಿ ಬಹಳ ಕಡಮೆ, ಬಾಲ್ಯ ದಲ್ಲಿ ಆದ ಶಿಕ್ಷಾ ಕ್ರಮದ ರೀತಿಯು ಒಳ್ಳೇದಾಗಲಿ ಕೆಟ್ಟ ದಾಗಲಿ ಅದು