ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦} ಸುಮತಿ ಮದನಕುಮಾರರ ಚರಿತ್ರೆ ೧೧೯ ಮುದುಕನಾದ ನನ್ನ ತಂದೆಯನ್ನು ಬಿಟ್ಟು ಬಿಡು ಎಂತಲೂ, ಪ್ರಾಯ ದವನಾದ ನನ್ನನ್ನು ಗುಲಾಮನಾಗಿ ಇರಿಸಿಕೊಳ್ಳೆ೦ತಲೂ ಕೇಳಿಕೊಂಡೆ. ಆತನಿಗೆ ದಯ ಹುಟ್ಟಿ ನಮ್ಮ ತಂದೆಯನ್ನು ಬಿಟ್ಟು ಬಿಟ್ಟು, ಆತನಿಗೆ ಬದಲಾಗಿ ನನ್ನ ನ್ನು ಇಟ್ಟು ಕೊಂಡನು. ಆಗಿನಿಂದ ಈ ಊರಿನಲ್ಲಿಯೇ ಇರುತೇನೆ. ನೀನು ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದಕ್ಕೆ ಈಗ ಸಮಯ ಸಿಕ್ಕಿತು, ಎಂದು ಸುಲೇಮಾನನು ಹೇಳಿ ದನು. ಸಾಹುಕಾರನು ಇದನ್ನು ಕೇಳಿ ಸುಲೇಮಾನನ ಒಳ್ಳೆ ಸ್ವಭಾವ ನನ್ನು ಕೊಂಡಾಡಿದನು. ಇಲ್ಲಿಗೆ ಕಥೆ ನಿಂತಿತು. ಇದನ್ನು ಕೇಳಿ, ಸುಮತಿ, ಮದನ, ಇವರಿಬ್ಬರಿಗೂ ಮನಸ್ಸೆಲ್ಲಾ ಬಹು ಕಲಕಿಹೋಯಿತು. ಇವರಿಬ್ಬರಿಗೂ ಕಣ್ಣಿನಲ್ಲಿ ನೀರು ಬಂತು. ಇದನ್ನು ಕಂಡು ರಾಮಜೋಯಿಸನು ಅವರಿಬ್ಬರನ್ನೂ ಕುರಿತು-ಇದು ಇಲ್ಲಿಗೆ ಸಾಕು, ನೀವು ತೋಟದಲ್ಲಿ ಗುಡಿಸಲನ್ನು ಕಟ್ಟು ತಿದ್ದ ಕಡೆಗೆ ನಡೆಯಿರಿ, ಎಂದನು. ಇವರಿಬ್ಬರೂ ಅಲ್ಲಿಗೆ ಹೋಗಿ ನೋಡುವಲ್ಲಿ, ಮೊದಲು ಇವರು ಕಟ್ಟಿದ್ದ ಗುಡಿಸಲು ಬೆಳಗ್ಗೆ ಬೀಸಿದ ವಿಪರೀತವಾದ ಗಾಳಿಗೆ ಬಿದ್ದು ಹೋಗಿತ್ತು, ಮದನನು ಅದನ್ನು ಕಂಡು, ಹೋಯಿತಲ್ಲಾ ಎಂದು ಸ್ವಲ್ಪ ಅಳುವುದಕ್ಕೆ ಮೊದಲು ಮಾಡಿದನು. ಆಗ ಸುಮತಿಯು ಅವನನ್ನು ಕುರಿತು-ಮದನ, ಅಳಬೇಡ, ಇದು ಬಿದ್ದು ಹೋದ್ದು ನಮ್ಮ ತಪ್ಪೋ ಸರಿ, ನಾನು ಹೋಗಿ ಚೆನ್ನಾಗಿ ಪರೀಕ್ಷಿಸಿ ನೋಡಿದೆ. ಕವೆಗಳನ್ನು ನಾವು ಮೇಲೆಯೇ ನೆಟ್ಟು ಇದ್ದೆವು, ಅದು ಭಾರವನ್ನು ತಡೆಯದೇ ಗಾಳಿಗೆ ಬಿದ್ದು ಹೋಯಿತು. ಮನೆಕಟ್ಟು ವವರು ಕವೆಯನ್ನೂ ಕಂಭವನ್ನೂ ಬಹಳ ಬಲವಾಗಿ ನೆಡು ವರು, ನಾವು ಅವರ ಹಾಗೆಯೇ ಬಲವಾಗಿ ಹದಿಯನ್ನು ಹಾಕಿ ಕವೆಯನ್ನು ನೆಟ್ಟು ಮನೆಯನ್ನು ಕಟ್ಟಿದರೆ, ಗಾಳಿ ಬಂತು ಎಂದು ಭಯ ಪಡಬೇಕಾ ದ್ವಿಲ್ಲ. ಹೀಗೆಂದು ಸುಮತಿಯು ಮದನನಿಗೆ ಸಮಾಧಾನ ಹೇಳಿದನು. ಸುಮತಿ ಮದನ ಇಬ್ಬರೂ ಸೇರಿ ಇಳಿಜಾರಾಗಿ ಚಾವಣಿ ಹಾಕಿ ಒಂದು ಮನೆ ಕಟ್ಟಿ ದರು. ಅಷ್ಟು ದಿನಕ್ಕೆ ಇವರು ಬಿತ್ತಿ ಇದ್ದ ಬತ್ತವು ಹೊಡೆ ಹೊರಟಿತ್ತು.