ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸುಮತಿ ಮದನಕುಮಾರರ ಚರಿತ್ರೆ [ಅಧ್ಯಾಯ ಹೀಗೆಂದು ರಾಮಜೋಯಿಸನು ಹೇಳಲು, ಮದನನು-ಇ೦ಥಾ ಕೆಟ್ಟ ಮೃಗವನ್ನು ಒಗ್ಗಿಸಿಕೊಂಡು ಸಾಧುವಾಗಿ ಮಾಡಿಕೊಳ್ಳ ಬಹುದೆ ? ಎಂದು ಕೇಳಲು, ಅದಕ್ಕೆ ರಾಮಜೋಯಿಸನು- ಈ ಲೋಕದಲ್ಲಿ ಒಗ್ಗಿಸಿ ಕೊಂಡು ಸಾಧುವಾಗಿ ಮಾಡಿಕೊಳ್ಳಲು ಆಗದೇ ಇರತಕ್ಕೆ ಜಂತುವೇ ಇಲ್ಲವೆಂದು ನಿನಗೆ ಆಗಲೇ ಹೇಳಿದೇನೆ. ಮಿಸರ್ ದೇಶದಲ್ಲಿ ಮೊಸಳೆ ಗಳನ್ನು ಸಾದುಮಾಡಿ ಸಾಕುತಾರೆ, ಮಕ್ಕಳು ಸಹಿತ ಅವುಗಳ ಸಂಗಡ ಆಡುವುವು, ಎಂದು ಹೇಳಿದನು, ಅದಕ್ಕೆ ಮದನನು ಸಂತೋಷ ಪಟ್ಟು - ಹಾಗಾದರೆ ಲೋಕದಲ್ಲಿರುವ ಜಂತುಗಳನ್ನೆಲ್ಲಾ ನಾನು ನೋಡ ಬೇಕಲ್ಲಾ ಎಂದನು. ಆ ಮಾತಿಗೆ ಜೋಯಿಸನು--ಅಯ್ಯಾ, ಇದು ಸಾಧ್ಯವಲ್ಲ, ಒಂದೊಂದು ದೇಶದಲ್ಲಿ ಒಂದೊಂದು ಬಗೆ ಜಂತುಗಳಿರು ವವು, ಅವುಗಳನ್ನೆಲ್ಲಾ ಒಂದೇ ದೇಶದಲ್ಲಿ ನೋಡುವುದು ಕಷ್ಟ, ಆ ಜಂತುಗಳನ್ನು ಕುರಿತು ಪುಸ್ತಕಗಳನ್ನು ಬರೆದಿದಾರೆ. ಅವುಗಳನ್ನು ನೀನು ಓದಿ ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ನುಡಿದನು. ಹೀಗಿರುವಲ್ಲಿ ಒಂದು ದಿನ ಸುಮತಿಯೂ ಮದನನೂ ಬೆಳಗ್ಗೆ ಹೊತ್ತಿಗೆ ಮುಂಚೆ ಎದ್ದು ದೂರವಾಗಿ ಹೋಗಿ ಸಂಚಾರಮಾಡಿಕೊಂಡು ಬರುವುದಕ್ಕೆ ಹೊರಟರು. ಬರುತಾ ದಾರಿಯಲ್ಲಿ ಸುತ್ತಾಟದಿಂದ ಆಯಾಸದಿಂದ ಒಂದು ಮರದ ನೆರಳಿನಲ್ಲಿ ಕೂತುಕೊಂಡರು. ಬಿಸಿಲಲ್ಲಿ ಅಲೆದು ಮುಖವನ್ನು ಕೆಂಪಗೆ ಮಾಡಿಕೊಂಡು ಹಸಿವಿನಿಂದ ಬಳಲಿ ಇದ್ದ ಈ ಹುಡುಗರನ್ನ ಒಬ್ಬ ಶೂದ್ರಿತಿಯು ನೋಡಿ ಮರುಕದಿಂದ ಇವರ ಬಳಿಯಲ್ಲಿ ಬಂದು ನಿಂತು-ಅಪ್ಪಾ ಹುಡುಗರಾ, ನೀವು ಯಾಕೆ ಇಷ್ಟು ಬಳಲಿಕೆಯಿಂದ ಇಲ್ಲಿ ಕೂತಿದೀರಿ ? ಹೊತ್ತಾಯಿತು. ಹೊಟ್ಟೆ ಯಲ್ಲಿ ಅನ್ನ ವಿಲ್ಲ. ಅಗೋ ಅಲ್ಲಿ ಕಾಣುವುದೇ ನಮ್ಮ ಊರು, ಇಲ್ಲಿಗೆ ಆಳು ಕೂಗಿದೆ. ನೀವು ಅಲ್ಲಿಗೆ ಬಂದು ಸ್ವಲ್ಪ ಫಲಾಹಾರವನ್ನು ಮಾಡಿ ಮುಂದಕ್ಕೆ ಹೊರಡಿ, ಎಂದಳು, ಈ ಹುಡುಗರು ಇಬ್ಬರೂ ಅದಕ್ಕೆ ಒಪ್ಪಿ, ಆ ಶೂದ್ರಳ ಮನೆಗೆ ಹೋದರು, ಅವಳು ತನ್ನ ಹಿತ್ತಲ ಕಡೆಗೆಹೋಗಿ ಎರಡು ಸವತೇಕಾಯಿಯನ್ನು ಕಿತ್ತು ತಂದು ಈ ಹುಡುಗರಿಗೆ ಕೊಟ್ಟು, ತಿನ್ನಿ ಎಂದು ಹೇಳಿದಳು, ಒಂದು ಚಿಕ್ಕ ಪಂಚಪಾತ್ರೆಯಲ್ಲಿ ಹಾಲನ್ನು