ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಸುಮತಿ ಮದನಕುಮಾರರ ಚರಿತ್ರೆ ೧೧೧ ಜೋಯಿಸ-ಈಗ ಹೇಳುವುದಿಲ್ಲ, ಅದಕ್ಕೆ ಕಾಲ ಬರುತ್ತೆ ; ಆಗ ಹೇಳಿಯೇನು, ಈಗ ತೋಟಕ್ಕೆ ಹೋಗಿ ಸ್ವಲ್ಪ ಕೆಲಸಮಾಡಬೇಕು. ಮದನ-ಇನ್ನೊಂದು ಮಾತ ತಮ್ಮನ್ನ ಕೇಳಬೇಕೆಂದು ಇದೇನೆ. ಜೋಯಿಸ-ನೀನು ಏನ ಕೇಳಿದರೂ ಹೇಳುತೇನೆ ಕೇಳು ; ಆದರೆ ನೀನು ಕೇಳುವ ಮಾತು ಸರಿಯಾಗಿರಬೇಕು. ಮದನ-ಒಬ್ಬ ಮನುಷ್ಯನಿಗೆ ಎಲ್ಲಾ ಕೆಲಸ ಮಾಡುವುದಕ್ಕೂ ಬಂದಿರಬೇಕು. ಇದನ್ನು ಯೋಚಿಸುತ್ತಾ ಇದೇನೆ. ಜೋಯಿಸ-ಸರಿ, ಮನುಷ್ಯನಿಗೆ , ಪ್ರಜ್ಞೆ ಎಷ್ಟು ಹೆಚ್ಚಿದರೆ ಅಷ್ಟು ಒಳ್ಳೇದು. - ಕೆಲವು ಕಾಲ ಕಳೆಯಿತು. ಸ್ವಲ್ಪ ದಿವಸದ ಕೆಳಗೆ ಒಂದು ಕಥೆ ಯನ್ನು ಹೇಳುತೇನೆಂದು ಜೋಯಿಸರು ಹೇಳಿದ್ದರಷ್ಟೆ, ಆ ಕಥೆಯನ್ನು ಹೇಳಬೇಕೆಂದು ಮದನನು ಕೇಳಿಕೊಂಡನು. ಅದು ಏನೆಂದರೆ :- ತುರುಕನ ಕೃತಜ್ಞತೆ ಪೂರ್ವದಲ್ಲಿ ಪಂಜಾಬುದೇಶದ ಹಿಂದೂ ರಾಜರಿಗೂ ನೆರೆರಾಜ್ಯದ ತುರುಕರಿಗೂ ಆಗಾಗ್ಗೆ ಯುದ್ಧ ನಡೆಯುತ್ತಲೇ ಇತ್ತು, ಆಗಾಗ್ಗೆ ಹಿಂದೂಗಳನ್ನು ತುರುಕರೂ, ತುರುಕರನ್ನು ಹಿಂದೂಗಳೂ ಕೈಸೆರೆ ಹಿಡಿದು ಆ ಖೈದಿಗಳನ್ನು ಗುಲಾಮರಹಾಗೆ ಮಾರುತ್ತಿದ್ದರು. ಹೀಗೆ ಒಂದಾನೊಂದು ಯುದ್ಧದಲ್ಲಿ ಹಿಂದುಗಳು ಕೆಲವರನ್ನು ಸೆರೆಹಿಡಿದು ಗುಲಾಮರನ್ನಾಗಿ ಮಾರಿದರು. ಅವರಲ್ಲಿ ಸುಲೇರ್ಮಾ ಎಂಬ ಒಬ್ಬ ಖೈದಿಯು ಸೇರಿದ್ದನು. ಆ ಖೈದಿಗಳನ್ನೆಲ್ಲಾ ಮಾರಿದಹಾಗೆಯೇ ಈ ಸುಲೇಮಾನನನ್ನು ಮಾರಿದರು. ಅಟಕ್ ಪಟ್ಟಣದ ಒಬ್ಬ ಸಾಹುಕಾರನು ಅವನನ್ನು ಕೊಂಡುಕೊಂಡು ಬೇಕಾದಾಗ ಅವನ ಕೈಯಲ್ಲಿ ಬೇಕಾದ ಕೆಲಸವನ್ನು ಮಾಡಿಸುತ್ತಾ, ಉಳಿದ ಕಾಲದಲ್ಲಿ ತನ್ನ ಮನೇಬಾಗಿಲ ಹತ್ತಿರ ಅವನನ್ನು ಬೇಡಿಹಾಕಿ ಕೂರಿಸಿ ಇರುತಾ ಇದ್ದನು. ಅದೇ ಪ್ರಕಾರ ಸುಲೇಮಾನನು ಬಾಗಿಲಲ್ಲಿಯೇ ಕೂತು ಹೋಗಿ ಬರುವವರನ್ನು ನೋಡಿಕೊ೦ಡಿದ ನು.