ಪುಟ:ಸಮತಿ ಮದನಕುಮಾರರ ಚರಿತ್ರ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೩ ೧೦] ಸುಮತಿ ಮದನಕುಮಾರರ ಚರಿತ್ರೆ ತಂದು ಇವರಿಬ್ಬರಿಗೂ ಕೊಟ್ಟಳು, ಅದನ್ನೆಲ್ಲಾ ತೆಗೆದುಕೊಂಡು ದಣು ವನ್ನು ಆರಿಸಿಕೊಂಡು, ಸುಮತಿಯೂ ಮದನ ಕುಮಾರನೂ ಮನೆಗೆ ಹೊರಡಬೇಕೆಂದು ಎದ್ದರು. ಅಷ್ಟರಲ್ಲಿಯೇ ಬಾಗಿಲ ಹತ್ತಿರ ಸಣ್ಣ ಪುರಲೇ ಕಡ್ಡಿಯೂ ತೆ೦ಗಿನಸೋಗೆಯೂ ಸ್ವಲ್ಪ ಸ್ವಲ್ಪ ಹಾಕಿತ್ತು. ಮದನನು ಅದು ಯಾತಕ್ಕೆಂದು ಕೇಳಿದನು. ಆ ಗರತಿಯು ಅಪ್ಪಾ, ಇದು ಹಿಟ್ಟು ಬೇಯಿಸಿಕೊಳ್ಳಲು ಉರಿಗೆ ಬೇಕಾಗುತ್ತೆ, ಎಂದಳು. ಆ ಮಾತಿಗೆ ಮದನನು-ಅಯ್ಯೋ ! ನಮ್ಮ ಮನೆಯಲ್ಲಿ ದಿವಸಕ್ಕೆ ಒಂದು ಬಂಡಿ ಕಟ್ಟಿಗೆಯನ್ನು ಒಲೆಗೆ ಹಾಕುತ್ತಾರೆ. ಈ ಪುರಲೆ ಯಾತಕ್ಕಾದೀತು ? ಎಂದನು. ಕೂಡಲೇ ಆ ಗೌಡಿಯು--ಸ್ವಾಮಿ ನೀವು ದೊಡ್ಡವರು. ಬೇಕಾದ ಭಾಗ್ಯವಿರಬಹುದು, ಬೇಕುಬೇಕಾದ ಅಡಿಗೆಯನ್ನು ನಿಮ್ಮ ಮನೆಯಲ್ಲಿ ಮಾಡುತಿರಬಹುದು, ಆದ್ದರಿಂದ ಅಷ್ಟು ಸವುದೆ ಬೇಕಾಗುವುದು, ನಾವು ಬಡವರು, ಒ೦ದು ಮಡಕೆ ಹಿಟ್ಟು ಒಂದು ಮಡಕೆ ಉದಕ ಆದರೆ ಸಾಕು, ಅಷ್ಟಕ್ಕೆ ಈ ಉರಿ ಬೇಕಾದಷ್ಟಾಯಿತು, ಎಂದಳು. ಮದನನು ಅದನ್ನು ಕೇಳಿ ಅವರು ಬಡವರೆಂದು ತಿಳಿದು ತನ್ನ ಅಂಗಿ ಜೇಬಿನಿಂದ ಒಂದು ಹಣವನ್ನು ತೆಗೆದು - ಅಮ್ಮ, ನೀನು ಕೊಟ್ಟ ಹಾಲಿನಿಂದಲೂ, ಸವತೆಕಾಯಿ ನಿಂದಲೂ ನಮಗೆ ಹಸಿವು ಕಡಮೆಯಾಯಿತು. ನಿನ್ನ ಉಪಕಾರಕ್ಕೆ ಈ ಹಣವನ್ನು ಹಿಡಿ, ಎನಲು, ಆಕೆಯು-ಅ ಪ್ಪಾ, ನಮ್ಮ ಮನೆಯಲ್ಲಿ ನೀವು ಊಟಮಾಡತಕ್ಕವರಲ್ಲ. ಇಲ್ಲದಿದ್ದರೆ ನಾವು ತಿನ್ನುವ ಹಿಟ್ಟನ್ನೆ ನಿಮಗೂ ಇನ್ನು ತಿದ್ದೆ, ನಮಗೆ ಹಣಕಾಸು ಏನೂ ಬೇಡ, ನಾನೇನೋ ಬಡವರು, ಆದರೆ ಇಷ್ಟು ಹಾಲು ಕೊಟ್ಟ ಮಾತ್ರಕ್ಕೆ ನಿಮ್ಮಿಂದ ಹಣ ವನ್ನು ಇಸಕೊಳ್ಳಲೆ ? ನಾನು ಒಲ್ಲೆ ಎಂದಳು. ಇವರು ಹೀಗೆ ಮಾತನಾಡುತಿರುವ ಸಮಯಕ್ಕೆ ಸರಿಯಾಗಿ ದವಾಲಿಯನ್ನು ಹಾಕಿಕೊಂಡಿರುವ ಇಬ್ಬರು ಜವಾನರು ಬಂದರು. ಅವರ ಹಿಂದೆ ಒಬ್ಬ ಬ್ರಾಹ್ಮಣ ಕಾಗದ ಕಡ್ಡಿಯನ್ನು ಹಿಡಿದುಕೊಂಡು ಬಂದನು, ನಿನ್ನ ಮನೆಯನ್ನು ಜಪ್ತಿ ಮಾಡಿ ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಹೋಗುವುದಕ್ಕೆ ಬಂದಿದೇವೆ. ನಿನ್ನ ಗಂಡ ಎಲ್ಲಿ ?