ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] | ಸುಮತಿ ಮದನಕುಮಾರರ ಚರಿತ್ರೆ ೧೧೭ ಸತ್ತು ಹೋಗುತ್ತೇನೆ, ನನ್ನ ನ್ನು ಕರೆದುಕೊಳ್ಳಿ ಎಂಬುದಾಗಿ ಅಳುತಾ ಕೈಗಳನ್ನು ಚಾಚಿದನು. ಇದನ್ನು ಕಂಡು ಸಾಹುಕಾರನು--ಅಯ್ಯೋ ನನ್ನ ಮಗ ಹೋಗುತಾನೆಯಲ್ಲಾ ! ನನಗೆ ಇನ್ನೇನು ಗತಿ, ಯಾರಾ ದರೂ ನನ್ನ ಮಗನನ್ನು ತಂದುಕೊಟ್ಟರೆ ನನ್ನ ಆಸ್ತಿಯಲ್ಲಿ ಅರ್ಧ ವನ್ನು ಕೊಡುತೇನೆ, ಎಂದು ಕೂಗುತ್ತಾ ಕೆಳಕ್ಕೆ ಬಿದ್ದನು. ಜ್ಞಾನತಪ್ಪಿ ಹೋಯಿತು, ಆ ಹುಡುಗನನ್ನು ಈಚೆಗೆ ಕರೆದುಕೊಳ್ಳಬೇಕೆಂದು ಅಲ್ಲಿದ್ದ ಜನರೆಲ್ಲರೂ ಹೊರಟರು. ಅನೇಕ ಏಣಿಗಳನ್ನು ತಂದು ಹಾಕಿ ದರು. ಆದರೇನು ? ಆ ಮಹಾಜ್ವಾಲೆಯಲ್ಲಿ ಒಳಕ್ಕೆ ಯಾರುತಾನೇ ನುಗ್ಗಿ ಯಾರು ? ಬಾಗಿಲವಾಡಗಳೆಲ್ಲಾ ಹತ್ತಿ ಕೊಂದು ಉರಿಯುತಿದ್ದವು. ಒಂದೊಂದು ಕಿಟಕಿಯಿಂದಲೂ ಈಚೆಗೆ ಉರಿ ಎರಚುತಿತ್ತು. ಆಗ ಅಲ್ಲಿದ್ದವರೆಲ್ಲರೂ ಸಾಹುಕಾರನ ಮಗ ಸತ್ತು ಹೋದನೆಂದು ನಿಶ್ಮಿಸಿ ಕೊಂಡರು. ಇಷ್ಟರಲ್ಲಿಯೇ ಇನ್ನೊಂದು ಆಶ್ಚರ್ಯ ನಡೆಯಿತು. ಒಬ್ಬ ಮನುಷ್ಯನು ಗುಂಪಿನಿಂದ ಬಹು ಧೈರ್ಯವಾಗಿ ಓಡಿಬಂದು ಒಂದು ಏಣೀಮೇಲೆ ಹತ್ತಿ ಉರಿಯ ಒಳಕ್ಕೆ ನುಗ್ಗಿದನು, ಆಗ ವಿಶೇಷವಾಗಿ ಹೊಗೆ ಸುತ್ತಿಕೊಂಡಿತು, ಆ ಹುಡುಗನ ಜೊತೆಗೆ ಇವನೂ ಸತ್ತ ನೆಂದು ಜನರು ತಿಳಿದುಕೊಂಡರು, ಆದರೆ ಕಾಲುಗಳಿಗೆಯೊಳಗಾಗಿ ಆ ಧೀರನು ಹುಡುಗನನ್ನು ಎತ್ತಿಕೊಂಡು ಅದೇ ಏಣೀಮೇಲೆ ಇಳಿದು ಬಂದು ಮಗುವನ್ನು ಸಾಹುಕಾರನ ಮುಂದೆ ನಿಲ್ಲಿಸಿದನು, ಆ ಮುಲ್ಲಾ ನಿಯು ಇದನ್ನು ಕಂಡು ಸಂತೋಷವೆಂಬ ಸಮುದ್ರದಲ್ಲಿ ಮುಳುಗಿ ಪುತ್ರನನ್ನು ಬಾಚಿ ತಬ್ಬಿಕೊಂಡು-ಅಯ್ಯೋ ನನ್ನ ಪ್ರಾಣಪದಕವೇ ! ನೀನು ಜೀವಸಹಿತ ಬಂದೆಯಾ ! ನೀನು ಇನ್ನೊಂದು ಸಾರಿ ಹುಟ್ಟಿದ ಹಾಗಾಯಿತಲ್ಲಾ ! ನನಗೆ ಪುತ್ರದಾನವನ್ನು ಮಾಡಿದ ಈ ಮಹಾ ಪುರುಷ ಯಾರು ? ಯಚ್ಛೇಶ್ವರನೇ ನನ್ನ ಮಗನನ್ನು ತಂದು ಕೊಟ್ಟ ಹಾಗಾಯಿತು. ನೀನು ಯಾರು ? ಎಂದು ಕತ್ತೆತ್ತಿ ನೋಡಿದನು. ಮಗುವನ್ನು ಎತ್ತಿಕೊಂಡು ಬಂದವನು ಸಾಧಾರಣ ಬಟ್ಟೆಗಳನ್ನು ಹಾಕಿಕೊಂಡಿದ್ದರೂ ಬಹು ಗಂಭೀರವಾಗಿ ಕಾಣಿಸುತಿದ್ದನು. ಆ