೧೦]. ಸುಮತಿ ಮದನಕುಮಾರರ ಚರಿತ್ರೆ ೧೧೩ ಹೋಗುವ ದಾರಿಯಲ್ಲಿ ಒಬ್ಬ ಗುಲಾಮರವನು ಕೂತುಕೊಂಡಿರು ತಾನೆ ; ಅವನು ಬಹು ಒಳ್ಳೆಯವನು; ಅವನಿಗೆ, ಏನೋ ಸಂಕಟ ಬಂದಿದೆ, ಯಾವಾಗಲೂ ಅಳುತ್ತಲೇ ಇರುತ್ತಾನೆ, ನೀವು ಏನಾದರೂ ಮಾಡಿ ಅವನ ಕಷ್ಟವನ್ನು ಬಿಡಿಸಬೇಕು ಎಂದನು. ಮಗನ ಮೇಲಿನ ವಿಶೇಷವಾದ ಪ್ರೀತಿಯಿಂದ, ಸಾಹುಕಾರನು ಮೊದಲು ಅಲ್ಲಿಗೆ ಹೋಗಿ ವಿಚಾರಿಸಬೇಕೆಂದು, ಮಗನನ್ನೂ ಕರೆದುಕೊಂಡು ಆ ಗುಲಾಮರವನು ಇರುವ ಸ್ಥಳಕ್ಕೆ ಹೋದನು. ಸಾಹುಕಾರನು ಸುಲೇಮಾನನನ್ನು ಕುರಿತು-ನಿನಗೆ ಏನು ಕಷ್ಟ ಬಂದಿದೆ ? ಯಾಕೆ ಅಳುತೀಯೆ ? ಎಂದು ಎಷ್ಟು ಬಗೆಯಲ್ಲಿ ಕೇಳಿದರೂ ಅವನು ಮಾತನಾಡಲಿಲ್ಲ. ಮತ್ತೆ ಸಾಹುಕಾರನು--ಯಾಕೆ ಮಾತ ನಾಡುವುದಿಲ್ಲ ? ಈವರೆಗೂ ನಿನ್ನ ಎದುರಿಗೆ ಸುಮ್ಮನೆ ನಿಂತುಕೊಂಡು ನೋಡಿದೆ, ನೀನು ಬಹು ನಿಧಾನಿ, ಅತ್ಯಂತ ಪ್ರಾಮಾಣಿಕ, ಎಂದು ನಿನ್ನ ಮುಖಭಾವದಿಂದ ತೋರುತ್ತೆ, ನಿನ್ನ ಗುಣವನ್ನು ನನ್ನ ಮಗ ಬಹುವಾಗಿ ಹೇಳಿದ, ಆ ಮಗುವನ್ನು ಕುರಿತು ಶಾನೆ ಆದರದಿಂದ ಮಾತನಾಡತಕ್ಕ ಸುಲೇಮಾನನೆಂಬ ತುರುಕರವನು ನೀನೇ ಏನಪ್ಪ ? ಎಂದು ಕೇಳಿದನು. ಅದಕ್ಕೆ ಗುಲಾಮರವನು- ಸ್ವಾಮಿ ಹುದು, ಭಾಗ್ಯಹೀನನಾದ ಆ ಮನುಷ್ಯ ನಾನೇ ; ಈಗ ಮೂರು ವರುಷದಿಂದ ಸೆರೆಮನೆಯಲ್ಲಿದೇನೆ. ಈ ಮೂರು ವರುಷದಿಂದಲೂ ನಿಮ್ಮ ಮಗ ಹೊರತು ಮತ್ತೆ ಯಾರೂ, ನೀನು ಇದ್ದೀಯ ? ಸತ್ತೆಯ ? ಎಂದು ಕೇಳಿದವರಿಲ್ಲ; ಈ ಹಸುಳೆ ಒಬ್ಬ ಮಾತ್ರ ಹಿತಕರವಾದ ನಾಲ್ಕು ಮಾತ ನಾ ಡಿ ದಯವಿಟ್ಟು ನನ್ನ ಕ್ಷೇಮಲಾಭವನ್ನು ವಿಚಾರಿಸುತಿದ್ದನು. ಈ ಹಾಳ ನೀಚ ರಾಜ್ಯದಲ್ಲಿ ಆತ ಒಬ್ಬ ಚೆನ್ನಾಗಿದ್ದರೆ ಸಾಕೆಂದು ಕೋರು ತೇನೆ, ಮುಸಲ್ಮಾನರಿಗಾಗಲಿ ಹಿಂದುಗಳಿಗಾಗಲಿ ಒಬ್ಬನೇಯಾಗಿರುವ ಆ ದೇವರು ನಿಮ್ಮ ಮಗನನ್ನು ಸಂರಕ್ಷಿಸಲಿ ಎಂದು ಪ್ರಾರ್ಥಿಸುತೇನೆ, ಹೀಗೆಂದು ಹೇಳಿದನು. ಈ ಮಾತಿಗೆ ಮುಲ್ತಾನಿ ಸಾಹುಕಾರನು - ಅಯ್ಯ, ನಿನಗೆ ಯಾವಾಗಲೂ ಏನೋ ದುಃಖಪ್ರಾಪ್ತವಾಗಿ ನೀನು ಸದಾ ಅಳುತಲೇ 8
ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೬
ಗೋಚರ