ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಸುಮತಿ ಮದನಕುಮಾರರ ಚರಿತ್ರೆ ೧೧೫ ಸುಲೇರ್ಮಾ-ಆ ಮಾರ್ಗ ಯಾವುದು ? ನನ್ನ ಪ್ರಾಣಹೋದರೂ ಸರಿಯೆ, ಅದನ್ನು ಸಾಧಿಸುವುದೇ ಸಿದ್ದ, ಸಾಹುಕಾರ- ಹಾಗಾದರೆ ಕೇಳು. ಈ ಊರಿನಲ್ಲಿ ನನಗೆ ಒಬ್ಬ ಶತ್ರು ಇದಾನೆ. ಅವನು ನನಗೆ ಬಹು ಅವಮಾನವನ್ನು ಮಾಡಿದಾನೆ. ಆದರೆ ಅವನು ಬಹು ಬಲಶಾಲಿ, ಅಷ್ಟೂ ಅಷ್ಟು ಅಹಂಕಾರಿ. ಅವನ ಶಕ್ತಿಗೆ ಹೆದರಿಕೊಂಡು ಇದುವರೆಗೂ ಸುಮ್ಮನೇ ಇದೇನೆ, ನಿನ್ನ ನ್ನು ನೋಡಿದರೆ ಬಹುಪರಾಕ್ರಮಶಾಲಿಯಾಗಿ ಕಾಣುತ್ತೀಯೆ, ಈ ಕಠಾರಿ ಯನ್ನು ಹಿಡಿ ನನ್ನ ಸಂಗಡ ಬಾ, ಅವನನ್ನು ತೋರಿಸುತೇನೆಕತ್ತಲೆ ಯಾದಮೇಲೆ ಅವನನ್ನು ಪೂರೈಸಿಬಿಡು. ಹೀಗೆಂದು ಹೇಳಿದ ಸಾಹುಕಾರನ ಮಾತನ್ನು ಕೇಳಿ, ಸುಲೇಮಾ ನನಿಗೆ ಇವನಲ್ಲಿ ಅಲಕ್ಷ ಹುಟ್ಟಿ ತು, ಕೂಡಲೆ ಕೋಪ ಬಂತು. ಆಗ ಎರಡು ಕೈಯನ್ನೂ ಎರಡು ಕೆನ್ನೆಗೆ ಬಡಿದುಕೊಳ್ಳುತಾ-ತೋಬಾ, ತೋಬಾ ! ನಾನು ಇಂಥಾ ನೀಚರಿಗೆ ಸೆರೆಸಿಕ್ಕ ಬಹುದೆ ! ಎಲಾ, ಛೀ। ಹೋಗು, ಇಂಥಾ ಘಾತುಕ ಕೆಲಸಕ್ಕೆ ಸುಲೇಮಾನ ಎಂದಿಗೂ ಒಡಂ ಬಡಲಾರ. ಇದೇಯೊ ? ನಿಮ್ಮ ಹಿಂದೂ ಮತದ ನೀತಿ, ನಮ್ಮ ಜನ ರೆಲ್ಲರನ್ನೂ ಈಗಲೇ ಸೆರೆಯಲ್ಲಿ ಇಟ್ಟ ರೂ ಸರಿಯೇ, ಪ್ರಾಣ ಹೋದರೂ ಸರಿಯೆ, ಈ ಮಹಾಪಾತಕ ನನಗೆ ಬೇಡ, ಎಂದನು. ಅದಕ್ಕೆ ಸಾಹುಕಾರನು ತನ್ನ ಮನಸ್ಸಿನಲ್ಲಿ ಆ ಮಾತನ್ನು ಮೆಚ್ಚುತಾ ಆ ತುರುಕನನ್ನು ಕುರಿತು--ಅಯ್ಯ, ನಾನು ಹೇಳಿದ ಮಾತನ್ನು ನಿಧಾನವಾಗಿ ಯೋಚಿಸು, ಎಂದು ಹೇಳಿ ಹೊರಟು ಹೋದನು. ಮಾರನೇ ದಿನ ಮತ್ತೆ ಬಂದು-ಏನಪ್ಪಾ, ನಾನು ಹೇಳಿದ್ದನ್ನು ಯೋಚಿಸಿದೆಯ ? ಎಂದನು. ಅದಕ್ಕೆ ಸುಲೇಮಾ ನನು ಯಾವ ಮಾತನ್ನೂ ಆಡದೆ ಇವನ ಕಡೆಗೆ ತಿರುಗದೇ ಅಲಕ ವಾಗಿ ಕೂತಿದ್ದನು, ಮತ್ತೆ ಮುಲ್ತಾನಿಯು-ಯಾಕೆ ಸುಮ್ಮನೇ ಇದೀಯೆ ? ನಾನು ನಿನ್ನೆ ಹೇಳಿದ ಮಾತು ಆಗ ಕೆಟ್ಟದೆಂದು ತೋರಿ ದಾಗ್ಯೂ, ಯುಕ್ತವಾದ್ದೆಂದು ಈಗ ನೀನು ತಿಳಿದು ಇರಬಹುದು. ಇದಕ್ಕೆ ಕಾರಣವನ್ನು ಈಗ ವಿಸ್ತಾರವಾಗಿ ಹೇಳುತ್ತೇನೆ ಎಂದನು. ಈ