ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯] ಸುಮತಿ ಮದನಕುಮಾರರ ಚರಿತ್ರೆ Cot ಕೆಳಕ್ಕೆ ಎಳೆದುಕೊಂಡು, ಬಾಯಿಗೆ ನೀರ ಕೇಳುವ ಮಟ್ಟಿಗೆ ಹೊಡೆದು, -ಎಲಾ, ಖಳ, ನಿನ್ನಿಂದಲ್ಲವೆ ನನ್ನ ಕುರಿಗಳೆಲ್ಲಾ ಈ ದಿನ ಬೆಳಗ್ಗೆ ಓಡಿ ಹೋದ್ದು ! ಈಗ ನನ್ನ ಕೈಗೆ ಸಿಕ್ಕಿದ್ದೀಯೆ; ನಿನಗೆ ತಕ್ಕ ಶಿಕ್ಷೆ ಯನ್ನು ಮೂಡಿದೇನೆ, ಎಂದು ಹೇಳಿ ಆಚೆಗೆ ತಳ್ಳಿ ಬಿಟ್ಟ. ಈ ಹುಡುಗನು ಪೆಟ್ಟು ತಿಂದು ಅಳುತಾ, ಮುಂದಕ್ಕೆ ಇಂಥಾ ಕೆಲಸಕ್ಕೆ ಹೋಗಬಾರದು ಎಂದುಕೊಳ್ಳುತಾ ಸ್ವಲ್ಪ ದೂರ ನಡೆದನು. ಆಮೇಲೆ ನಾಯಿ ಬಾಲದ ಡೊಂಕಿನಹಾಗಿದ್ದ ಇವನ ಬುದ್ದಿ ಯು ಕೆಟ್ಟ ದಾರಿಗೆ ಎಳೆದುಕೊಂಡು ಹೋಯಿತು, ಅಲ್ಲಿ ಒಂದು ಹೊಲದ ಹತ್ತಿರ ಒಂದು ಹಸುವು ಮೇಯುತಿತ್ತು, ಈ ಅವಿವೇಕಿಯು ಹಾರಿ ಅದರ ಬೆನ್ನಿ ನಮೇಲೆ ಕೂತುಕೊಂಡು ಅದನ್ನು ಹೊಡೆದನು, ಪೂರೈ ದಲ್ಲಿ ಇವನಿಂದ ಬಚ್ಚಲಿಗೆ ನೂಕಿಸಿಕೊಂಡು, ಹೊಡಬಾಳ ಪಟ್ಟ ಹುಡುಗರೆಲ್ಲರೂ ಅಲ್ಲಿ ಆಡುತಿದ್ದರು, ಹಸುವಿನಮೇಲೆ ಇವನು ಕೂತಿದ್ದ ದನ್ನು ಅವರು ಕಂಡು, ಇವನಿಗೆ ತಕ್ಕ ಕೆಲಸವನ್ನು ಕೊಡಬೇಕೆಂದು ಶಬಿಕೆಯಿಂದ ಆ ಹಸುವನ್ನು ಚೆನ್ನಾಗಿ ಹೊಡೆದರು. ಅದು ಬಲವಾಗಿ. ಓಡಿಹೋಯಿತು, ಅದರ ನಾಗಾಲ ಓಟಕ್ಕೆ ಮೇಲಿದ್ದ ಹಸುವಿನ ಸವಾ ರನು ತಡೆಯಲಾರದೆ ಕೆಳಕ್ಕೆ ಮಗುಚಿಕೊಂಡು ನೀರು ತುಂಬಿದ ಒಂದು ಹಳ್ಳದೊಳಕ್ಕೆ ಬಿದ್ದನು, ಮೈ ಕೈ ಎಲ್ಲಾ ತರೆದು ಹೋಯಿತು. ರಟ್ಟೆ ಮುರಿಯಿತು. ಈ ಕಷ್ಟ ಪರಿಹಾರವಾದರೆ, ತಾನು ಎಂದಿಗೂ ಚೇಷ್ಟೆಗೆ ಹೋಗುವುದಿಲ್ಲವೆಂದು ಆ ದುಷ್ಟನು ಅಂದುಕೊಳ್ಳು ತಾ, ಗೋಳಾಡುತಿ ದ್ವ ನು, ಕೊನೆಗೆ ಇವನ ಕೈಯಿಂದ ಗಡಿಗೇ ಮೊಸರನ್ನು ತನ್ನ ತಲೇ ಮೇಲೆ ಸುರಿಸಿಕೊಂಡಿದ್ದ ಹುಡುಗಿಯು-ಇನ್ನು ಮೇಲೆ ಇಂಥಾ ಕೆಟ್ಟ ತನಕ್ಕೆ ಹೋಗಬೇಡವೆಂದು ಬುದ್ದಿ ಹೇಳಿ, ಅವನ ಕೈ ಹಿಡಿದು ಎಬ್ಬಿಸಿ. ಮೇಲಕ್ಕೆ ತಂದು ಬಿಟ್ಟು ಹೊರಟುಹೋದಳು.