ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ಸುಮತಿ ಮದನಕುಮಾರರ ಚರಿತ್ರೆ - [ಅಧ್ಯಾಯ ದಾರಿಯಲ್ಲಿ ಒಬ್ಬ ಕುರುಡ ಸಿಕ್ಕಿ-ಅಯ್ಯಾ, ಅದು ಯಾರು ಧರ್ಮಾತ್ಮರು ; ದಾರಿಯನ್ನು ಕಾಣದೆ ಹೋಗುತಿದೇನೆ, ಕಾಲು ಬಹು ನೋಯುತಿದೆ. ನನ್ನನ್ನು ಎಲ್ಲಿಯಾದರೂ ಒಂದು ಕಡೆ ಕೂರಿಸಪ್ಪಾ ! ನಿನಗೆ ಪುಣ್ಯ ಬರುವುದು ಎಂದನು, ಆಗ ಈ ಹುಡುಗನುನನ್ನ ಹತ್ತಿರ ಬಂದು ಕೂತುಕೊ, ಎ೦ದು ಕುರುಡನ ಕೈಯನ್ನು ಹಿಡಿದುಕೊಂಡು ಹೋಗಿ, ಒಂದು ಹಸೀ ಸಗಣಿಯ ಗುಡ್ಡೆಯ ಮೇಲೆ ಇವನನ್ನು ಕೂರಿಸಿ, ಈಗ ನಿನಗೆ ಮೆತ್ತಗೆ ಇದೆಯೋ ? ಚೆನ್ನಾಗಿ ಕೂತುಕೊ ; ಬಾಯಿ ಬಿಡು, ತಿಂಡಿಯನ್ನು ಹಾಕುತ್ತೇನೆ ಅಂದನು. ಅದೇ ಪ್ರಕಾರ ಆ ಕಪೋತಿಯು ಬಾಯನ್ನು ಬಿಡಲು, ಈ ನೀಚ ಹುಡುಗನು ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಅವನ ಬಾಯಿಗೆ ತುರುಕಿದನು. ಈ ಸುಳುವನ್ನು ತಿಳಿದು, ಕುರುಡನು ಆ ಹುಡುಗನ ಬೆಟ್ಟುಗಳನ್ನು ಚೆನ್ನಾಗಿ ಕಡಿದುಬಿಟ್ಟನು. ಅವನಿಗೆ ತಕ್ಕ ಶಿಕ್ಷೆ ಯಾಯಿತು. ಈ ಹುಡುಗನು ಮತ್ತೂ ಮುಂದಕ್ಕೆ ಹೋದನು. ದಾರಿಯಲ್ಲಿ ಒಬ್ಬ ಕುಂಟನು-ಅಪ್ಪಾ ಒಂದು ಕಾಸು ಕೊಡು ಎಂದು ಕೇಳಿದನು, ಈ ದುರ್ಮಾರ್ಗನು ಅವನ ಮುಂದೆ ಒಂದು ಕಾಸನ್ನು ಎಸೆದನು. ಹೆಳವನು ಆ ಕಾಸನ್ನು ತೆಗೆದುಕೊಳ್ಳುವುದಕ್ಕಾಗಿ ಕೋಲನ್ನು ಊರಿ ಕೊಂಡು ಸ್ವಲ್ಪ ಬಗ್ಗಿದ. ಆಗ ಈ ಹುಡುಗನು ಆ ಊರುಗೋಲನ್ನು ತಳ್ಳಿ ಬಿಟ್ಟ ನು. ಆಗ ಕುಂಟ ಕೆಳಗೆ ಬಿದ್ದು ಪೆಟ್ಟಾ ಯಿತು. ಆ ಕುಂಟನ ಹತ್ತಿರ ಇದ್ದ ಮೂರು ದುಡ್ಡನ್ನೂ ಅವನ ಬಟ್ಟೆ ಯನ್ನೂ ಈ ಕೆಟ್ಟ ಹುಡುಗನು ಕಿತ್ತುಕೊಂಡು ಓಡಿಹೋದನು. ದಾರಿಯಲ್ಲಿ ಹೋಗುತಾ, ಈ ತುಂಟನು ಒಬ್ಬರ ಮನೆ ಹಿತ್ತಲ ಗೋಡೆಯನ್ನು ಹತ್ತಿ ಅಲ್ಲಿದ್ದ ಸೀಬೀಗಿಡದಿಂದ ಹಣ್ಣನ್ನು ಕೀಳುತಿ ದ್ದನು. ಆ ಮನೇ ಯಜಮಾನನಿಗೆ ಇದು ತಿಳಿಯಿತು. ಅವನು ತನ್ನ ನಾಯಿಯನ್ನು ಇವನ ಮೇಲೆ ಛಬಿಟ್ಟ, ಆ ನಾಯಿಯು ಗೋಡೇ ಹತ್ತುತಿದ್ದ ಈ ಕೆಟ್ಟ ಹುಡುಗನ ಕಾಲನ್ನು ಚೆನ್ನಾಗಿ ಕಚ್ಚಿತು. ಅಷ್ಟರಲ್ಲಿಯೇ ಯಜಮಾನನು ಬಂದು ಇವನನ್ನು ಗೋಡೇ ಮೇಲಿನಿಂದ