ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಮದನನು ನಿತ್ಯವೂ ಅದನ್ನು ನೋಡಿ ಬಂದು-ನಾವು ಇರುವುದಕ್ಕೆ ಮನೆಯನ್ನು ಕಟ್ಟಿದೆವುಬತ್ತ ಬೆಳೆದ ಕೂಡಲೆ ನಮಗೆ ಆಹಾರವು ಸಿಕ್ಕುವುದು, ಇನ್ನು ಮೇಲೆ ನಾವು ಎಂಥಾ ಕಾಡಿನಲ್ಲಿ ಬೇಕಾದರೂ ಇರ ಬಹುದು, ಅಲ್ಲವೆ ? ಎಂದನು. ಅದಕ್ಕೆ ಸುಮತಿಯು ಈ ಬತ್ರ ಅನ್ನ ವಾಗಬೇಕಾದರೆ ಮಧ್ಯೆ ಮಾಡಬೇಕಾದ ಕೆಲಸ ಇನ್ನು ಯೆಷ್ಟೋ ಇದೆ, ಎಂಬುದಾಗಿ ಉತ್ತರ ಕೊಟ್ಟನು. - ರಾಮ ಜೋಯಿಸನಿಗೆ ಇನ್ನೊ೦ದು ತೋಟವಿತ್ತು, ಅದರಲ್ಲಿ ಹಣ್ಣಿನ ಗಿಡವನ್ನೇ ಹಾಕಿಸಿ ಇದ್ದನು. ಮದನನು ಆಗಾಗ್ಗೆ ಆ ತೋಟಕ್ಕೆ ಹೋಗಿ ಅಲ್ಲಿ ಹಣ್ಣು ಗಳನ್ನು ಕಿತ್ತು ತಿಂದು ಹಲ್ಲಿಗೆ ರುಚಿ ಇಳಿದಿತ್ತು. ಆದ್ದರಿಂದ ಅವನು ಜೋಯಿಸನ ಬಳಿಗೆ ಹೋಗಿ ಜೋಯಿಸರೆ ಇಂಥಾ ಹಣ್ಣಿನ ಗಿಡಗಳನ್ನು ನಮ್ಮ ತೋಟದಲ್ಲಿಯೂ ಹಾಕಿಸಿದರೆ ಬಹು ಚೆನ್ನಾಗಿ ಇರುವುದು, ನನಗೆ ಕೆಲವು ಗಿಡಗಳನ್ನು ಕೊಡಿ, ಎಂದು ಜೋಯಿಸನ ಅಪ್ಪಣೆಯನ್ನು ಪಡೆದು ಸುಮತಿ ಮದನ ಇಬ್ಬರೂ ಸೇರಿ ಅಲ್ಲಿಗೆ ಹೋದರು. ಆ ತೋಟದಲ್ಲಿ ಕೋಮಲವಾಗಿ ಬೆಳೆದಿದ್ದ ಸೊಸಿಗಳನ್ನು ಬುಡಸಹಿತವಾಗಿ ಕಿತ್ತು ಬೇರಿಗೆ ಮಣ್ಣನ್ನು ಕಟ್ಟಿದರು, ಅವುಗಳನ್ನು ತಾವು ಮಾಡಿದ್ದ ತೋಟಕ್ಕೆ ತೆಗೆದುಕೊಂಡು ಹೋಗಿ ನೆಲವನ್ನು ಅಗೆದು ಹಸನುಮಾಡಿ, ಪಾತೀಕಟ್ಟಿ, ಅದರಲ್ಲಿ ಸಣ್ಣ ಗುಳಿಗಳನ್ನು ಮಾಡಿ, ಈ ಸೊಸಿಗಳನ್ನು ನೆಟ್ಟ ರು. ಆ ಸೊಸಿಗಳು ಗಾಳಿಗೆ ಮುರಿದುಹೋಗದಹಾಗೆ ಅವುಗಳ ಮಗ್ಗುಲಲ್ಲಿ ಒಂದೊಂದು ದಬ್ಬೆಯನ್ನು ನೆಟ್ಟು ಸೊಸಿಗೂ ಅದಕ್ಕೂ ಅಳ್ಳಕವಾಗಿ ನಾರನ್ನು ಕಟ್ಟಿ ದರು. ಅದು ಬೇಸಗೇ ಕಾಲವಾದ್ದರಿಂದ ಅವುಗಳಿಗೆ ನೀರಹಾಕುವು ದಕ್ಕೆ ತಕ್ಕ ಏರ್ಪಾಡನ್ನು ಮಾಡಿದರು. ಈ ಹುಡುಗರು ಹೀಗೆ ಕೆಲಸಮಾಡುತ್ತಿರುವುದನ್ನು ನೋಡಿ ರಾಮಜೋಯಿಸನಿಗೆ ಸಂತೋಷವಾಯಿತು. ಅವನು ಅವರನ್ನು ಕುರಿತು-ಗಿಡಗಳಿಗೆ ನೀರ ಹಾಕಿದ ಹೊರತು, ಅವುಗಳು ಬೆಳೆಯುವು ದಿಲ್ಲ. ಉತ್ತರದೇಶದಲ್ಲಿ ಗಂಗಾನದಿ ಎಂಬ ದೊಡ್ಡ ಹೊಳೆ ಇದೆ. ಹೊಳೆ ಬಂದಾಗ ನೀರು ಉಕ್ಕಿ ಹರಿಯುವುದು, ಈ ನೀರು ಅಲ್ಲಲ್ಲಿ