ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ನೆ ಅಧ್ಯಾಯ ಈ ರೀತಿಯಲ್ಲಿ ಕಥೆಯು ಓದಿ ಮುಗಿಯಿತು, ಆಗ ಮದನುಉಪಾಧ್ಯಾಯರೆ, ಈ ಇಬ್ಬರು ಹುಡುಗರ ಗತಿ ಏನಾಯಿತು, ನೋಡಿ ದಿರ ? ಒಬ್ಬ ಹುಡುಗನ ಒಳ್ಳೆತನದಿಂದ ಕಂಡಕಂಡವರೆಲ್ಲರೂ ಅವನಿಗೆ ಉಪಕಾರ ಮಾಡಿದರು, ಇನ್ನೊಬ್ಬ ಹುಡುಗನ ಕೆಟ್ಟತನದಿಂದ ಸಿಕ್ಕಿ ದವರೆಲ್ಲರೂ ಇವನಿಗೆ ಶತ್ರುಗಳಾದರು. ಕಡೆಗೆ ಇವನಿಂದ ಅ ಸಕಾರ ವನ್ನು ಹೊಂದಿದಾಗ್ಯೂ, ಆ ಮೊಸರಿನ ಹುಡುಗಿಯು ಇವನ ಕಷ್ಟಕ್ಕೆ ಆಗಬೇಕಾಯಿತು, ಎಂದು ಹೇಳಿದನು, - ಕೂಡಲೇ ರಾಮಜೋಯಿಸನು ಹೇಳಿದ್ದೇನೆಂದರೆ--ಅಯ್ಯೋ ಈ ಪ್ರಪಂಚದಲ್ಲಿ ನಾವು ಮತ್ತೊಬ್ಬರಿಗೆ ದಯವನ್ನು ತೋರಿಸಿದರೆ, ಅವರೂ ನಮಗೆ ದಯವನ್ನು ತೋರಿಸುವರು , ನಾವು ಇತರರಿಗೆ ಉಪಕಾರ ಮಾಡಿದರೆ, ಅವರೂ ನಮಗೆ ಪ್ರತ್ಯುಪಕಾರಮಾಡುವರು. ಯಾರಾದರೆ ತಾನೇ ಏನು ! ಎಂಥಾ ಹೀನಸ್ಥಿತಿಯಲ್ಲಿದ್ದರೆ ತಾನೇ ಏನು ? ಅವರಿಂದ ನಮಗೆ ಯಾವಾಗಲಾದರೂ ಒಂದೊಂದು ಕೆಲಸ ಆಗಲೇಬೇಕು. ಆದ್ದ ರಿಂದ ಬುದ್ದಿವಂತರು ಎಲ್ಲರಲ್ಲಿಯೂ ನಡತೆಯನ್ನು ಇಟ್ಟು ಕೊಂಡಿರ ಬೇಕು, ಹಾಗೆ ನಡತೆಯನ್ನು ಇಟ್ಟು ಕೊಂಡಿದ್ದರೆ, ನನಗೆ ಅವರಿಂದ ಉಪಕಾರ ಆಗುವುದು ಎಂತಲೇ ಅಲ್ಲ, ಹಾಗೆ ನಡತೆ ಪರರಾಗಿರುವುದು ನಮ್ಮ ಕರ್ತವ್ಯವಾಗಿದೆ. ಉದಾರವಾದ ಮನಸ್ಸುಳ್ಳವರು ಎಲ್ಲರಿಗೂ ಉಪಕಾರವನ್ನು ಮಾಡುವುದರಲ್ಲಿ ಸಂತೋಷವನ್ನು ಹೊಂದುತ್ತಿರಬೇಕು. ಎಲ್ಲರಲ್ಲಿಯೂ ಸ್ನೇಹವನ್ನು ಬೆಳಸಿಕೊಂಡಿರಬೇಕು, ನಮಗೆ ಈಗಿರುವ ಸ್ಥಿತಿಯಲ್ಲಿ ಇನ್ನೊಂದು ಗಳಿಗೆಗೆ ಏನಾಗುವುದೊ, ಕಂಡವರಿಲ್ಲ. ಅತ್ಯಂತ ಹೀನ ಸ್ಥಿತಿಯಲ್ಲಿ ಇರತಕ್ಕವರು ಸಹಿತವಾಗಿ ನಮಗೆ ಉಪಕಾರವನ್ನು ಮಾಡುವಂಥಾ ದುರ್ದಶೆ ಬಂದರೂ ಬರಬಹುದು, ಇದಕ್ಕಾಗಿ ಒಂದು ಕಥೆ ಇದೆ. ಈಗ ಹೋಗಿ ಓಡಾಡಿಕೊಂಡು ಬನ್ನಿ ಹೀಗೆಂದು ಉಪಾಧ್ಯಾಯ ಹೇಳಿದ ಮಾತನ್ನು ಕೇಳಿ ಮದನನು -ಆ ಕಥೆ ಈಗಲೇ ಅಪ್ಪಣೆಯಾಗಲಿ, ಎಂದು ಕೇಳಿದನು.