ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧t ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ. ಮಾತನ್ನು ಆಡಿ ಮುಗಿಸುವುದರೊಳಗೆ ಸಾಹುಕಾರನ ಮುಖವನ್ನು ದುರು. ಗುಟ್ಟಿ ಕೊಂಡು ನೋಡಿ, ಸುಲೇಮಾನನು-ನಿನ್ನ ಬಾಯಿಯನ್ನು ಮುಚ್ಚು, ನಾನು ಪಡುತಿರುವ ಕಷ್ಟಕ್ಕೆ ಅಂಥಾ ಕೆಟ್ಟ ಮಾತ ಕೇಳುವ ಕಷ್ಟವನ್ನೂ ತಂದು ಸೇರಿಸಬೇಡ, ನೀನು ಹೊರಟು ಹೋಗು, ಎಂದನು. ಕೂಡಲೆ ಸಾಹುಕಾರನು ಸುಲೇಮಾನನನ್ನು ಕುರಿತು, ಅಪ್ಪಾ, ನೀನು ಮಹಾ ಪುರುಷ, ಸಾಧಾರಣನಲ್ಲ, ನಿನ್ನನ್ನು ನೋಡಿದಾಗಿನಿಂದಲೂ ನಿನ್ನಲ್ಲಿ ನನಗೆ ಗೌರವ ಹೆಚ್ಚು ತಿದೆ. ನಿನ್ನ ಮನಸ್ಸನ್ನು ನೋಡುವುದಕ್ಕೋ ಸ್ಕರ ನಿನ್ನ ಸಂಗಡ ಇಂಥಾ ಕೆಟ್ಟ ಮಾತನ್ನು ಆಡಿದ್ದೇ ಹೊರತು ಮತ್ತೆ ಬೇರೇ ಇಲ್ಲ. ಪಾಪಕ್ಕೆ ನೀನು ಹೇಗೆ ಹೆದರುತೀಯೋ ನಾನೂ ಹಾಗೆ ಯೇ ಹೆದರುತೇನೆ, ನಿನಗಾಗಿ ಕೊಡುವ ಹಣವನ್ನು ಕೊಟ್ಟು ಬಿಟ್ಟು ಇದೇನೆ. ನಿನಗೆ ಬಿಡುಗಡೆಯಾಗಿದೆ. ಆ ಬೇಡಿಯನ್ನು ತೆಗೆದುಬಿಡು. ಎಂದು ಹೇಳಿದನು ಮತ್ತು ಸುಲೇಮಾನನಿಗೆ ದಾರಿ ವೆಚ್ಚಕ್ಕಾಗಿ ಕೊಟ್ಟು ಅವನನ್ನು ಉಪಚರಿಸಿ ತುರುಕಸ್ಥಾನಕ್ಕೆ ಪ್ರಯಾಣಮಾಡಿಸಿ ಕಳುಹಿಸಿದನು. ತರುವಾಯ ಕೆಲವು ತಿಂಗಳಾಯಿತು, ಒಂದು ರಾತ್ರೆ ಸರಿಹೋತ್ರಿ ನಲ್ಲಿ ಆ ಮುಲ್ತಾನಿ ಸಾಹುಕಾರನ ಮನೆಗೆ ಬೆಂಕಿ ಬಿತ್ತು, ಮನೆಯು ಎಲ್ಲಾ ಕಡೆಯಲ್ಲಿಯೂ ಹತ್ತಿಕೊಂಡು ಅರೆವಾಸಿ ಉರಿದು ಹೋದ ಮೇಲೆ ಬೆಂಕಿ ಬಿದ್ದ ಸಂಗತಿ ಮನೇ ಜನಕ್ಕೆ ತಿಳಿಯಿತು, ಅವರವರು ತಂತಮ್ಮ ತಲೆಯನ್ನು ತಪ್ಪಿಸಿಕೊಂಡು ಓಡಿ ಹೋದರು. ಅಲ್ಲಿದ್ದ ಒಬ್ಬಿಬ್ಬರು ಆಳುಗಳು ಮೂರನೇ ಅಂತಸ್ತಿನಲ್ಲಿ ಮಲಗಿದ್ದ ಸಾಹುಕಾರ ನನ್ನು ಎಬ್ಬಿಸಿ ಈಚೆಗೆ ಕರೆತರುವುದು ಬಹು ಕಷ್ಟವಾಯಿತು. ಇನ ಇಳಿದ ಕೂಡಲೆ ಮರದ ಮೆಟ್ಟಲುಸಹಿತ ಹತ್ತಿಕೊಂಡು ಹೋಯಿತು. ಆ ಗದ್ದಲದಲ್ಲಿ ಇನ್ನೊಂದು ದೊಡ್ಡ ಅಚಾತುರ್ಯ ನಡೆಯಿತು. ಸಾಹುಕಾರನ ಮಗನು ಉಪ್ಪರಿಗೇ ಮೇಲೆ ಮಲಗಿ ನಿದ್ರೆ ಮಾಡುತಿ ದ್ದನು. ಇವನನ್ನು ಕರೆತರಲು ಗಾಬರಿಯಲ್ಲಿ ಎಲ್ಲರೂ ಮರೆತು ಬಿಟ್ಟರು. ಆ ಬಾಲಕನು ಬೆಂಕೀಶಕೆಯನ್ನು ತಡೆಯಲಾರದೆ ಎದ್ದು ಈಚೆಗೆ ಓಡಿ ಬಂದು ಮಹಡಿ ಮೇಲೆ ನಿಂತು-ಅಯ್ಯೋ ನಾನು